10 ಮೂಲಭೂತ ಬೌದ್ಧ ನಂಬಿಕೆಗಳು

10%20basic%20buddhist%20beliefs

1. ಪ್ರತಿಯೊಬ್ಬರೂ ಸಂತೋಷವಾದ ಜೀವನವನ್ನು ನಡೆಸಲು ಬಯಸುತ್ತಾರೆ, ಆದರೆ ಕೆಲವರಿಗೆ ಮಾತ್ರ ಇದರ ಅರ್ಥ ಅಥವಾ ಸಾಧಿಸುವ ವಿಧಾನ ತಿಳಿದಿದೆ. 

2. ನಮ್ಮ ಭಾವನೆಗಳು ಮತ್ತು ವರ್ತನೆಗಳು ನಾವು ಹೇಗೆ ಭಾವಿಸುತ್ತೇವೆ ಎಂಬುದರ ಮೇಲೆ ಪರಿಣಾಮ ಬೀರುತ್ತವೆ. ತರಬೇತಿಯೊಂದಿಗೆ, ನಾವು ನಕಾರಾತ್ಮಕತೆಯನ್ನು ತೊಡೆದುಹಾಕಿ, ಆರೋಗ್ಯಕರವಾದ ಮತ್ತು ಸಕಾರಾತ್ಮಕತೆಯ ಭಾವನೆಗಳನ್ನು ಅಭಿವೃದ್ಧಿಪಡಿಸಿಕೊಳ್ಳಬಹುದು. ಹೀಗೆ ಮಾಡುವುದರಿಂದ ನಮ್ಮ ಜೀವನವು ಹೆಚ್ಚು ಸಂತೋಷಕರ ಮತ್ತು ಹೆಚ್ಚು ತೃಪ್ತಿಕರವಾಗಿರುತ್ತದೆ. 

3. ಗೊಂದಲಮಯ ಭಾವನೆಗಳಾದ ಕೋಪ, ಭಯ, ದುರಾಸೆ ಮತ್ತು ಬಾಂಧವ್ಯ ಇತ್ಯಾದಿ, ನಮ್ಮ ಮನಸ್ಸಿನ ಶಾಂತಿ ಮತ್ತು ಸ್ವಯಂ ನಿಯಂತ್ರಣವನ್ನು ಕಳೆದುಕೊಳ್ಳುವಂತೆ ಮಾಡುತ್ತವೆ. ತರಬೇತಿಯೊಂದಿಗೆ, ನಾವು ಅವುಗಳ ನಿಯಂತ್ರಣದಿಂದ ಮುಕ್ತರಾಗಬಹುದು. 

4. ಕೋಪ ಅಥವಾ ದುರಾಶೆಯಿಂದ ಪ್ರಚೋದಿತವಾಗಿ ವರ್ತಿಸುವುದರಿಂದ ನಮಗೆ ಸಮಸ್ಯೆಗಳು ಉಂಟಾಗುತ್ತವೆ ಮತ್ತು ಅಸಂತೋಷಕ್ಕೆ ಕಾರಣವಾಗುತ್ತವೆ. ತರಬೇತಿಯೊಂದಿಗೆ, ನಾವು ಶಾಂತರಾಗಿ, ಸ್ಪಷ್ಟವಾಗಿ ಯೋಚಿಸಲು ಮತ್ತು ಬುದ್ಧಿವಂತಿಕೆಯಿಂದ ವರ್ತಿಸಲು ಕಲಿಯಬಹುದು. 

5. ಸಕಾರಾತ್ಮಕ ಭಾವನೆಗಳಾದ ಪ್ರೀತಿ, ಸಹಾನುಭೂತಿ, ತಾಳ್ಮೆ ಮತ್ತು ತಿಳುವಳಿಕೆಯು, ನಮಗೆ ಶಾಂತವಾಗಿರಲು, ಮುಕ್ತವಾಗಿರಲು ಮತ್ತು ಸ್ಪಷ್ಟವಾಗಿರಲು ಸಹಾಯ ಮಾಡುತ್ತವೆ ಮತ್ತು ನಮಗೆ ಹೆಚ್ಚಿನ ಸಂತೋಷವನ್ನು ತರುತ್ತವೆ. ತರಬೇತಿಯೊಂದಿಗೆ, ನಾವು ಅವುಗಳನ್ನು ಅಭಿವೃದ್ಧಿಪಡಿಸಲು ಕಲಿಯಬಹುದು.

6. ಸ್ವ-ಕೇಂದ್ರಿತವಾದ, ಸ್ವಾರ್ಥದ ನಡವಳಿಕೆ ಮತ್ತು ಆಲೋಚನೆಗಳು ನಮ್ಮನ್ನು ಇತರರಿಂದ ದೂರವಿರಿಸುತ್ತವೆ ಮತ್ತು ನಮ್ಮನ್ನು ಅತೃಪ್ತಿಗೊಳಿಸುತ್ತವೆ. ತರಬೇತಿಯೊಂದಿಗೆ, ನಾವು ಅವುಗಳನ್ನು ಮೀರಬಹುದು. 

7. ನಾವೆಲ್ಲರೂ ಪರಸ್ಪರ ಸಂಬಂಧಿತರಾಗಿದ್ದೇವೆ ಮತ್ತು ನಮ್ಮ ಬದುಕುಳಿಯುವಿಕೆಯು, ಪರಸ್ಪರರ ಮೇಲೆ ಅವಲಂಬಿತವಾಗಿದೆ ಎಂಬುದನ್ನು ಅರಿತುಕೊಳ್ಳುವುದರಿಂದ ನಮ್ಮ ಹೃದಯ ಮತ್ತು ಮನಸ್ಸನ್ನು ತೆರೆಯಬಹುದು, ಇತರರ ಬಗ್ಗೆ ಕಾಳಜಿಯನ್ನು ಬೆಳೆಸಲು ನಮಗೆ ಸಹಾಯವಾಗುವುದು ಮತ್ತು ನಮಗೆ ಹೆಚ್ಚು ಸಂತೋಷವನ್ನು ತರುತ್ತದೆ. 

8. ನಮ್ಮಲ್ಲಿ ಮತ್ತು ಇತರರಲ್ಲಿ ನಾವು ಗ್ರಹಿಸುವ ವಿಷಯಗಳು, ಗೊಂದಲದಿಂದ ಸೃಷ್ಟಿಯಾದ ಕಾಲ್ಪನಿಕ ಪ್ರಕ್ಷೇಪಗಳಾಗಿರುತ್ತವೆ. ನಮ್ಮ ಪ್ರಕ್ಷೇಪಣಗಳು ವಾಸ್ತವಕ್ಕೆ ಅನುಗುಣವಾಗಿವೆ ಎಂದು ನಾವು ನಂಬಿದಾಗ, ನಮಗಾಗಿ ಮತ್ತು ಇತರರಿಗೆ, ನಾವು ಸಮಸ್ಯೆಗಳನ್ನು ಸೃಷ್ಟಿಸುತ್ತೇವೆ. 

9. ಸರಿಯಾದ ತಿಳುವಳಿಕೆಯೊಂದಿಗೆ, ನಾವು ಗೊಂದಲದಿಂದ ಮುಕ್ತರಾಗಬಹುದು ಮತ್ತು ವಾಸ್ತವವನ್ನು ನೋಡಬಹುದು. ಜೀವನದಲ್ಲಿ ಏನೇ ನಡೆದರೂ, ಅದರೊಂದಿಗೆ ಶಾಂತವಾಗಿ ಮತ್ತು ಬುದ್ಧಿವಂತಿಕೆಯಿಂದ ವ್ಯವಹರಿಸಲು ಇದು ನಮಗೆ ಅನುವು ಮಾಡಿಕೊಡುತ್ತದೆ. 

10. ಒಬ್ಬ ಉತ್ತಮ ವ್ಯಕ್ತಿಯಾಗಲು ಶ್ರಮಪಡುವುದು ನಮ್ಮ ಜೀವನದುದ್ದಕ್ಕೂ ಇರುವ ಸವಾಲಾಗಿರುವುದು, ಆದರೆ ಜೊತೆಗೆ ನಮ್ಮ ಜೀವನದಲ್ಲಿನ ಅತ್ಯಂತ ಅರ್ಥಪೂರ್ಣವಾದ ವಿಷಯವೂ ಆಗಿರುವುದು.

Top