ಈ ಭೀಕರ ದುರಂತದ ಸಮಯದಲ್ಲಿ, ನಮ್ಮ ಆರೋಗ್ಯಕ್ಕೆ ಬೆದರಿಕೆಗಳನ್ನು ಎದುರಿಸುತ್ತಿದ್ದೇವೆ ಮತ್ತು ಕುಟುಂಬಸ್ಥರು ಮತ್ತು ಸ್ನೇಹಿತರು ನಮ್ಮನ್ನು ಅಗಲಿದ ದುಃಖವನ್ನು ಅನುಭವಿಸುತ್ತಿದ್ದೇವೆ. ಆರ್ಥಿಕ ಅಡೆತಡೆಯು, ಸರ್ಕಾರಗಳಿಗೆ ದೊಡ್ಡ ಸವಾಲನ್ನು ಒಡ್ಡುತ್ತಿದೆ ಮತ್ತು ಅನೇಕ ಜನರ ಜೀವನೋಪಾಯದ ಸಾಮರ್ಥ್ಯವನ್ನು ದುರ್ಬಲಗೊಳಿಸುತ್ತಿದೆ.
ಇಂತಹ ಸಮಯದಲ್ಲಿ, ನಾವು ಒಂದೇ ಮಾನವ ಕುಟುಂಬದ ಸದಸ್ಯರಾಗಿ, ನಮ್ಮೆಲ್ಲರನ್ನೂ ಒಗ್ಗೂಡಿಸುವ ಬಗ್ಗೆ ಗಮನಹರಿಸಬೇಕು. ಅದರಂತೆಯೇ, ನಾವು ಸಹಾನುಭೂತಿಯಿಂದ ಒಬ್ಬರಿಗೊಬ್ಬರು ಕೈಚಾಚಬೇಕು. ಮಾನವರಾದ ನಾವೆಲ್ಲರೂ ಒಂದೇ. ನಮ್ಮೆಲ್ಲರ ಭಯಗಳು ಒಂದೇ, ಭರವಸೆಗಳು ಒಂದೇ, ಅನಿಶ್ಚಿತತೆಗಳು ಒಂದೇ; ಆದರೂ, ನಾವು ನಮ್ಮ ಸಂತೋಷದ ಬಯಕೆಯಿಂದ ಒಂದಾಗುತ್ತೇವೆ. ವಿಷಯಗಳನ್ನು ತಾರ್ಕಿಕವಾಗಿ ಮತ್ತು ವಾಸ್ತವಿಕವಾಗಿ ನೋಡುವ ನಮ್ಮ ಮಾನವ ಕೌಶಲ್ಯವು, ಕಠಿಣಸ್ಥಿತಿಯನ್ನು ಅವಕಾಶವಾಗಿ ಪರಿವರ್ತಿಸುವ ಸಾಮರ್ಥ್ಯವನ್ನು ನೀಡುತ್ತದೆ.
ನಾವು ಸಂಘಟಿಸಿ, ಜಾಗತಿಕ ಪ್ರತಿಕ್ರಿಯೆಯಲ್ಲಿ ಒಟ್ಟುಗೂಡುವ ಮೂಲಕ ಮಾತ್ರವೇ ನಮಗೊಡ್ಡಿರುವ ಸವಾಲುಗಳ ಅಭೂತಪೂರ್ವ ಪ್ರಮಾಣವನ್ನು ಎದುರಿಸಬಲ್ಲೆವು ಎಂಬುದರ ಎಚ್ಚರಿಕೆಯಾಗಿ ಈ ದುರಂತ ಮತ್ತು ಅದರ ಪರಿಣಾಮಗಳು ಕಾರ್ಯನಿರ್ವಹಿಸುತ್ತವೆ. ನಾವೆಲ್ಲರೂ " ದಿ ಕಾಲ್ ಟು ಯುನೈಟ್" ಯನ್ನು ಪಾಲಿಸಬೇಕೆಂದು ನಾನು ಪ್ರಾರ್ಥಿಸುತ್ತೇನೆ.
ದಲೈ ಲಾಮಾ, ಮೇ 3, 2020