What is mind

ಚಿತ್ತವು ಅಥವಾ ಮನಸ್ಸು "ಯಾವುದೇ ವಸ್ತುವಿನ" ವೈಯಕ್ತಿಕವಾದ, ವ್ಯಕ್ತಿನಿಷ್ಠವಾದ ಅನುಭವವಾಗಿದ್ದು, ಅದು ಕ್ಷಣದಿಂದ ಕ್ಷಣಕ್ಕೆ ಬದಲಾಗುತ್ತಿರುತ್ತದೆ. 

“ಚಿತ್ತ" ದ ಪರಿಕಲ್ಪನೆಯು ಅಸ್ಪಷ್ಟವಾಗಿದ್ದು, ವಿಭಿನ್ನ ಭಾಷೆಗಳಲ್ಲಿ ಅದರ ವಿಭಿನ್ನವಾದ ಪರಿಕಲ್ಪನೆಗಳನ್ನು ಕಾಣಬಹುದು. ಬೌದ್ಧ ಧರ್ಮದಲ್ಲಿ ಮನಸ್ಸನ್ನು ಸಂಸ್ಕೃತ ಪದವಾದ ‘ಚಿತ್ತ’ ಎಂದು ಕರೆಯಲಾಗಿದ್ದು, ಇದು ವ್ಯಾಪಕವಾದ ಅರ್ಥವನ್ನು ಹೊಂದಿರುತ್ತದೆ. ಇದು ಇಂದ್ರಿಯ ಗ್ರಹಿಕೆ, ಮೌಖಿಕ ಮತ್ತು ಅಮೂರ್ತ ಚಿಂತನೆ, ಭಾವನೆಗಳು, ಸಂತೋಷ ಮತ್ತು ಅಸಂತೋಷದ ಭಾವನೆಗಳು, ಗಮನ, ಏಕಾಗ್ರತೆ, ಬುದ್ಧಿವಂತಿಕೆ ಮತ್ತು ಇನ್ನೂ ಹೆಚ್ಚಿನವುಗಳನ್ನು ಒಳಗೊಂಡಿರುತ್ತದೆ. ಬೌದ್ಧಧರ್ಮದಲ್ಲಿ ಚಿತ್ತದ ಬಗ್ಗೆ ಮಾತನಾಡುವಾಗ, ಅದು ಪ್ರತಿಯೊಂದು ರೀತಿಯ ಮಾನಸಿಕ ಚಟುವಟಿಕೆಯನ್ನು ಒಳಗೊಂಡಿರುತ್ತದೆ. 

ಇಲ್ಲ ನಾವು ಮೆದುಳು, ನರಮಂಡಲ, ಹಾರ್ಮೋನುಗಳು ಅಥವಾ ರಾಸಾಯನಿಕ ಅಥವಾ ವಿದ್ಯುತ್ ಚಟುವಟಿಕೆಗಳಂತಹ ಭೌತಿಕ ಆಧಾರಗಳ ಬಗ್ಗೆ ಮಾತನಾಡುತ್ತಿಲ್ಲ. ಬೌದ್ಧಧರ್ಮವು ಇವುಗಳನ್ನು ತಿರಸ್ಕರಿಸುತ್ತಿಲ್ಲ, ಏಕೆಂದರೆ ಅವು ಅಸ್ತಿತ್ವದಲ್ಲಿವೆ ಮತ್ತು ಸಮಗ್ರವಾಗಿ ತೊಡಗಿಸಿಕೊಂಡಿವೆ. ಮಿದುಳನ್ನು ಆಕ್ರಮಿಸಿಕೊಂಡು, ಅದರ ಚಟುವಟಿಕೆಯನ್ನು ಉತ್ಪಾದಿಸುವ ಕೆಲವು ಅಭೌತಿಕ "ವಸ್ತು" ವನ್ನೂ ಸಹ ಚಿತ್ತ ಉಲ್ಲೇಖಿಸುವುದಿಲ್ಲ. ಇದಲ್ಲದೆ, ಬೌದ್ಧಧರ್ಮವು ಸಾಮೂಹಿಕ ಸುಪ್ತಾವಸ್ಥೆ ಅಥವಾ ಸಾರ್ವತ್ರಿಕ ಚಿತ್ತದ ಸಿದ್ಧಾಂತವನ್ನು ಪ್ರತಿಪಾದಿಸುವುದಿಲ್ಲ. 

ಮಾನಸಿಕ ಚಟುವಟಿಕೆ ಎಂದರೇನು

ಮನಸ್ಸು ಮತ್ತು ಮಾನಸಿಕ ಚಟುವಟಿಕೆಯು ಒಂದು ವಸ್ತುವಿನ ವೈಯಕ್ತಿಕವಾದ, ವ್ಯಕ್ತಿನಿಷ್ಠವಾದ ಅನುಭವವಾಗಿದ್ದರೆ, ನಾವು ಕೋಪಗೊಳ್ಳುವಂತಹ ಅನುಭವವನ್ನು ಹೇಗೆ ಅರ್ಥೈಸಬಹುದು? ಇದು ಕೋಪದ ಹುಟ್ಟು ಮತ್ತು ಅದರ ಅನುಭವದ ಏಕಕಾಲದ ಸಂಭವನೆಯಾಗಿರುತ್ತದೆ. ಒಂದು ಅನುಭವದ ಹರಿವಿನಲ್ಲಿನ ಒಂದು ಘಟನೆಯನ್ನು ಅವೆರಡು ಒಟ್ಟಾಗಿ ವಿವರಿಸುತ್ತವೆ. ಆದರೆ ಅದು ಯಾರ ಅನುಭವ? ನಾನು ಕೋಪಗೊಂಡರೆ, ಅದು ನನ್ನ ಅನುಭವ, ನಿಮ್ಮದಲ್ಲ. ಆದರೆ "ಮನಸ್ಸು" ಎಂಬ ಗಣಕದಲ್ಲಿ ಕೋಪದ ಗುಂಡಿಯನ್ನು ಒತ್ತಲು ಪ್ರತ್ಯೇಕವಾದ ‘ನಾನು’ ಇರುವುದಿಲ್ಲ - ನಾವು ಕೇವಲ ಅನುಭವಿಸುವ ಘಟನೆಯ ಭಾಗವಾಗಿರುತ್ತೇವೆ.

ನಾವು ಏನನ್ನಾದರೂ ನೋಡಿದಾಗಲೂ ಸಹ ಇದೇ ರೀತಿಯಾಗಿರುತ್ತದೆ, ಉದಾಹರಣೆಗೆ, ಒಂದು ಸೇಬನ್ನು ತೆಗೆದುಕೊಳ್ಳಿ. ಬೆಳಕಿನ ಕಿರಣಗಳು ನಮ್ಮ ಕಾರ್ನಿಯಾಗಳ ಮೂಲಕ ನಮ್ಮ ಕಣ್ಣುಗಳನ್ನು ಪ್ರವೇಶಿಸುತ್ತವೆ, ರೆಟಿನಾಗಳ ಫೋಟೊರೆಸೆಪ್ಟರ್ ಕೋಶಗಳನ್ನು ಭೇಟಿಯಾಗುತ್ತವೆ ಎಂಬ ವೈಜ್ಞಾನಿಕ ತಿಳುವಳಿಕೆಯಿದೆ. ಇದು ಮೆದುಳಿಗೆ ಆಪ್ಟಿಕಲ್ ಮಾಹಿತಿಯನ್ನು ರವಾನಿಸುವ ವಿದ್ಯುತ್ ಪ್ರಚೋದನೆಗಳನ್ನು ಪ್ರಚೋದಿಸುತ್ತದೆ, ಮತ್ತು ಅಲ್ಲಿ ಅದನ್ನು ಸಂಸ್ಕರಿಸಲಾಗುತ್ತದೆ. ಇದರ ವ್ಯಕ್ತಿನಿಷ್ಠ ಅನುಭವವು ಸೇಬಿನ ಮಾನಸಿಕ ಹೊಲೊಗ್ರಾಮ್ ಉದ್ಭವವಾಗಿರುತ್ತೆದೆ – ‘ನೋಡುವುದು’ ಎಂಬುದರ ಅರ್ಥ ಇದಾಗಿರುತ್ತದೆ. ಆದರೆ “ಮನಸ್ಸಿನಲ್ಲಿ ಏನೋ ಯೋಚನೆಯಿದೆ” ಎಂಬ ಅಭಿವ್ಯಕಿಯನ್ನು ಸೂಚಿಸುವಂತೆ, ಈ ಸೇಬಿನ ಹೊಲೊಗ್ರಾಮ್ ಹುಟ್ಟಲು, ಮನಸ್ಸು ಮಿದುಳಿನಲ್ಲಿರುವ ಖಾಲಿ ಜಾಗವಾಗಿರುವುದಿಲ್ಲ. 

ಮಾನಸಿಕ ಹೊಲೊಗ್ರಾಮ್‌ಗಳು, ನಮ್ಮ ಕಲ್ಪನೆ ಮತ್ತು ಕನಸುಗಳಲ್ಲಿಯೂ ಸಹ ಶಬ್ದಗಳು, ವಾಸನೆಗಳು, ಅಭಿರುಚಿಗಳು ಮತ್ತು ದೈಹಿಕ ಸಂವೇದನೆಗಳ ಪ್ರಾತಿನಿಧ್ಯಗಳಾಗಿರಬಹುದು. ಮಾನಸಿಕ ಹೊಲೊಗ್ರಾಮ್‌ನಿಂದ ಉದ್ಭವವಾದ ಚಿತ್ರವು, ಮೆದುಳಿನ ವಿವಿಧ ಭಾಗಗಳಿಂದ ಹಾರ್ಮೋನುಗಳ ಸ್ರವಿಸುವಿಕೆಯ ಆಧಾರದಿಂದ, ಭಾವನೆಗಳ ಮತ್ತು ಸಂತೋಷ ಅಥವಾ ಅಸಂತೋಷದ ಮಟ್ಟವನ್ನು ವಿವರಿಸಬಹುದು. ಪ್ರತಿಯೊಂದು ಕ್ಷಣದಲ್ಲಿ, ನಮ್ಮ ಮಾನಸಿಕ ಹೊಲೊಗ್ರಾಮ್‌ಗಳ ವಿಷಯವು ಅನೇಕ ಅಂಶಗಳಿಂದ ಕೂಡಿದ ಒಂದು ಸಂಕೀರ್ಣವಾಗಿರುತ್ತದೆ: ದೃಷ್ಟಿ ಅಥವಾ ಆಲೋಚನೆಯಂತಹ ಅಂಶ, ಭಾವನೆಗಳ ಮಿಶ್ರಣ, ಜೊತೆಗೆ ಒಂದು ಮಟ್ಟದ ಸಂತೋಷ ಅಥವಾ ಅಸಂತೋಷ. 

ನರವಿಜ್ಞಾನ ಮತ್ತು ಬೌದ್ಧಧರ್ಮ 

1987 ರಲ್ಲಿ ದಲೈ ಲಾಮಾ ಮತ್ತು ಚಿಲಿಯ ನರವಿಜ್ಞಾನಿ ಫ್ರಾನ್ಸಿಸ್ಕೊ ವರೆಲಾ ಅವರು ಮೈಂಡ್ ಅಂಡ್ ಲೈಫ್ ಇನ್ಸ್ಟಿಟ್ಯೂಟ್ ಅನ್ನು ಉದ್ಘಾಟಿಸಿದಾಗಿನಿಂದ, ವಿಜ್ಞಾನಿಗಳ ಅಂತರರಾಷ್ಟ್ರೀಯ ತಂಡಗಳು ಮತ್ತು ನಿಪುಣ ಬೌದ್ಧ ಗುರುಗಳು ಮನಸ್ಸು ಮತ್ತು ಮೆದುಳಿನ ನಡುವಿನ ಇಂಟರ್ಫೇಸ್ ಅನ್ನು ಅನ್ವೇಷಿಸುತ್ತಿವೆ. ನರವಿಜ್ಞಾನಿಗಳು ಅನನುಭವಿ ಮತ್ತು ಅನುಭವಿ ಧ್ಯಾನಸ್ಥರ ಮೆದುಳಿನ ಚಟುವಟಿಕೆಯ ಮೇಲ್ವಿಚಾರಣೆಯನ್ನು ನಡೆಸಿ, ನಿರಂತರ ಧ್ಯಾನವು ಮೆದುಳಿನ ನ್ಯೂರೋಪ್ಲಾಸ್ಟಿಸಿಟಿಯ ಮೇಲೆ ಪರಿಣಾಮ ಬೀರುತ್ತದೆ, ಹೊಸ ನರ ಮಾರ್ಗಗಳನ್ನು ರೂಪಿಸುತ್ತದೆ, ಅದರಿಂದ ಏಕಾಗ್ರತೆ ಮತ್ತು ಸಹಾನುಭೂತಿಯಂತಹ ಸಕಾರಾತ್ಮಕ ಭಾವನೆಗಳನ್ನು ಸೃಷ್ಟಿಸಲು ಸುಲಭವಾಗುತ್ತದೆ ಎಂದು ಕಂಡುಹಿಡಿದಿದ್ದಾರೆ. 

ಇಲ್ಲಿಯವರೆಗೆ, ಪಾಶ್ಚಿಮಾತ್ಯ ವಿಜ್ಞಾನ ಮತ್ತು ಬೌದ್ಧಧರ್ಮದ ಸಂಶೋಧನೆಗಳು ಒಂದಕ್ಕೊಂದು ಪೂರಕವಾಗಿವೆ ಮತ್ತು ಪುಷ್ಟೀಕರಿಸಿವೆ. ಜೊತೆಗೆ ಬೌದ್ಧ ವೈದ್ಯರು ಮತ್ತು ಪ್ರಖ್ಯಾತ ವಿಜ್ಞಾನಿಗಳ ನಡುವಿನ ಜಂಟಿ ಉದ್ಯಮಗಳು, ದಲೈ ಲಾಮಾ ಅವರು ಕರೆನೀಡುವ 21ನೇ ಶತಮಾನದ ಬೌದ್ಧಧರ್ಮದ ಅತ್ಯಂತ ಶ್ರೇಷ್ಠ ಗುರುತುಗಳಾಗಿವೆ. 

ಜೀವನವನ್ನು ಅನುಭವಿಸುವ ಮಾನಸಿಕ ಚಟುವಟಿಕೆಯೇ ಬೌದ್ಧಧರ್ಮದಲ್ಲಿನ "ಚಿತ್ತ” ವಾಗಿದೆ. ಈ ಚಟುವಟಿಕೆಯು ಪ್ರತಿ ಕ್ಷಣವೂ ಬದಲಾಗುತ್ತಿರುತ್ತದೆ ಮತ್ತು ಪ್ರತಿಸಲವೂ ವಿವಿಧ ಮಾನಸಿಕ ಅಂಶಗಳಿಂದ ಕೂಡಿರುತ್ತದೆ. ನಾವು ಜೀವನದ ಪರದಾಟಗಳ ಬಲೆಯಲ್ಲಿ ಸಿಲುಕಿರುವ ಬಲಿಪಶುಗಳಲ್ಲ, ಬದಲಿಗೆ ಜೀವನದಲ್ಲಿ ಹೇಗೆ ಮತ್ತು ಏನನ್ನು ಅನುಭವಿಸುತ್ತೇವೆ ಎಂಬುದರಲ್ಲಿ ನಾವು ಅವಿಭಾಜ್ಯ ಪಾತ್ರವನ್ನು ವಹಿಸುತ್ತೇವೆ. ನಮ್ಮ ಮನಸ್ಸನ್ನು ತರಬೇತುಗೊಳಿಸುವ ಮೂಲಕ, ನಾವು ಆಮೂಲಾಗ್ರವಾಗಿ ನಮ್ಮ ಅನುಭವಗಳನ್ನು ಉತ್ತಮವಾಗಿಸಬಹುದು ಮತ್ತು ನಿರಂತರ ಪ್ರಯತ್ನದಿಂದ, ಈ ಸಕಾರಾತ್ಮಕ ಬದಲಾವಣೆಯು ಸರಾಗವಾಗಬಹುದು.

Top