ನಾವು ಬೌದ್ಧ ಬೋಧನೆಗಳನ್ನುಅಗಾಧವಾಗಿ ಕಲಿತಷ್ಟು, ನಮ್ಮ ಕಾರ್ಯರೀತಿ ನಮ್ಮ ಜೀವನವನ್ನು ಪರಿವರ್ತಿಸುವಲ್ಲಿ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ನಮ್ಮ ಮನಸ್ಸು ಅತ್ಯಂತ ಸಂಕೀರ್ಣವಾದದ್ದು, ಆದ್ದರಿಂದ ಅದಕ್ಕೆ ಹೊಂದಿಕೆಯಾಗುವಂತಹ ವಿಧಾನಗಳು ಅಗತ್ಯ; ಆಳವಾದ ಧರ್ಮದ ಅಧ್ಯಯನವು, ಅಂತಹ ವಿಧಾನಗಳನ್ನು ಒಂದೊಂದಾಗಿ ಬಹಿರಂಗಪಡಿಸುತ್ತದೆ. ಜಿಗ್ಸಾ ಪಜಲ್ ಅನ್ನು ಬಿಡಿಸಿ, ಸೇರಿಸಿದಂತೆ, ನಾವು ಧರ್ಮದ ಅಂಶಗಳನ್ನು ಕೂಡಿಸಿ, ಚಿಂತನೆ ಮತ್ತು ಧ್ಯಾನದ ಮೂಲಕ, ನಮ್ಮ ದೈನಂದಿನ ಜೀವನದಲ್ಲಿ ಅನ್ವಯಿಸಲು, ಒಂದು ಮಾರ್ಗವನ್ನು ಬಹಿರಂಗಪಡಿಸಬಹುದು.