ತ್ಸೆನ್‌ಜಾಬ್ ಸೆರ್ಕಾಂಗ್ ರಿಂಪೋಚೆ II ಅವರ ಸಂದೇಶ

ಅಲೆಕ್ಸ್ ಬರ್ಜಿನ್ ನನ್ನ ಪೂರ್ವಾಧಿಕಾರಿಯಾದ, ಹಿಂದಿನ ತ್ಸೆನ್‌ಜಾಬ್ ಸೆರ್ಕಾಂಗ್ ರಿಂಪೋಚೆ ಅವರ ನಿಕಟ ಶಿಷ್ಯರಾಗಿದ್ದರು ಮತ್ತು ವ್ಯಾಖ್ಯಾನಕಾರರಾಗಿದ್ದರು ಮತ್ತು ಈ ಜೀವಿತಾವಧಿಯಲ್ಲಿಯೂ ನಾವು ನಮ್ಮ ನಿಕಟ ಧರ್ಮ ಸಂಬಂಧವನ್ನು ಅಡೆತಡೆಯಿಲ್ಲದೆ ಮುಂದುವರಿಸಿದ್ದೇವೆ. ನನ್ನ ಪೂರ್ವವರ್ತಿಯವರ ಅನೇಕ ಬೋಧನೆಗಳನ್ನು ಅಲೆಕ್ಸ್ ಭಾ‍ಷಾಂತರಿಸಿದ್ದು, ಜೊತೆಗೆ ಅವರಿಂದ ಕಲಿತದ್ದನ್ನು ಆಧರಿಸಿದ ಅನೇಕ ಸ್ಪಷ್ಟವಾದ ಬೋಧನೆಗಳನ್ನು ಕೂಡ ಅಲೆಕ್ಸ್ ಬರೆದಿದ್ದು, ಅವನ್ನು ಬರ್ಜಿನ್ ಆರ್ಕೈವ್ಸ್ನಲ್ಲಿ ಕಾಣಬಹುದಾಗಿದೆ. ನನ್ನ ಪೂರ್ವವರ್ತಿಯವರ ವಿಶಾಲವಾದ ಅಸಂಬದ್ಧ ಸಂಪ್ರದಾಯವನ್ನು, ತಮ್ಮ ವೆಬ್‌ಸೈಟ್‌ನ ಮೂಲಕ ವ್ಯಾಪಕವಾದ ಪ್ರೇಕ್ಷಕರಿಗೆ, ಹಲವು ಭಾಷೆಗಳಲ್ಲಿ ಲಭ್ಯವಾಗುವಂತೆ ಮಾಡಲು ಮುಂದುವರೆಸಿರುವುದನ್ನು ನೋಡಿ ನನಗೆ ಬಹಳಾ ಸಂತೋಷವಾಗಿದೆ.

ಈ ಕೆಲಸವು ಮುಂದುವರಿಯಲಿ ಮತ್ತು ಮುಂದಿನ ಪೀಳಿಗೆಗೆ ಈ ವೆಬ್‌ಸೈಟ್ ಮಾನ್ಯ ಮಾಹಿತಿ ಮತ್ತು ಸ್ಫೂರ್ತಿಯ ಮೂಲವಾಗಿ ಉಳಿಯಲಿ ಎಂಬುದು ನನ್ನ ಆಳವಾದ ಪ್ರಾರ್ಥನೆಯಾಗಿದೆ. ಅದರಿಂದ ಪಡೆಯುವ ಒಳನೋಟಗಳಿಂದ ಜನರ ಜ್ಞಾನೋದಯವು ವೇಗವಾಗಿ ಚಿಗುರೊಡೆಯಲಿ.

ನವೆಂಬರ್ 22, 2008
ತ್ಸೆನ್ಜಾಬ್ ಸೆರ್ಕಾಂಗ್ ತುಲ್ಕು

Top