ಆರಂಭಿಕ ಮಟ್ಟದ ಪ್ರೇರಣೆ

Initial level motivation

ನಿಜವಾದ ಧರ್ಮಕ್ಕಾಗಿ ಬೇಕಾಗಿರುವ ಪ್ರೇರಣೆಯ ಮೂರು ಮಟ್ಟಗಳು 

ಲ್ಯಾಮ್-ರಿಮ್, ಮೂರು ಮಟ್ಟದ ಪ್ರೇರಣೆಯನ್ನು ಒದಗಿಸಿಕೊಡುತ್ತದೆ: 

  • ಆರಂಭಿಕ ಮಟ್ಟ - ನಮ್ಮ ಮುಂದಿನ ಜೀವಿತಾವಧಿಯಲ್ಲಿ ಮಾತ್ರವಲ್ಲದೆ, ನಾವು ಭವಿಷ್ಯದ ಎಲ್ಲಾ ಜೀವಿತಾವಧಿಯಲ್ಲಿ ಉತ್ತಮವಾದ ಪುನರ್ಜನ್ಮವನ್ನು ಪಡೆಯಲಿದ್ದೇವೆ ಎಂದು ಖಚಿತಪಡಿಸಿಕೊಳ್ಳುವ ವಿಷಯವಾಗಿ ನಾವು ಯೋಚಿಸುತ್ತೇವೆ. 
  • ಮಧ್ಯಂತರ ಮಟ್ಟ - ಅನಿಯಂತ್ರಿತವಾಗಿ ಮರುಕಳಿಸುವ ಪುನರ್ಜನ್ಮದಿಂದ ಸಂಪೂರ್ಣ ವಿಮೋಚನೆಯನ್ನು ಪಡೆಯುವುದು ನಮ್ಮ ಪ್ರೇರಣೆಯಾಗಿರುತ್ತದೆ; ನಾವು ವಿಮೋಚನೆ ಪಡೆಯಲು ಬಯಸುತ್ತೇವೆ. 
  • ಉನ್ನತ ಮಟ್ಟ - ನಾವು ಸಂಪೂರ್ಣವಾಗಿ ಪ್ರಬುದ್ಧವಾದ ಬುದ್ಧನ ಸ್ಥಿತಿಯನ್ನು ತಲುಪುವ ಗುರಿಯನ್ನು ಹೊಂದಿರುತ್ತೇವೆ, ಉಳಿದವರೆಲ್ಲರೂ ಕೂಡ ಅನಿಯಂತ್ರಿತವಾಗಿ ಮರುಕಳಿಸುವ ಪುನರ್ಜನ್ಮದಿಂದ ಮುಕ್ತರಾಗಲು ಸಹಾಯ ಮಾಡುತ್ತೇವೆ. 

ಪ್ರತಿಯೊಂದು ಮಟ್ಟವು ಪುನರ್ಜನ್ಮದ ವಿಚಾರವನ್ನು ಆಧರಿಸಿವೆ ಎಂಬುದು ಸ್ಪಷ್ಟವಾಗಿದೆ. ಆದರೂ, ನಾವು ಮೊದಲೇ ಚರ್ಚಿಸಿದಂತೆ, ಈ ಮೂರು ಮಟ್ಟಗಳಲ್ಲಿ ಪ್ರಸ್ತುತಪಡಿಸಲಾದ ವಿಚಾರದಲ್ಲಿನ ಪ್ರತಿಯೊಂದು ವಿಧಾನವನ್ನು ಧರ್ಮ-ಲೈಟ್ ಮಟ್ಟದಲ್ಲಿಯೂ ಅನ್ವಯಿಸಬಹುದು. ಈ ಪ್ರೇರಣೆಗಳನ್ನು ನಾವು ಕ್ಷುಲ್ಲಕಗೊಳಿಸಬಾರದು, ಏಕೆಂದರೆ ನಾವು ಅವುಗಳನ್ನು ಪ್ರಾಮಾಣಿಕ ರೀತಿಯಲ್ಲಿ ಅಭಿವೃದ್ಧಿಪಡಿಸಲು ಸಾಧ್ಯವಾದರೆ ಅವು ನಿಜವಾಗಿಯೂ ಗಮನಾರ್ಹವಾಗಿರುತ್ತವೆ. 

Top