ಪ್ರಚೋದನೆಗಳನ್ನು ಮೀರಿಸುವುದು

ಏನನ್ನಾದರೂ ಮಾಡುವ ಅಥವಾ ಹೇಳುವ ಅನಿಸಿಕೆ ಮತ್ತು ಆ ಕಾರ್ಯವನ್ನು ಪ್ರಚೋದಿತವಾಗಿ ಅನುಸರಿಸುವ ನಡುವಿನ ಅಂತರದಲ್ಲಿ, ಅದರ ಪರಿಣಾಮಗಳ ಮೌಲ್ಯಮಾಪನವನ್ನು ಮಾಡುವ ಮತ್ತು ಕೆಟ್ಟ ಅಭ್ಯಾಸಗಳಿಗೆ ಗುಲಾಮರಾಗದಿರುವಂತಹ ಅವಕಾಶವಿದೆ.
Meditations conquering compulsiveness

ವಿವರಣೆ 

ಕರ್ಮವು ನಮ್ಮ ಪ್ರಚೋದನೆಗಳಿಗೆ ಸಂಬಂಧಿಸಿರುತ್ತದೆ. ಇದು, ಕೆಲವು ಗೊಂದಲದ ಭಾವನೆ ಅಥವಾ ವರ್ತನೆಯಿಂದ ಪ್ರೇರೇಪಿಸಲ್ಪಟ್ಟ ಬಲವಾದ ಪ್ರಚೋದನೆಗಳು ಅಥವಾ ಮಾನಸಿಕ ಆವೇಗಗಳನ್ನು ಸೂಚಿಸುತ್ತದೆ, ಇವು ಒಂದು ಮ್ಯಾಗ್ನೆಟ್ನಂತೆ, ಏನನ್ನಾದರೂ ಮಾಡುವಲ್ಲಿ ತೊಡಗಿಸಿಕೊಳ್ಳಲು, ಏನನ್ನಾದರೂ ಹೇಳಲು ಅಥವಾ ಏನನ್ನಾದರೂ ಯೋಚಿಸುವಂತೆ ಮಾಡುತ್ತವೆ. 

ಈ ಬಲವಾದ ಆವೇಗಗಳನ್ನು ಅನುಸರಿಸಿ ಪ್ರಚೋದಿತವಾಗಿ ಕಾರ್ಯನಿರ್ವಹಿಸುವುದರಿಂದ ದೈಹಿಕ, ಮೌಖಿಕ ಅಥವಾ ಮಾನಸಿಕ ಕ್ರಿಯೆಗಳನ್ನು ಬಲವಂತವಾಗಿ ಪುನರಾವರ್ತಿಸುವ ಪ್ರವೃತ್ತಿಯನ್ನು ನಿರ್ಮಿಸುತ್ತದೆ. ಅನೇಕ ರೀತಿಯ ಸಂದರ್ಭಗಳು ಉದ್ಭವಿಸಿದಾಗ – ಆಂತರಿಕವಾಗಿರುವ ಗೊಂದಲದ ಭಾವನೆಗಳಿರಬಹುದು ಅಥವಾ ಬಾಹ್ಯವಾದ ನಮ್ಮ ಪ್ರಸ್ತುತ ಸಂದರ್ಭಗಳು ಅಥವಾ ನಮ್ಮ ಜೊತೆಗಿರುವ ಜನರಾಗಿರಬಹುದು ¬ ಈ ಪ್ರವೃತ್ತಿಗಳು ಆ ಕ್ರಿಯೆಯನ್ನು ಪುನರಾವರ್ತಿಸುವ ಭಾವನೆಗೆ ಕಾರಣವಾಗುತ್ತವೆ. ತದನಂತರ, ಸಾಮಾನ್ಯವಾಗಿ, ನಮ್ಮ ಕ್ರಿಯೆಯ ಪರಿಣಾಮಗಳನ್ನು ಆಲೋಚಿಸದೆ, ನಾವು ಆ ಕ್ರಿಯೆಗಳನ್ನು ಬಲವಂತವಾಗಿ ಪುನರಾವರ್ತಿಸುತ್ತೇವೆ. ಈ ರೀತಿಯ ಆವೇಗದ ನಡವಳಿಕೆಯು, ಅತೃಪ್ತಿ ಅಥವಾ ಎಂದಿಗೂ ತೃಪ್ತಿಪಡದಿರುವ ರೀತಿಯ ಸಂತೋಷದ ಭಾವನೆಗೆ ಕಾರಣವಾಗುತ್ತದೆ. ಕರ್ಮವು ಅಂತಹ ನಡವಳಿಕೆಯ ಹಿಂದಿರುವ ಬಲವಾದ ಪ್ರಚೋದನೆಗಳು ಮತ್ತು ಆವೇಗವಾಗಿರುತ್ತದೆ. 

ಇದು ಸಮಸ್ಯೆಗಳಿಗೆ ಕಾರಣವಾಗುತ್ತದೆ, ಏಕೆಂದರೆ ಗೊಂದಲಮಯ ಭಾವನೆಗಳು ಈ ಕೆಳಗಿನ ಮಾದರಿಗಳಿಗೆ ಕಾರಣವಾಗುತ್ತವೆ: 

  • ಪ್ರಚೋದಿತ ವರ್ತನೆಯ ಮಾದರಿಗಳು – ಯಾವುದೂ ನಮ್ಮನ್ನು ತಪ್ಪಿಸಬಾರದೆಂಬ ಯೋಚನೆಗೆ ಬಂಧಿಯಾಗುವುದು ಮತ್ತು ನಮ್ಮ ಫೋನ್‌ಗಳಲ್ಲಿ ನಮ್ಮ ಮೆಸೇಜ್ ಮತ್ತು ಫೇಸ್‌ಬುಕ್ ಅನ್ನು ಚಾಚುತಪ್ಪದೇ ಪರಿಶೀಲಿಸುವುದು; ಅಥವಾ ನಿಷ್ಕಪಟತೆ ಮತ್ತು ಇತರರ ಭಾವನೆಗಳನ್ನು ಪರಿಗಣಿಸದಿರುವುದು ಮತ್ತು ನಮ್ಮ ಪೋಷಕರೊಂದಿಗೆ ಊಟ ಮಾಡುವಾಗ ಮೆಸೇಜ್ ಮಾಡುತ್ತಿರುವುದು; ಅಥವಾ ಟ್ರಾಫಿಕ್‌ನಲ್ಲಿ ಸಿಕ್ಕಿಹಾಕಿಕೊಂಡಾಗ, ಕೋಪದಿಂದ ನಮ್ಮ ಹಾರ್ನ್ ಅನ್ನು ಆವೇಗದೊಂದಿಗೆ ಬೀಪ್ ಮಾಡುವುದು ಮತ್ತು ಇತರರ ದಾರಿಗೆ ಅಡ್ಡವಾಗಲು ಪ್ರಯತ್ನಿಸಲು ಕಾರಣವಾಗುತ್ತದೆ. 
  • ಪ್ರಚೋದಿತ ಭಾಷಾ ಮಾದರಿಗಳು – ಅತೃಪ್ತಿಯು ಪ್ರಚೋದಿತವಾದ ದೂರುಗಳಿಗೆ ಕಾರಣವಾಗುತ್ತದೆ; ಸ್ವಯಂ ಪ್ರಾಮುಖ್ಯತೆ ಮತ್ತು ಹಗೆತನವು ಪ್ರಚೋದಿತವಾದ ಟೀಕೆಗೆ ಮತ್ತು ರೌಡಿಯ ತರಹ ಪ್ರಚೋದಿತವಾಗಿ ಮುಗಿಬೀಳುವ ಹಾಗೆ ಮಾತನಾಡುವುದಕ್ಕೆ ಕಾರಣವಾಗುತ್ತದೆ; ಮತ್ತು ಸಂಕೋಚ ಮತ್ತು ಸ್ವಾಭಿಮಾನ ಕಡಿಮೆಯಾದಲ್ಲಿ, ತುಂಬಾ ಮೃದುವಾಗಿ ಮಾತನಾಡಲು ಕಾರಣವಾಗುತ್ತದೆ. 
  • ಪ್ರಚೋದಿತ ಆಲೋಚನಾ ಮಾದರಿಗಳು - ಆವೇಗಯುಕ್ತ ಚಿಂತೆಗೆ ಕಾರಣವಾಗುವ ಅಭದ್ರತೆ; ವಾಸ್ತವಿಕತೆಯ ಬಗ್ಗೆಗಿರುವ ನಿಷ್ಕಪಟತೆ ಅಥವಾ ವಾಸ್ತವವನ್ನು ತಪ್ಪಿಸುವ ಬಯಕೆಯು ಪ್ರಚೋದಿತ ಹಗಲುಗನಸಿಗೆ ಕಾರಣವಾಗುತ್ತದೆ. 

ಈ ಮೇಲಿನ ಉದಾಹರಣೆಗಳು ಅಸಂತೋಷಕ್ಕೆ ಕಾರಣವಾಗುವ ಎಲ್ಲಾ ಸ್ವಯಂ-ವಿನಾಶಕಾರಿ ಪ್ರಚೋದಿತ ನಡವಳಿಕೆಯ ಮಾದರಿಗಳಾಗಿವೆ. ಆದರೆ ಕೆಲವು ಲಾಭದಾಯಕವಾದ ಪ್ರಚೋದಿತ ನಡೆವಳಿಕೆಗಳೂ ಇವೆ - ಪರಿಪೂರ್ಣತೆ, ಇತರರ ತರ್ಕವನ್ನು ಪ್ರಚೋದಿತವಾಗಿ ಸರಿಪಡಿಸುವುದು, "ಇಲ್ಲ" ಎಂದು ಎಂದಿಗೂ ಹೇಳಲು ಸಾಧ್ಯವಾಗದ ಒಳ್ಳೆಯ ಜನರು, ದುಡಿಮೆಯ ಗೀಳಿರುವವರು ಇತ್ಯಾದಿ. ಇವುಗಳ ಹಿಂದೆ ಇತರರಿಗೆ ಸಹಾಯ ಮಾಡುವ ಅಥವಾ ಒಳ್ಳೆಯದನ್ನು ಮಾಡುವ ಆಶಯದಂತಹ ಸಕಾರಾತ್ಮಕ ಭಾವನೆಗಳ ಅಂಶವಿದ್ದರೂ, ಅವುಗಳ ಹಿಂದೆ "ನಾನು" - "ನಾನು" ಉತ್ತಮವಾಗಿರಬೇಕು, "ನಾನು" ಅಗತ್ಯ, "ನಾನು" ಪರಿಪೂರ್ಣವಾಗಿರಬೇಕು," ಎಂಬುದರ ಚಿಂತೆ ಮತ್ತು ಹಣದುಬ್ಬರ ಇರುವುದರಿಂದ, ನಾವು ಏನನ್ನಾದರೂ ಚೆನ್ನಾಗಿ ಮಾಡಿದಾಗ, ನಾವು ತಾತ್ಕಾಲಿಕವಾಗಿ ಸಂತೋಷವಾಗಿರಬಹುದು, ಆದರೆ ಆ ಸಂತೋಷವು ಉಳಿಯುವುದಿಲ್ಲ ಮತ್ತು ಅದೊಂದು ಸಮಸ್ಯೆಯಾಗಿದೆ. ಉದಾಹರಣೆಗೆ, ನಾವು ಎಂದಿಗೂ ಅರ್ಹರಾಗುವುದಿಲ್ಲ ಎಂದು ನಾವು ಭಾವಿಸುತ್ತೇವೆ ಅಥವಾ ನಮ್ಮ ಯೋಗ್ಯತೆಯನ್ನು ಸಾಬೀತುಪಡಿಸಲು ನಾವು ಹೊರಗೆ ಹೋಗಿ ಇನ್ನೂ ಒಳ್ಳೆಯ ಕಾರ್ಯವನ್ನು ಮಾಡಬೇಕು ಎಂದು ಭಾವಿಸುತ್ತೇವೆ. 

ಮೊದಲಾಗಿ ನಾವು ಶಾಂತಗೊಳ್ಳಬೇಕು ಮತ್ತು ಸಾವಕಾಶಗೊಳ್ಳಬೇಕು. ಆಗ ಮಾತ್ರ ನಮಗೆ ಏನನ್ನಾದರೂ ಮಾಡುವ ಅಥವಾ ಹೇಳುವ ಬಯಕೆ ಮತ್ತು ನಾವು ಅದನ್ನು ಪ್ರಚೋದಿತವಾಗಿ ಮಾಡುವುದರ ನಡುವಿನ ವ್ಯತ್ಯಾಸವನ್ನು ಗುರುತಿಸಬಹುದು. ಇವುಗಳ ನಡುವೆ ಮೌಲ್ಯಮಾಪನ ಮಾಡಬಹುದಾದ ಒಂದು ಅಂತರವಿರುತ್ತದೆ - ಇದರ ಹಿಂದೆ ಯಾವುದಾದರೂ ಗೊಂದಲಮಯ ಭಾವನೆಗಳಿವೆಯೇ, ಅಸಾಧ್ಯವಾದದ್ದನ್ನು (ಉದಾ: ಯಾವಾಗಲೂ ಪರಿಪೂರ್ಣವಾಗಿರುವುದು) ಮಾಡುವಂತೆ ನನ್ನನ್ನು ನಾನೇ ಆವೇಗದಿಂದ ತಳ್ಳುತ್ತಿದ್ದೇನೆಯೇ, ಹಾಗೆ ಮಾಡಲು ಏನಾದರೂ ದೈಹಿಕ ಅವಶ್ಯಕತೆ ಇದೆಯೇ (ತುರಿಸಿಕೊಳ್ಳುವಂತಹ), ಇದು ಪ್ರಯೋಜನಕಾರಿಯೇ ಅಥವಾ ಹಾನಿಕಾರಕವೇ? ಆದ್ದರಿಂದ, ತಾರತಮ್ಯದ ಅರಿವಿನೊಂದಿಗೆ ಮೌಲ್ಯಮಾಪನ ಮಾಡಿ ಮತ್ತು ನಂತರ ಆ ಬಯಕೆಯಂತೆ ಮಾಡುವುದಕ್ಕೆ ಅಥವಾ ಮಾತನಾಡುವುದಕ್ಕೆ ಪ್ರಚೋದನೆಯನ್ನು ಬಿಟ್ಟು ಬೇರೆ ಯಾವುದೇ ಕಾರಣವಿಲ್ಲ ಎಂದು ಅರಿತು ಆ ಭಾವನೆಯನ್ನು ಪ್ರದರ್ಶಿಸದಂತೆ ಸ್ವಯಂ ನಿಯಂತ್ರಣವನ್ನು ಅಭ್ಯಾಸಮಾಡಬೇಕು. ಇದಕ್ಕಾಗಿ ನಾವು ಹೇಗೆ ವರ್ತಿಸುತ್ತೇವೆ, ಮಾತನಾಡುತ್ತೇವೆ ಮತ್ತು ಯೋಚಿಸುತ್ತೇವೆ ಎಂಬುದರ ಕುರಿತು ಗಮನವಿರಬೇಕು, ಅದಕ್ಕಾಗಿ ದಿನವಿಡೀ ಆತ್ಮಾವಲೋಕನ ಮಾಡಬೇಕು ಮತ್ತು ಸ್ವಯಂ ನಿಯಂತ್ರಣವನ್ನು ಅಭ್ಯಾಸಮಾಡಬೇಕು. 

ನಮ್ಮ ಗುರಿಯು ತಾರತಮ್ಯದ ಅರಿವನ್ನು ಬಳಸಿ, ಸಾಧ್ಯವಾದಷ್ಟು ಪ್ರಚೋದಿತವಾಗಿ ನಡೆದುಕೊಳ್ಳದೇ ಇರುವುದಾಗಿರುತ್ತದೆ ಮತ್ತು ನಮ್ಮ ನಡವಳಿಕೆಯ ಹಿಂದೆ ಸಕಾರಾತ್ಮಕ ಭಾವನೆಗಳು ಮತ್ತು ನಮ್ಮ ಬಗ್ಗೆ ಮತ್ತು ವಾಸ್ತವಿಕತೆಯ ಬಗ್ಗೆ ಸಾಧ್ಯವಾದಷ್ಟು ಕಡಿಮೆ ಗೊಂದಲಗೊಳ್ಳುವುದಾಗಿರುತ್ತದೆ. 

ಧ್ಯಾನ 

  • ಉಸಿರಾಟದ ಮೇಲೆ ಕೇಂದ್ರೀಕರಿಸುವ ಮೂಲಕ ಶಾಂತರಾಗಿರಿ. 
  • ಪ್ರಚೋದಿತವಾದ ಕ್ರಿಯೆ, ಮಾತು ಮತ್ತು ಆಲೋಚನೆಯ ಮಾದರಿಗಳನ್ನು ಗುರುತಿಸಲು ಪ್ರಯತ್ನಿಸಿ. 
  • ಅವುಗಳಲ್ಲಿ ಒಂದನ್ನು ಆರಿಸಿ ಮತ್ತು ಅದರ ಹಿಂದೆ ಯಾವುದಾದರೂ ಗೊಂದಲಮಯ ಭಾವನೆ ಇದೆಯೇ ಅಥವಾ ಎಂದಿಗೂ ತಪ್ಪು ಮಾಡದಂತಹ ಅಸಾಧ್ಯವಾದುದರ ಗ್ರಹಿಕೆವಿದೆಯೇ ಎಂದು ವಿಶ್ಲೇಷಿಸಿ. 
  • ನೀವು ಆವೇಗದಿಂದ ವರ್ತಿಸಿದಾಗ, ಅದು ನಿಮ್ಮಲ್ಲಿ ಒಂದು ರೀತಿಯ ಸಮಸ್ಯೆಯನ್ನು ಉಂಟುಮಾಡುವುದಲ್ಲದೆ ಇತರರಿಗೂ ಕೂಡ ಸಮಸ್ಯೆಗಳು ಮತ್ತು ತೊಂದರೆಯುಂಟುಮಾಡುತ್ತದೆ ಎಂಬುದನ್ನು ಗುರುತಿಸಲು ಪ್ರಯತ್ನಿಸಿ. ಮತ್ತು ಇದು ಅತೃಪ್ತಿ ಅಥವಾ ಅತೃಪ್ತಿಕರವಾದ ಅಲ್ಪಾವಧಿಯ ಸಂತೋಷಕ್ಕಾಗಿ ಕಾರಣವಾಗುತ್ತದೆ. 
  • ನೀವು ಏನು ಹೇಳಲು ಮತ್ತು ಮಾಡಲು ಬಯಸುತ್ತೀರಿ ಎಂಬುದರ ಮೌಲ್ಯಮಾಪನ ಮಾಡಲು, ತಾರತಮ್ಯವನ್ನು ಪ್ರಯೋಗಿಸಲು ಪ್ರಯತ್ನಿಸುವಂತೆ ಮತ್ತು ಶಾಂತಿದೇವನ ಸಲಹೆಯಂತೆ, ಅದು ಸ್ವಯಂ-ವಿನಾಶಕಾರಿಯಾದಾಗ ಅಥವಾ ನಿಮ್ಮ ಅಹಂಕಾರವನ್ನು ಬಲಪಡಿಸಿದಾಗ, ಸ್ವಯಂ ನಿಯಂತ್ರಣವನ್ನು ಅಭ್ಯಸಿಸಿ ಮತ್ತು ಮರದ ದಿಮ್ಮಿಯಂತೆ ಉಳಿಯಿರಿ. 
  • ನೀವು ಧ್ಯಾನದಲ್ಲಿರುವಾಗ, ತುರಿಸಿಕೊಳ್ಳುವಂತೆ ಅನಿಸಿದಾಗ ಅಥವಾ ನಿಮ್ಮ ಕಾಲನ್ನು ಚಲಿಸುವಂತೆ ಅನಿಸಿದಾಗ, ಆ ಅನಿಸಿಕೆ ಮತ್ತು ನೀವು ಹಾಗೆ ಮಾಡಬೇಕೋ ಇಲ್ಲವೋ ಎಂದು ನಿರ್ಧರಿಸುವ ನಡುವೆ ಇರುವ ಸಮಯದ ವಿಳಂಬದತ್ತ ಗಮನಹರಿಸಿ. ಅದನ್ನು ಅಭಿನಯಿಸದಿರುವುದರಿಂದ ಆಗುವ ಲಾಭವು ಅದನ್ನು ಅಭಿನಯಿಸುವುದರಿಂದ ಆಗುವ ಪ್ರಯೋಜನವನ್ನು ಮೀರುತ್ತದೆ ಎಂದು ನೀವು ನಿರ್ಧರಿಸಿದಾಗ ನೀವು ಸ್ವಯಂ ನಿಯಂತ್ರಣವನ್ನು ಚಲಾಯಿಸಿ ಮರದ ದಿಮ್ಮಿಯಂತೆ ಉಳಿಯಬಹುದೇ ಎಂದು ನೋಡಿ. 
  • ನಿಮ್ಮ ದೈನಂದಿನ ಜೀವನದಲ್ಲಿನ ಪ್ರಚೋದಿತ ನಡವಳಿಕೆಯ ಪರಿಭಾಷೆಯಲ್ಲಿ, ನೀವು ಏನನ್ನಾದರೂ ಮಾಡಬೇಕೆಂಬ ಬಯಕೆ ಮತ್ತು ನೀವು ಹಾಗೆ ಮಾಡುವುದರ ನಡುವಿನ ಅಂತರದ ಬಗ್ಗೆ ಹೆಚ್ಚು ಜಾಗರೂಕರಾಗಲು ಪ್ರಯತ್ನ ಪಡುವಿರಿ ಎಂದು ನೀವು ನಿರ್ಣಯಿಸಿ, ಮತ್ತು ಹಾಗೆ ಮಾಡದೇ ಇರುವುದರ ಪ್ರಯೋಜನವು ಅದನ್ನು ಮಾಡುವ ಪ್ರಯೋಜನಕ್ಕಿಂತ ಹೆಚ್ಚಾದಾಗ, ನೀವು ಮರದ ದಿಮ್ಮಿಯಂತೆ ಉಳಿಯಲು ಪ್ರಯತ್ನಿಸುತ್ತೀರಿ ಎಂದು ನಿರ್ಣಯಿಸಿ.

ಸಾರಾಂಶ 

ಗೊಂದಲದ ಭಾವನೆಗಳಿಂದ ಉಂಟಾಗುವ ನಮ್ಮ ಪ್ರಚೋದಿತ ಸ್ವಯಂ-ವಿನಾಶಕಾರಿ ನಡವಳಿಕೆಯು ಅತೃಪ್ತಿ ಮತ್ತು ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು ನಾವು ನೋಡಿದ್ದೇವೆ. ನಾವು ರಚನಾತ್ಮಕ, ಸಕಾರಾತ್ಮಕ ರೀತಿಯಲ್ಲಿ ಪ್ರಚೋದಿತವಾಗಿ ವರ್ತಿಸಿದಾಗಲೂ, ಅದು ನಮ್ಮ ಬಗ್ಗೆಗಿರುವ ಅಭದ್ರತೆ ಮತ್ತು ಅವಾಸ್ತವಿಕ ಕಲ್ಪನೆಗಳಿಂದ ಪ್ರೇರೇಪಿಸಲ್ಪಟ್ಟಾಗ, ನಾವು ಕೇವಲ ಅಲ್ಪಾವಧಿಯ ಸಂತೋಷವನ್ನು ಹೊಂದಬಹುದು, ಉದಾಹರಣೆಗೆ ಒಂದು ಕೆಲಸವನ್ನು ಚೆನ್ನಾಗಿ ಮಾಡಿದ ನಂತರ ಅಥವಾ ಸಹಾಯ ಮಾಡಿದ ನಂತರವೂ ಸಹ ನಾವು ಪ್ರಚೋದಿತವಾಗಿ ಮತ್ತೆ ನಮ್ಮನ್ನು ಸಾಬೀತುಪಡಿಸಿಕೊಳ್ಳಬೇಕು ಎಂದು ಭಾವಿಸಿಕೊಳ್ಳುತ್ತೇವೆ. 

ನಾವು ಶಾಂತರಾಗಿ, ನಾವು ಏನು ಮಾಡಬೇಕೆಂದು, ಹೇಳಬೇಕೆಂದು ಅಥವಾ ಯೋಚಿಸಬೇಕೆಂಬ ಬಯಕೆಯ ಮತ್ತು ನಾವು ಪ್ರಚೋದಿತವಾಗಿ ಏನು ಮಾಡುತ್ತೇವೆ ಎಂಬುದರ ನಡುವಿನ ಅಂತರವನ್ನು ಹಿಡಿಯಬೇಕು. ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕು, ಜಾಗರೂಕರಾಗಿರಬೇಕು ಮತ್ತು ತಾರತಮ್ಯವನ್ನು ಹೊಂದಿರಬೇಕು. ಬೋಧಿಸತ್ವ ರತ್ನಮಾಲೆ (28) ನಲ್ಲಿ ಅತಿಶ ಬರೆದಂತೆ: 

ಹಲವು ಜನರ ಮಧ್ಯೆ ಇರುವಾಗ ನನ್ನ ಮಾತಿನ ಮೇಲೆ ನಿಗಾ ಇರಲಿ; ಏಕಾಂಗಿಯಾಗಿರುವಾಗ, ನನ್ನ ಮನಸ್ಸಿನ ಮೇಲೆ ನಿಗಾ ಇರಲಿ. 

ಆದರೆ ಇದರಿಂದ ನೀವು ಯಾವಾಗಲೂ ಪರಿಶೀಲನೆ ಮಾಡುವಂತಹ, ಕಠಿಣವಾದ ಮತ್ತು ಯಾಂತ್ರಿಕತೆಯ ರೀತಿಯ ವೈಪರೀತ್ಯವನ್ನು ಅನುಸರಿಸದಿರಲು ಪ್ರಯತ್ನಿಸಿ. ನೀವು ಹೀಗೆ ಮಾಡಿದರೆ ನೀವು ಸ್ವಯಂಪ್ರೇರಿತರಾಗಿರುವುದಿಲ್ಲ ಎಂದು ನೀವು ಆಕ್ಷೇಪಿಸಬಹುದು, ಆದರೆ ಸ್ವಯಂಪ್ರೇರಿತ ಎಂದರೆ ನಮ್ಮ ತಲೆಗೆ ಬಂದದ್ದನ್ನು, ಅದರ ಪ್ರಯೋಜನ ಅಥವಾ ಔಚಿತ್ಯದ ಮೌಲ್ಯಮಾಪನವನ್ನು ಮಾಡದೆ ಮಾಡುವುದಾದರೆ, ಉದಾಹರಣೆಗೆ, ನಮ್ಮ ಮಗುವು ಮಧ್ಯರಾತ್ರಿಯಲ್ಲಿ ಅಳುತ್ತಿದ್ದರೆ, ನಮಗೆ ಎದ್ದೇಳುವಂತೆ ಅನಿಸದಿದ್ದರೆ, ನಾವು ಏಳುವುದಿಲ್ಲ. ಅಥವಾ ಮಗುವನ್ನು ಮೌನಗೊಳಿಸಲು ಅದನ್ನು ಹೊಡೆಯಲು ಬಯಸಿದರೆ, ನಾವು ಅದನ್ನು ಹೊಡೆಯುತ್ತೇವೆ. ಆದ್ದರಿಂದ, ನಮ್ಮ ಪ್ರಚೋದಿತ ನಡವಳಿಕೆಯ ಸಮಸ್ಯೆಗಳನ್ನು ಎದುರಿಸಲು – ಅಂದರೆ ಕರ್ಮದೊಂದಿಗಿನ ನಮ್ಮ ಸಮಸ್ಯೆಗಳು - ನಾವು ಮತ್ತೆ ಮತ್ತೆ ಧ್ಯಾನ ಮಾಡಬೇಕಾಗಿದೆ ನಿಜ, ಆದರೆ ಇದು ನಮ್ಮನ್ನು ಪೊಲೀಸಿನವರು ಬೆದರಿಸಿ, ನಮ್ಮೊಂದಿಗೆ ಕಠೋರವಾಗಿ ನಡೆದುಕೊಳ್ಳುವುದರ ಹಾಗನಿಸುವ ಬದಲು ನಾವು ಏನು ಮಾಡಬೇಕೆಂದು ಭಾವಿಸುತ್ತೇವೆ ಎಂಬುದರ ಬಗ್ಗೆ ಎಚ್ಚರದಿಂದಿರುವುದು ಸ್ವಯಂಚಾಲಿತ ಮತ್ತು ಸ್ವಾಭಾವಿಕವಾಗಬೇಕಾಗಿದೆ.

Top