ಶಾಕ್ಯಮುನಿ ಬುದ್ಧನು ಜ್ಞಾನೋದಯವಾದ ನಂತರ ಮೊದಲ ಬೋಧನೆಯಾಗಿ ನಾಲ್ಕು ಆರ್ಯ ಸತ್ಯಗಳನ್ನು ಬೋಧಿಸಿದರು. ತಮ್ಮ ಜೀವನ ಪರ್ಯಂತ ಆಧ್ಯಾತ್ಮಿಕ ಬೆಳವಣಿಗೆಗಾಗಿ ಈ ನಾಲ್ಕನ್ನು ಅನ್ವಯಿಸಲು ವಾಸ್ತವದ ಬೌದ್ಧ ದೃಷ್ಟಿಕೋನದ (ಎರಡು ಸತ್ಯಗಳು) ಜ್ಞಾನ ಮತ್ತು ವಿಶ್ಲೇಷಣೆ ಮತ್ತು ಅಂತಿಮ ಗಮ್ಯಸ್ಥಾನ ಮತ್ತು ಅಲ್ಲಿಗೆ ತಲುಪುವ ವಿಧಾನಗಳ ಸ್ಪಷ್ಟ ತಿಳುವಳಿಕೆ (ಅಮೂಲ್ಯ ತ್ರಿರತ್ನಗಳು) ಹೇಗೆ ಅಗತ್ಯವಾಗಿರುತ್ತದೆ ಎಂಬುದನ್ನು ಪ್ರದರ್ಶಿಸಿದರು. ಒಂದು ಸಂಕ್ಷಿಪ್ತ ಪದ್ಯದಲ್ಲಿ, ಪರಮಪೂಜ್ಯ ದಲೈ ಲಾಮಾ ಅವರು ಈ ಅಗತ್ಯ ಅಂಶಗಳ ನಡುವಿನ ಆಳವಾದ ಸಂಬಂಧವನ್ನು ತಿಳಿಸಿರುತ್ತಾರೆ. ಈ ಪದ್ಯದ ವಿಶ್ಲೇಷಣೆಯು, ಪ್ರಮುಖ ಬೌದ್ಧ ಬೋಧನೆಗಳನ್ನು ಸಂಯೋಜಿಸುವ ಮೂಲಕ ಹೇಗೆ ಚಿಂತಿಸಬಹುದು ಮತ್ತು ಮಹತ್ವದ ತೀರ್ಮಾನಗಳನ್ನು ತಲುಪುವುದರ ಬಗ್ಗೆ ಹೇಗೆ ವಿಚಾರ ನಡೆಸಬೇಕು ಎಂಬುದನ್ನು ತೋರಿಸುತ್ತದೆ.