ಹೇಗೆ…
ಲೇಖನ 1 ರಲ್ಲಿ 11
ಮುಂದೆ Arrow right

ಸಂತೋಷಕ್ಕಾಗಿ 8 ಬೌದ್ಧ ಸಲಹೆಗಳು

How to 8 tips for happiness?sha=2419aed6778a7d5b

ಜೀವನದಲ್ಲಿ ಏನೇ ನಡೆಯುತ್ತಿದ್ದರೂ ನಾವೆಲ್ಲರೂ ಸಂತೋಷವಾಗಿರಲು ಬಯಸುತ್ತೇವೆ. ಆದರೆ ಜೀವನದಲ್ಲಿ ಏನೇ ನಡೆಯಲಿ, ಅದನ್ನು ನಿಭಾಯಿಸುವಂತಹ ಒಬ್ಬ ಸಂತೋಷದ ವ್ಯಕ್ತಿಯಾಗಿರುವುದು ಹೇಗೆ? ಇಲ್ಲಿ ಕೆಲವು ಬೌದ್ಧ ಸಲಹೆಗಳಿವೆ: 

  1. ಪ್ರತಿದಿನವು ಶಾಂತತೆಗಾಗಿ ಸ್ವಲ್ಪ ಸಮಯವನ್ನು ಮೀಸಲಿಡಿ - ನಿಮ್ಮ ಉಸಿರಾಟದ ಮೇಲೆ ಕೇಂದ್ರೀಕರಿಸುವ ಮೂಲಕ ಶಾಂತವಾಗಿರಿ. 
  2. ಇತರರೊಂದಿಗೆ ಇರುವಾಗ, ನೀವು ಹೇಗೆ ವರ್ತಿಸುತ್ತೀರಿ ಮತ್ತು ಮಾತನಾಡುತ್ತೀರಿ ಎಂಬುದರ ಬಗ್ಗೆ ಗಮನವಿರಲಿ; ನೀವು ಒಬ್ಬಂಟಿಯಾಗಿರುವಾಗ, ನಿಮ್ಮ ಮನಸ್ಸಿನಲ್ಲಿ ಏನಾಗುತ್ತಿದೆ ಎಂಬುದರ ಬಗ್ಗೆ ಗಮನವಿರಲಿ - ರಚನಾತ್ಮಕ ರೀತಿಯಲ್ಲಿ ವರ್ತಿಸಲು, ಮಾತನಾಡಲು ಮತ್ತು ಯೋಚಿಸಲು ಪ್ರಯತ್ನಿಸಿ. 
  3. ಪ್ರತಿದಿನವು ಯಾರೊಬ್ಬರಿಗಾದರೂ ಒಳ್ಳೆಯದನ್ನು ಮಾಡಿ - ಅವರ ಸಂತೋಷದ ಬಗ್ಗೆ ಪ್ರಾಮಾಣಿಕವಾಗಿ ಕಾಳಜಿ ವಹಿಸಿ. 
  4. ಇತರರೊಂದಿಗೆ ಉದಾರತೆಯಿಂದಿರಿ - ಇದು ನಿಮ್ಮ ಸ್ವಾಭಿಮಾನದ ಭಾವನೆಯನ್ನು ಹೆಚ್ಚಿಸುತ್ತದೆ. 
  5. ನಿಮ್ಮಲ್ಲಿರುವ ಮತ್ತು ಇತರರಲ್ಲಿರುವ ಉತ್ತಮವಾದ ಗುಣಗಳ ಮೇಲೆ ಕೇಂದ್ರೀಕರಿಸಿ - ಸಮಸ್ಯೆಗಳು ಉದ್ಭವಿಸಿದಾಗ ಸಹಾಯಕವಾಗುವ ಸಲಹೆಗಳನ್ನು ನೀಡಿ. 
  6. ಇತರರು ಮಾಡಿದ ತಪ್ಪುಗಳನ್ನು ಹೋಗಲು ಬಿಡಿ – ಕ್ಷಮಾಶೀಲಿತೆಯನ್ನು ಬೆಳೆಸಿಕೊಳ್ಳಿ.
  7. ನಿಮ್ಮ ಸ್ವಂತ ತಪ್ಪುಗಳನ್ನು ಹೋಗಲು ಬಿಡಿ – ನಿಮ್ಮನ್ನು ನೀವೇ ಕ್ಷಮಿಸಿಕೊಳ್ಳಿ. 
  8. ವಾಸ್ತವವನ್ನು ಒಪ್ಪಿಕೊಳ್ಳಿ - ಜೀವನವು ಏರಿಳಿತಗಳಿಂದ ತುಂಬಿದೆ, ಆದರೆ ವಿಷಯಗಳು ಎಷ್ಟೇ ಹದಗೆಟ್ಟಿದರೂ, ಅವೆಲ್ಲವೂ ಹಾದುಹೋಗುತ್ತವೆ. 

ಸಂತೋಷವಾಗಿರುವುದು ಎಲ್ಲಿಂದಲೋ ಬರುವುದಿಲ್ಲ; ಅದರ ಮೇಲೆ ನೀವು ಕೆಲಸ ಮಾಡಬೇಕು. ಅಭ್ಯಾಸದೊಂದಿಗೆ ಎಲ್ಲರೂ ಸಂತೋಷವಾಗಿರುವ ಜೀವನವನ್ನು ನಡೆಸಬಹುದು.

Top