ಆಧ್ಯಾತ್ಮಿಕ ಗುರುಗಳು

ಬೌದ್ಧ ಬೋಧನೆಗಳನ್ನು, ಗುರುತಿಸಿದ ಗುರುಗಳ ಅವಿಚ್ಛಿನ್ನ ವಂಶಾವಳಿಯ ಜಾಡು ಬುದ್ಧನ ಬಳಿ ಪತ್ತೆಯಾದಾಗ ಅವನ್ನು ಅಧಿಕೃತವೆಂದು ಪರಿಗಣಿಸಲಾಗುತ್ತದೆ. ಈ ಭೋಧನೆಗಳ ಬಗ್ಗೆ ನಮ್ಮಲ್ಲಿ ವಿಶ್ವಾಸ ಮೂಡಿದಾಗ, ಅವನ್ನು ಅರ್ಥೈಸಿಕೊಂಡು, ಸರಿಯಾಗಿ ಅನ್ವಯಿಸಿದರೆ, ನಾವು ಬಯಸುವ ಹಿತಕರ ಫಲಿತಾಂಶಗಳನ್ನು ಲಭ್ಯವಾಗುತ್ತವೆ ಎಂದು ಅರಿವಾದಾಗ, ನಾವು ಅವನ್ನು ಅಭ್ಯಸಿಸಲು ಪ್ರಯತ್ನಿಸುತ್ತೇವೆ.

ಶಾಕ್ಯಮುನಿ ಬುದ್ಧ

ಶಾಕ್ಯಮುನಿ ಬುದ್ಧ, 2500 ವರ್ಷಗಳ ಹಿಂದೆ, ಭಾರತದಲ್ಲಿ ವಾಸಿಸುತ್ತಿದ್ದ ಒಬ್ಬ ಶ್ರೇಷ್ಟ ಧರ್ಮಗುರುವಾಗಿದ್ದರು. ಜ್ಞಾನೋದಯವನ್ನು ಸಾಧಿಸಿದ ನಂತರ, ಇತರರೂ ಕೂಡ ಹೇಗೆ ಸಾಧಿಸಬಹುದು ಎಂಬುದನ್ನು ತೋರಿಸಿದರು.

ನಾಗಾರ್ಜುನ

ನಾಗಾರ್ಜುನ, ಶೂನ್ಯತೆಯ ಬಗೆಗಿನ ಬುದ್ಧನ ಬೋಧನೆಗಳನ್ನು ವಿವರಿಸಿದ ಪ್ರವರ್ತಕ ಭಾರತೀಯ ಧರ್ಮಗುರು.

ಆರ್ಯದೇವ

ಆರ್ಯದೇವ (2ನೇ ಶತಮಾನ - 3ನೇ ಶತಮಾನದ ಮಧ್ಯಭಾಗ C.E.) ನಾಗಾರ್ಜುನರ ಮುಖ್ಯ ಶಿಷ್ಯರಾಗಿದ್ದರು. ಅವರು, ಶೂನ್ಯತೆಯ ಬಗೆಗಿನ ನಾಗಾರ್ಜುನರ ಬೋಧನೆಗಳನ್ನು ವಿಶ್ಲೇಷಿಸಿ, ವಿವರಿಸಿದರು.

ಶಾಂತಿದೇವ

ಶಾಂತಿದೇವ, ಬೋಧಿಸತ್ವಗಳ ಅಭ್ಯಾಸ ಮತ್ತು ನಡವಳಿಕೆಯನ್ನು ವಿವರಿಸಿದ ಮಹಾನ್ ಭಾರತೀಯ ಧರ್ಮಗುರು.

ಅತಿಶಾ

ಆತಿಶಾ, ಬೌದ್ಧಧರ್ಮವನ್ನು ಭಾರತದಿಂದ ಟಿಬೆಟ್‌ಗೆ, ಅದರ ತಾತ್ಕಾಲಿಕ ಅವನತಿಯ ನಂತರ ಮತ್ತೊಮ್ಮೆ ಸಾರಿದರು.

14 ನೇ ದಲೈ ಲಾಮಾ

14 ನೇ ದಲೈ ಲಾಮಾ ಅವರು ಟಿಬೆಟಿಯನ್ ಬೌದ್ಧಧರ್ಮದ ಆಧ್ಯಾತ್ಮಿಕ ಧರ್ಮಗುರು, 1989 ರ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತರು ಮತ್ತು ಅಹಿಂಸೆ ಮತ್ತು ಸಹಾನುಭೂತಿಯ ವಿಶ್ವರೂಪವಾಗಿರುವರು .

ಯೋಂಗ್ಜಿನ್ ಲಿಂಗ್ ರಿನ್ಪೋಚೆ

ಯೋಂಗ್ಜಿನ್ ಲಿಂಗ್ ರಿನ್ಪೋಚೆ ಅವರು 14 ನೇ ದಲೈ ಲಾಮಾ ಮತ್ತು ಗೆಲುಗ್ಪಾ ಸಂಪ್ರದಾಯದ ಆಧ್ಯಾತ್ಮಿಕ ಧರ್ಮಗುರುವಾದ 97 ನೇ ಗಂಡೆನ್ ಟ್ರಿಪಾ ಅವರಿಗೆ ಹಿರಿಯ ಬೋಧಕರಾಗಿದ್ದರು, .

ತ್ಸೆನ್ಜಾಬ್ ಸೆರ್ಕಾಂಗ್ ರಿಂಪೋಚೆ

ತ್ಸೆನ್ಜಾಬ್ ಸೆರ್ಕಾಂಗ್ ರಿಂಪೋಚೆ ಅವರು 14 ನೇ ದಲೈ ಲಾಮಾ ಅವರ ಗುರುಗಳೂ ಮತ್ತು ಅವರ ಮುಖ್ಯ ವಿವಾದದ ಸಹಭಾಗಸ್ಥರೂ ಹಾಗು ಟಿಬೆಟಿಯನ್ ಬೌದ್ಧಧರ್ಮದ ಸಂಪೂರ್ಣ ವ್ಯಾಪ್ತಿಯ ಒಬ್ಬ ಧರ್ಮಗುರು ಆಗಿದ್ದರು.

ತ್ಸೆನ್ಜಾಬ್ ಸೆರ್ಕಾಂಗ್ ರಿಂಪೋಚೆ II

ತ್ಸೆನ್ಜಾಬ್ ಸೆರ್ಕಾಂಗ್ ರಿಂಪೋಚೆ II ಅವರು ಎಂಬುದು ತ್ಸೆನ್ಜಾಬ್ ಸೆರ್ಕಾಂಗ್ ರಿಂಪೋಚೆಯವರ "ತುಲ್ಕು" ಪುನರವತಾರವಾಗಿದ್ದಾರೆ.

ಗೆಶೆ ನ್ಗಾವಾಂಗ್ ದರ್ಗ್ಯೇಯ್

ಗೆಶೆ ನ್ಗಾವಾಂಗ್ ದರ್ಗ್ಯೇಯ್ ಅವರು ಭಾತದಲ್ಲಿನ ಧರ್ಮಶಾಲದ ಟಿಬೆಟಿಯನ್ ವರ್ಕ್ಸ್ ಮತ್ತು ಆರ್ಕೈವ್ಸ್ನ ಲೈಬ್ರರಿಯಲ್ಲಿ, ಪಾಶ್ಚಿಮಾತ್ಯರಿಗೆ ಬೌದ್ಧಧರ್ಮದ ಪ್ರವರ್ತಕ ಗುರುವಾಗಿದ್ದರು.
Top