Studybuddhism.com, ಅಧಿಕೃತ ಬೌದ್ಧ ಬೋಧನೆಗಳನ್ನು ಸರಳವಾಗಿ ಮತ್ತು ಪ್ರಾಯೋಗಿಕವಾಗಿ ಪ್ರಸ್ತುತಪಡಿಸುವ ಒಂದು ವ್ಯಾಪಕವಾದ ಮೂಲವಾಗಿದೆ. ಜಾಹೀರಾತುಗಳಿಲ್ಲದೆ, ಉಚಿತವಾಗಿ, ಟಿಬೆಟ್‌ನ ಜ್ಞಾನಬಂಢಾರವು ನಮ್ಮ ಆಧುನಿಕ ಜಗತ್ತಿಗೆ ನಿಲುಕುವಂತೆ, ಉಪಲಬ್ಧವಾಗುವಂತೆ ಮಾಡುವುದು ನಮ್ಮ ಗುರಿಯಾಗಿದೆ.
ಈ ವೆಬ್‌ಸೈಟ್ ‘ದಿ ಬರ್ಜಿನ್ ಆರ್ಕೈವ್ಸ್’ನ ಮುಂದಿನ ಪೀಳಿಗೆಯಾಗಿದ್ದು, ಇದನ್ನು 2001 ರಲ್ಲಿ ಬೌದ್ಧ ಗುರುಗಳಾದ, ಅನುವಾದಕರಾದ, ವೃತ್ತಿಗಾರರಾಗಿ 50 ವರ್ಷಗಳ ಅನುಭವವನ್ನು ಹೊಂದಿರುವ ಡಾ. ಅಲೆಕ್ಸಾಂಡರ್ ಬರ್ಜಿನ್ ಅವರು ಸ್ಥಾಪಿಸಿದರು. ಸುಮಾರು 80 ಜನರ ಅಂತರರಾಷ್ಟ್ರೀಯ ತಂಡದೊಂದಿಗೆ, studybuddhism.com ಬೆಳೆಯುತ್ತಲೇ ಇದೆ; ನಾವು ನಿಯಮಿತವಾಗಿ ಹೊಸ ಲೇಖನಗಳು, ವೀಡಿಯೋಗಳು ಮತ್ತು ಆಡಿಯೋ ಬೋಧನೆಗಳನ್ನು ಸೇರಿಸುತ್ತಿರುತ್ತೇವೆ.
ಸ್ಟಡಿ ಬುದ್ಧಿಸಮ್, ಎರಡು ದಶಕಗಳಿಗೂ ಹೆಚ್ಚು ಕಾಲವಿದ್ದು, ಅತ್ಯಂತ ಹಳೆಯ ಮತ್ತು ಸಮರ್ಪಿತ ಆನ್‌ಲೈನ್ ವೇದಿಕೆಗಳಲ್ಲಿ ಒಂದಾಗಿದ್ದು, ವಿಶ್ವಾದ್ಯಂತ, ಎಲ್ಲರಿಗೂ ಉಚಿತವಾದ, ಸುಲಭವಾಗಿ ಅರ್ಥವಾಗುವ ಮತ್ತು ಉತ್ತಮ ಗುಣಮಟ್ಟದ ಬೌದ್ಧ ಸಂಪನ್ಮೂಲಗಳನ್ನು ಒದಗಿಸುತ್ತಿದೆ.
ಅಧಿಕೃತ ಬೋಧನೆಗಳು ಆರಂಭಿಕರಿಗಾಗಿ ಸುಲಭವಾಗಿರುವ ವಿಷಯಗಳಿಂದ ಹಿಡಿದು ಶೈಕ್ಷಣಿಕ ಒಳನೋಟಗಳವರೆಗೆ, ನಮ್ಮ ವೇದಿಕೆಯು ವೈವಿಧ್ಯಮಯ ಬೋಧನೆಗಳನ್ನು ಒದಗಿಸುತ್ತದೆ. | |
ವ್ಯಾಪಕವಾದ ಜ್ಞಾನ ಗ್ರಂಥಾಲಯ: 37 ಭಾಷೆಗಳಲ್ಲಿ 16,000 ಕ್ಕೂ ಹೆಚ್ಚು ಲೇಖನಗಳು ಲಭ್ಯವಿರುವುದರಿಂದ, ಸ್ಟಡಿ ಬುದ್ಧಿಸಮ್ ಜ್ಞಾನ ಭಂಡಾರವಾಗಿದೆ. | |
ವೈವಿಧೈಮಯ ಮಾಧ್ಯಮಗಳು ಪಾಡ್‌ಕ್ಯಾಸ್ಟ್‌ಗಳಿಂದ ಹಿಡಿದು ವೀಡಿಯೊಗಳು, ಸಂದರ್ಶನಗಳು, ಲೇಖನಗಳು, ಧ್ಯಾನಗಳು ಮತ್ತು ಕೋರ್ಸ್‌ಗಳವರೆಗೆ, ನಾವು ಬಹುಮುಖಿ ಕಲಿಕೆಯ ಅನುಭವವನ್ನು ಒದಗಿಸುತ್ತೇವೆ. | |
ಜಾಹೀರಾತು ರಹಿತ ಅನುಭವ: ಅಡೆತಡೆಗಳು ಅಥವಾ ಗೊಂದಲಗಳಿಲ್ಲದೆ ನಮ್ಮ ಸಂಪನ್ಮೂಲಗಳನ್ನು ಆನಂದಿಸಿ. | |
ಪಂಥೀಯವಿಲ್ಲದ ವಿಧಾನ ನಾವು ವೈವಿಧ್ಯತೆ ಮತ್ತು ಒಳಗೊಳ್ಳುವಿಕೆಯನ್ನು ಆಲಂಗಿಸಿಕೊಂಡು, ಬೌದ್ಧ ಸಂಪ್ರದಾಯಗಳಿಂದ ಸಾಧ್ಯವಾದಷ್ಟು ಜ್ಞಾನವನ್ನು ನೀಡುತ್ತೇವೆ. | |
ವಿಶಿಷ್ಟ ಐತಿಹಾಸಿಕ ಒಳನೋಟಗಳು: ಬೇರೆಲ್ಲೂ ಸಿಗದ ಐತಿಹಾಸಿಕ ಮಾಹಿತಿಯನ್ನು ಪಡೆಯಿರಿ, ಇದು ಬೌದ್ಧಧರ್ಮದ ಪರಂಪರೆಯ ಬಗೆಗಿರುವ ನಿಮ್ಮ ಇರುವ ತಿಳುವಳಿಕೆಯನ್ನು ಉಲ್ಬಣಗೊಳಿಸುತ್ತದೆ. |