ಅನುವಾದಕರು ಆಗಾಗ್ಗೆ ತಪ್ಪುಗಳನ್ನು ಮಾಡುತ್ತಾರೆ. ನೀವು ಹೇಳುವ, ಬರೆದ ಅಥವಾ ನಿಮ್ಮ ರೆಕಾರ್ಡರ್‌ಗಳನ್ನು ಕುರುಡಾಗಿ ಅವಲಂಬಿಸಬಾರದು. ಅದು ಅವಿವೇಕತನವಾಗಿರುತ್ತದೆ. ಅಂತೆಯೇ ನಾನು ಕಲಿಸುವಾಗ, ಕೆಲವೊಮ್ಮೆ ಬಾಯಿ ತಪ್ಪಿ ತಪ್ಪಾದದ್ದನ್ನು ಹೇಳಬಹುದು. ಆಗ ನಿಮ್ಮ ರೆಕಾರ್ಡರ್‌ನಲ್ಲಿ ನೀವು ಕೇಳುವುದನ್ನು ಕುರುಡಾಗಿ ನಂಬಬಾರದು. ಬುದ್ಧ ತಮ್ಮ ಸ್ವಂತ ಬೋಧನೆಯ ಬಗ್ಗೆ ಹೇಳಿದಂತೆ, ನಾನು ಬೋಧಿಸಿದ ಮಾತ್ರಕ್ಕೆ ನೀವು ಅದನ್ನು ಸ್ವೀಕರಿಸಬಾರದು, ಬದಲಿಗೆ ನೀವು ಅದನ್ನು ಚಿನ್ನವನ್ನು ಪರೀಕ್ಷಿಸುವಂತೆ ವಿಶ್ಲೇಷಿಸಬೇಕು. ನಂಬಿಕೆಯನ್ನು ಅವಲಂಬಿಸಬೇಡಿ ಅಥವಾ ರೆಕಾರ್ಡರ್ನಲ್ಲಿರುವ ಎಲ್ಲವನ್ನೂ ಅಕ್ಷರಶಃ ತೆಗೆದುಕೊಳ್ಳಬೇಡಿ.
ನೀವು ಒಂಬತ್ತನೇ ಬೋಧಿಸತ್ವ ಭೂಮಿ ಮಟ್ಟವನ್ನು ಸಾಧಿಸುವವರೆಗೆ, ನೀವು ತಪ್ಪುಗಳನ್ನು ಮಾಡುತ್ತಲೇ ಇರುತ್ತೀರಿ. ನೀವು ಈ ಒಂಬತ್ತನೇ ಹಂತದ ಮನಸ್ಸನ್ನು ಸಾಧಿಸಿದ ನಂತರ ಮಾತ್ರ ವಿಷಯಗಳನ್ನು ವಿವರಿಸುವಾಗ ತಪ್ಪುಗಳನ್ನು ಮಾಡುವುದನ್ನು ನಿಲ್ಲಿಸುತ್ತೀರಿ. ಆ ಹಂತದಲ್ಲಿ ನೀವು ನಾಲ್ಕು ನಿಖರ ಮತ್ತು ಸಂಪೂರ್ಣ ತಿಳುವಳಿಕೆಗಳನ್ನು ಸ್ವೀಕರಿಸುತ್ತೀರಿ. ಒಮ್ಮೆ ನೀವು ಆ ವಾಸ್ತವೀಕರಣವನ್ನು ಸಾಧಿಸಿದ ನಂತರ, ನೀವು ಯಾವುದೇ ತಪ್ಪುಗಳನ್ನು ಮಾಡುವುದಿಲ್ಲ.
ಉದಾಹರಣೆಗೆ, ಬೋಧಿಸತ್ವದ ವರ್ತನೆಯಲ್ಲಿ ತೊಡಗಿಸಿಕೊಳ್ಳವುದು, ಬೋಧಿಚಾರ್ಯಾವತಾರದ ಬೋಧನೆಯ ಆರಂಭದಲ್ಲಿ, ಅದನ್ನು ಹೇಗೆ ಅನುವಾದಿಸಲಾಗಿದೆ ಎಂದು ನನಗೆ ತಿಳಿದಿಲ್ಲವಾದರೂ, ನಾನು ಹೇಳಿದ್ದು ಏನೆಂದರೆ, ಕುನು ಲಾಮಾ ರಿಂಪೋಚೆ ಅವರು ಬೋಧಗಯಾದಲ್ಲಿ ಎರಡು ವರ್ಷಗಳ ಕಾಲ ಬುದ್ಧಪಾಲಿತದ ಸಂಸ್ಕೃತ ಹಸ್ತಪ್ರತಿಯನ್ನು ಓದಿದಾಗ, ಆ ಪಠ್ಯವನ್ನು ಟಿಬೆಟಿಯನ್ ಭಾಷೆಗೆ ಅನುವಾದಿಸಲಾಗಿರಲಿಲ್ಲ. ಅದನ್ನು ನಾನು ಬಾಯಿತಪ್ಪಿ ಹೇಳಿದೆ. ನಾನು ಹೇಳಲು ಬಯಸಿದ್ದು, ಆ ನಿರ್ದಿಷ್ಟ ಹಸ್ತಪ್ರತಿಯನ್ನು, ನಿರ್ದಿಷ್ಟ ಮುದ್ರಣವನ್ನು ಟಿಬೆಟಿಯನ್‌ಗೆ ಅನುವಾದಿಸಲಾಗಿರಲಿಲ್ಲ. ಬುದ್ಧಪಾಲಿತ ಪಠ್ಯವನ್ನು ಟಿಬೆಟಿಯನ್ ಭಾಷೆಗೆ ಅನುವಾದಿಸಲಾಗಿಲ್ಲ ಎಂಬ ಸಾಮಾನ್ಯ ಹೇಳಿಕೆಯು ಸರಿಯಲ್ಲ. ಜೆ ಸೋಂಗ್‌ಖಾಪಾ ಅವರು ಆ ಪಠ್ಯವನ್ನು ಅಧ್ಯಯನ ಮಾಡಿ, ಅದರ ಪರಿಭಾಷೆಯಲ್ಲಿ ತಮ್ಮ ಜ್ಞಾನೋದಯವನ್ನು ಪಡೆದರು ಎಂದು ನಾನು ಹೇಳಿದ್ದು ನಿಮಗೆ ನೆನಪಿರಬಹುದು. ನೀವು ನನ್ನನ್ನು ಪರೀಕ್ಷಿಸಬೇಕು ಮತ್ತು ಪ್ರಶ್ನೆಗಳನ್ನು ಕೇಳಬೇಕು, ಏಕೆಂದರೆ ಅದು ಕಾರ್ಯವಿಧಾನವಾಗಿರುತ್ತದೆ. ಕೆಲವೊಮ್ಮೆ, ಈ ರೀತಿಯ ತಪ್ಪುಗಳು ಸಂಭವಿಸುತ್ತವೆ.
ಉದಾಹರಣೆಗೆ, ಬೇರೊಂದು ದಿನ, ನಾನು ಪ್ರಸಂಗಿಕ ಮತ್ತು ಚಿತ್ತಮಾತ್ರ ಶಾಲೆಗಳಲ್ಲಿ ಮೊದಲ ಬಾರಿಗೆ ಪ್ರಸ್ತುತಪಡಿಸಿದಾಗ, ಸೌತ್ರಂತಿಕ ವ್ಯವಸ್ಥೆಯಲ್ಲಿ ಆಳವಾದ ನಿಜವಾದ ವಿದ್ಯಮಾನಗಳಿಗೆ ಮೂರು ಸಮಾನಾರ್ಥಕ ಪದಗಳಿವೆ ಎಂದು ನಾನು ಸರಿಯಾಗಿ ಹೇಳಿದ್ದೆ: ನಿಯಮಾಧೀನ ವಿದ್ಯಮಾನಗಳು, ವಸ್ತುನಿಷ್ಠ ಘಟಕಗಳು ಮತ್ತು ಸ್ಥಿರವಲ್ಲದ ವಿದ್ಯಮಾನಗಳು. ಸಾಂಪ್ರದಾಯಿಕವಾದ ನಿಜವಾದ ವಿದ್ಯಮಾನಗಳಿಗೆ ಇನ್ನೊಂದು ಸಮಾನಾರ್ಥಕ ಪದವಿದೆ ಎಂದೂ ನಾನು ಹೇಳಿದ್ದೆ: ಬೇಷರತ್ತಾದ ವಿದ್ಯಮಾನಗಳು, ಆಧ್ಯಾತ್ಮಿಕ ಘಟಕಗಳು ಮತ್ತು ಸ್ಥಿರವಾದ ವಿದ್ಯಮಾನಗಳು. ಚಿತ್ತಮಾತ್ರ ಶಾಲೆಯಲ್ಲಿ, ಇತರ ಶಕ್ತಿಯ, ಸಂಪೂರ್ಣವಾಗಿ ಸ್ಥಾಪಿಸಲಾದ ಮತ್ತು ಸಂಪೂರ್ಣವಾಗಿ ಕಾಲ್ಪನಿಕ ವಿದ್ಯಮಾನಗಳ ಪ್ರಸ್ತುತಿಯಿದೆ ಎಂದು ನಾನು ಹೇಳಿದೆ. ಆ ವ್ಯವಸ್ಥೆಯಲ್ಲಿ, ಸಂಪೂರ್ಣವಾದ ಕಾಲ್ಪನಿಕ ವಿದ್ಯಮಾನಗಳು, ನಿಜವಾದ ಸ್ಥಾಪಿತವಾದ, ನಿರ್ದಾಕ್ಷಿಣ್ಯ ಅಸ್ತಿತ್ವವನ್ನು ಹೊಂದಿರುವುದಿಲ್ಲ. ನಿನ್ನೆ, ನಾನು ಈ ವಿಷಯವನ್ನು ಪರಿಶೀಲಿಸಿದಾಗ, ಅದನ್ನು ಆ ರೀತಿಯಲ್ಲಿ ಅನುವಾದಿಸದಿದ್ದರೂ - ಅನುವಾದಕಾರ ಅದನ್ನು ಸ್ವತಃ ಸರಿಪಡಿಸಿದ್ದಾರೆ - ನಾನು ನನ್ನನ್ನು ಸರಿಪಡಿಸಿಕೊಂಡೆ ಏಕೆಂದರೆ ಸೌತ್ರಂತಿಕಾದ ಪ್ರಕಾರ, ಎರಡು ರೀತಿಯ ನೈಜ ವಿದ್ಯಮಾನಗಳಿಗಿರುವ ಸಮಾನಾರ್ಥಕಗಳ ನಿಯೋಜನೆಯನ್ನು ನಾನು ತಿರುಗುಮುರುಗಾಗಿಸಿದ್ದೆ. ಈ ರೀತಿಯಾಗಿ, ನಾಲಿಗೆ ಜಾರಿ ತಪ್ಪು ಮಾಡುವುದು ಬಹಳಾ ಸುಲಭ.
ನೀವು ನೋಡುವ, ಕೇಳುವ, ಓದುವ ಮತ್ತು ಮಾಡುವ ಎಲ್ಲವನ್ನೂ ನೀವು ಯಾವಾಗಲೂ ಪರಿಶೀಲಿಸಬೇಕು. ಬೋಧಿಸುವವನಾಗಿಯೂ, ಬೋಧನೆಯನ್ನು ನೀಡಿದ ನಂತರ, ನಾನು ಹಿಂತಿರುಗಿ, ನಾನು ಹೇಳಿದ್ದನ್ನು ಪರಿಶೀಲಿಸುತ್ತೇನೆ ಮತ್ತು ಏನಾದರೂ ತಪ್ಪು ಮಾಡಿದ್ದೇನೆಯೇ ಎಂದು ಪರಿಶೀಲಿಸುತ್ತೇನೆ. ಅಂತೆಯೇ, ಬೋಧನೆಯನ್ನು ಕೇಳುವವರು ಇದನ್ನೇ ಪಾಲಿಸಬೇಕು.