ಕ್ರಮವಾದ ಮಾರ್ಗದ ಪರಿಚಯ

ಸಾಮಾನ್ಯವಾಗಿ, ಬುದ್ಧನು 84,000 ಬೋಧನೆಗಳನ್ನು ನೀಡಿದರೆಂದು ಹೇಳಲಾಗುತ್ತದೆ, ಏಕೆಂದರೆ ಅವರು ಬೋಧಿಸಿದ ವಿಷಯಗಳು ಬಹಳಾ ವೈವಿಧ್ಯಮಯವಾಗಿದ್ದು, ಅವುಗಳು ತಮ್ಮ ವ್ಯಾಪ್ತಿಯಲ್ಲಿ ವಿಶಾಲವಾಗಿರುವವು. ವಿವಿಧ ಸೂತ್ರಗಳನ್ನು ಓದುವುದರಿಂದ ನಾವು ಹೆಚ್ಚು ಪ್ರಯೋಜನ ಪಡೆಯಬಹುದಾದರೂ, ನಮಗೆ ನಿಜವಾಗಿಯೂ ಪ್ರಯೋಜನವಾಗುವ ರೀತಿಯಲ್ಲಿ ಬೋಧನೆಗಳ ಸಾರವನ್ನು ಸೆಳೆಯುವುದು ಕಷ್ಟವಾಗಿರುತ್ತದೆ. ಇಲ್ಲಿ, ಭಾರತೀಯ ಮತ್ತು ಟಿಬೆಟಿಯನ್ ಗುರುಗಳು, ಬುದ್ಧನ ಸಂಪೂರ್ಣ ಸಂದೇಶವನ್ನು, ಒಂದು ಹಂತ-ಹಂತವಾದ ಕಾರ್ಯಕ್ರಮವಾಗಿ ಆಯೋಜಿಸುವ ಮೂಲಕ, ನಮಗಾಗಿ ಮಾಡಿರುವ ಕೆಲಸವನ್ನು ನಾವು ನೋಡುತ್ತೇವೆ, ಇದನ್ನು ಟಿಬೆಟಿಯನ್‌ನಲ್ಲಿ "ಲ್ಯಾಮ್-ರಿಮ್" ಎಂದು ಕರೆಯಲಾಗುತ್ತದೆ, ಇದನ್ನು ಜ್ಞಾನೋದಯದ ತನಕ ಇರುವ ಹಾದಿಯಲ್ಲಿ, ಎಲ್ಲಾ ರೀತಿಯಲ್ಲಿ ಅನುಸರಿಸಬಹುದು.

Top