Arrow left ಹಿಂದೆ
ಹೇಗೆ…
ಲೇಖನ 13 ರಲ್ಲಿ 13

ಜಗತ್ತನ್ನು ಹೇಗೆ ಬದಲಾಯಿಸುವುದು

ಪರಿಚಯ 

ನೀವು ಒಬ್ಬ ಕಾರ್ಯಕರ್ತರಾಗಿರುವಿರಿ! ಅಭಿನಂದನೆಗಳು. ಒಂದು ಅರ್ಥದಲ್ಲಿ, ಬುದ್ಧ ಕೂಡ ಒಬ್ಬ ಕಾರ್ಯಕರ್ತರಾಗಿದ್ದರು. ಅವರ ಜೀವನದ ಕಥೆಯಲ್ಲಿ ಅವರೂ ಸಹ ಆ ಕಾಲದ ಪ್ರಪಂಚದ ಸ್ಥಿತಿಯಿಂದ ಬೇಸತ್ತಿದ್ದರೆಂದು ಸೂಚಿಸುತ್ತದೆ. ಅವರು ತಮ್ಮ ಯೌವನದ ಬಹುಪಾಲು ಸಮಯ, ತಮ್ಮ ತಂದೆಯ ಅರಮನೆಯಲ್ಲಿ ಸುರಕ್ಷಿತವಾಗಿ ಬಂಧಿಸಲ್ಪಟ್ಟಿದ್ದರು, ಮತ್ತು ಅವರು ಮೊದಲ ಬಾರಿಗೆ ಹೊರಗೆ ಹೋದಾಗ ಮಾತ್ರ ಅರಮನೆಯ ಗೋಡೆಗಳ ಆಚೆಗಿನ ಅಪಾರ ದುಃಖದ ಬಗ್ಗೆ ಅವರಿಗೆ ಅರಿವಾಯಿತು. ನೀವು ಇಂದಿನ ಸುದ್ದಿಗಳನ್ನು ಓದುವಾಗ ನಿಮ್ಮ ಅನುಭವವು ಇದೇ ಆಗಿರಬಹುದು.   

ದುಃಖವನ್ನು ಎದುರಿಸುವುದರಿಂದ, ಬುದ್ಧನ ಆರಾಮದಾಯಕ ವಿಶ್ವ ದೃಷ್ಟಿಕೋನವು ಛಿದ್ರಗೊಂಡರೂ, ಅವು ಅವರನ್ನು ಭಯ ಅಥವಾ ಉದಾಸೀನತೆಗೆ ಹಿಂತಿರುಗುವಂತೆ ಮಾಡಲಿಲ್ಲ. ವಾಸ್ತವದಲ್ಲಿ, ಬುದ್ಧನ ಪ್ರತಿಕ್ರಿಯೆಯು, ಎಲ್ಲಾ ಜೀವಿಗಳ ದುಃಖವನ್ನು ಕೊನೆಗೊಳಿಸಲು ಸಿದ್ಧನಾದ ಕಾರ್ಯಕರ್ತನ ಪ್ರತಿಕ್ರಿಯೆಯಾಗಿತ್ತು. ಆದ್ದರಿಂದ, ಬುದ್ಧ ಮತ್ತು ಅವರ ಬೋಧನೆಗಳು, ಇಂದಿನ ರಾಜಕೀಯ ಅಸ್ಥಿರತೆ ಮತ್ತು ಮಾನವ ಮೌಲ್ಯಗಳ ಸವೆತವು ಹೆಚ್ಚುತ್ತಿರುವ ಜಗತ್ತಿನಲ್ಲಿ ವಾಸಿಸುವ ಅನೇಕ ಯುವಕರು ಅನುಭವಿಸುವ ತುರ್ತು ಪ್ರಜ್ಞೆಯೊಂದಿಗೆ ನೇರವಾಗಿ ವಿಚಾರ ನಡೆಸುತ್ತದೆ. 

ಜಗತ್ತನ್ನು ಹೇಗೆ ಬದಲಾಯಿಸುವುದು 

ಹಾಗಾದರೆ, ಬೌದ್ಧಧರ್ಮದ ಪ್ರಕಾರ ನಾವು ಜಗತ್ತನ್ನು ಹೇಗೆ ಬದಲಾಯಿಸಬಹುದು?  

ಬೌದ್ಧ ತತ್ತ್ವಶಾಸ್ತ್ರವನ್ನು ಅನ್ವೇಷಿಸುವಾಗ, ಈ ಉತ್ತರದ ವಿಭಿನ್ನ ಅಂಶಗಳು ಹೊರಹೊಮ್ಮುತ್ತವೆ ಎಂಬುದನ್ನು ನಾವು ಕಂಡುಕೊಳ್ಳುತ್ತೇವೆ. ಮೊದಲನೆಯದಾಗಿ, ಪ್ರಪಂಚದ ಸ್ಥಿತಿಯಿಂದ ಬೇಸತ್ತಿರುವುದು ಸ್ವತಃ ಕೆಟ್ಟ ವಿಷಯವಲ್ಲ. ವಾಸ್ತವದಲ್ಲಿ ಇದರ ತದ್ವಿರುದ್ಧವಾಗಿರುತ್ತದೆ. ಬೌದ್ಧಧರ್ಮದಲ್ಲಿ, ಈ ಬೇಸರಗೊಂಡ ಭಾವನೆಯ ತಿರುವನ್ನು "ತ್ಯಾಗ" ಎಂದು ಕರೆಯುತ್ತೇವೆ - ನಾವು ಇದನ್ನೆಲ್ಲಾ ನೋಡಿದಾಗ ಮತ್ತು ನಮ್ಮ ಅಸ್ವಸ್ಥತೆಯನ್ನು ನಿವಾರಿಸಲು ನಾವು ಪ್ರಯತ್ನಿಸುವ ಎಲ್ಲಾ ಸಾಮಾನ್ಯ ವಿಧಾನಗಳು ಇನ್ನು ಮುಂದೆ ಕೆಲಸ ಮಾಡುವುದಿಲ್ಲ ಎಂದು ಗುರುತಿಸುತ್ತೇವೆ. ಆದ್ದರಿಂದ, ನಾವು ವಿಭಿನ್ನವಾದ ದೃಷ್ಟಿಕೋನವನ್ನು ಸಕ್ರಿಯವಾಗಿ ಹುಡುಕಲು ಪ್ರಾರಂಭಿಸುತ್ತೇವೆ. 

ಬುದ್ಧ ಕಂಡುಕೊಂಡ ಪರಿಹಾರವು ಅತ್ಯಂತ ಆಮೂಲಾಗ್ರವಾಗಿತ್ತು. ಅವರು ಈ ಪ್ರಶ್ನೆಗೆ ಕ್ರಾಂತಿಕಾರಿಯಾದ ಹೇಳಿಕೆಯನ್ನು ನೀಡಿದರು: ನೀವು ಜಗತ್ತನ್ನು ಬದಲಾಯಿಸಲು ಬಯಸಿದರೆ, ನಿಮ್ಮನ್ನು ಬದಲಾಯಿಸುವ ಮೂಲಕ ಪ್ರಾರಂಭಿಸಿ. ಮೊದಲ ಹೆಜ್ಜೆಯು "ನಾನು" ಎಂಬ ನಮ್ಮ ಕಿರಿದಾದ ಕಲ್ಪನೆಯನ್ನು ಹೆಚ್ಚು ಭವ್ಯವಾಗಿರುವುದಕ್ಕೆ ಬದಲಾಯಿಸುವುದಾಗಿರುತ್ತದೆ. 

ಈ ನಮ್ಮ ಭವ್ಯ ರೂಪದಿಂದ, ನಾವು ಜಗತ್ತನ್ನು ಈ ಸಣ್ಣ "ನಾನು" ಗಾಗಿ ಅಲ್ಲ, ಬದಲಾಗಿ ಎಲ್ಲರಿಗೂ ಬದಲಾಯಿಸಲು ಬಯಸಬೇಕು. ಇದು ನಮ್ಮ ಮಿತಿಗಿಂತ ಮೀರಿ ಕೈಚಾಚುವಂತೆ ಅನಿಸುತ್ತದೆ ಅಲ್ಲವೇ? ಆದರೆ ಇದರ ಅಂತಿಮ ಗುರಿಯು ಎಲ್ಲರ ದುಃಖದ ಅಂತ್ಯವಾಗಿರುತ್ತದೆ: ಹಸಿವು, ಯುದ್ಧ, ಅನಾರೋಗ್ಯ, ಎಲ್ಲಾ ಮಾನಸಿಕ ಅಸ್ವಸ್ಥತೆ ಮತ್ತು ನೋವಿನಿಂದ ಬಳಲುವಿಕೆ. ಇವೆಲ್ಲವೂ ಸೇರಿರುತ್ತವೆ. ಈ ವಿಶಾಲ ದೃಷ್ಟಿಕೋನವು ನಮ್ಮ ಸ್ವಂತ ಒಳಿತಿಗಾಗಿ ಜಗತ್ತನ್ನು ಬದಲಾಯಿಸುವ ಸ್ವಾರ್ಥಿಯಾಗುವ ಸಮಸ್ಯೆಯನ್ನು ತಪ್ಪಿಸುತ್ತದೆ. ಬೌದ್ಧ ಧರ್ಮಗ್ರಂಥಗಳು ಜಗತ್ತನ್ನು ದುಃಖದಿಂದ ಮುಕ್ತಗೊಳಿಸಲು ಮತ್ತು ಎಲ್ಲಾ ಜೀವಿಗಳನ್ನು ಜ್ಞಾನೋದಯದತ್ತ ಕರೆದೊಯ್ಯಲು ಸಿದ್ಧರಾದ ವ್ಯಕ್ತಿಯನ್ನು ಬೋಧಿಸತ್ವ ಎಂದು ವಿವರಿಸುತ್ತವೆ, ಇದು ಒಬ್ಬ ಅಪಾರ ಸಹಾನುಭೂತಿಯುಳ್ಳ ವ್ಯಕ್ತಿಯಾಗಿರುತ್ತಾರೆ. ನಾವೆಲ್ಲರೂ ಸಂತೋಷವಾಗಿರಲು ಬಯಸುವುದರಲ್ಲಿ ಸಮಾನರಾಗಿರುವುದರಿಂದ ಮತ್ತು ಯಾರೂ ಅತೃಪ್ತರಾಗಿರಲು ಬಯಸುವುದಿಲ್ಲವಾದ್ದರಿಂದ, ನಾವು ಜಗತ್ತನ್ನು ಕೇವಲ ನಮ್ಮ ಪ್ರಯೋಜನಕ್ಕಾಗಿ ಅಲ್ಲ, ಬದಲಿಗೆ ಎಲ್ಲರ ಪ್ರಯೋಜನಕ್ಕಾಗಿ ಬದಲಾಯಿಸಲು ಶ್ರಮಿಸುವುದು ಅತ್ಯಗತ್ಯವಾಗಿರುತ್ತದೆ. 

ಶೂನ್ಯತೆ ಮತ್ತು ಪರಸ್ಪರ ಅವಲಂಬನೆ 

ಹಾಗಾದರೆ, ಬೋಧಿಸತ್ವನೊಬ್ಬನು ಜಗತ್ತನ್ನು ಹೇಗೆ ಬದಲಾಯಿಸಬಹುದು? 

ಜ್ಞಾನೋದಯದ ಹಾದಿಯಲ್ಲಿನ ಕ್ರಮವಾದ ಬೌದ್ಧ ಬೋಧನೆಗಳಲ್ಲಿ ಜಗತ್ತನ್ನು ಸುಧಾರಿಸಲು ಬೋಧಿಸತ್ವನು ಹೇಗೆ ಕೆಲಸ ಮಾಡುತ್ತಾನೆ ಎಂಬುದರ ಕುರಿತು ಬಹಳಷ್ಟು ವಿವರಣೆಗಳಿವೆ. ಆದರೆ, ನಿಮಗೆ ರುಚಿ ನೀಡಲು, "ನಾನು ಜಗತ್ತನ್ನು ಹೇಗೆ ಬದಲಾಯಿಸಬಹುದು" ಎಂಬ ಪ್ರಶ್ನೆಯನ್ನು, ಈ "ನಾನು" ಎಂಬುದು ಯಾರು ಅಥವಾ ಏನು ಎಂಬುದಕ್ಕೆ ಬದಲಾಯಿಸುತ್ತೇವೆ. ಮತ್ತು "ಜಗತ್ತು" ಎಂದರೇನು? ಬೌದ್ಧಧರ್ಮವು "ಜಗತ್ತು" ಮತ್ತು "ನಾನು" ಎಂಬುದು ನಾವು ಯೋಚಿಸುವಷ್ಟು ಸ್ಥಿರವಾಗಿಲ್ಲ ಎಂಬ ದೃಷ್ಟಿಕೋನವನ್ನು ನೀಡುತ್ತದೆ. ಬುದ್ಧನು ನಮ್ಮ ಊಹೆಗಳನ್ನು ಪ್ರಶ್ನಿಸುವಂತೆ ಪ್ರೋತ್ಸಾಹಿಸಿದರು. ನಾವು "ನಾನು" ಎಂದು ಕರೆಯುವುದನ್ನು ವಿಶ್ಲೇಷಿಸಿದಾಗ, ನಮ್ಮ ದೇಹ ಅಥವಾ ಮನಸ್ಸಿನಲ್ಲಿ ನಿಜವಾಗಿಯೂ ಸ್ವಯಂ ಎಂಬ ಯಾವುದೇ ವಸ್ತುವಿಲ್ಲ, ಒಂದು ಘನವಾದ ಭಾಗವನ್ನು ನಾವು ಕಂಡುಹಿಡಿಯಲಾಗುವುದಿಲ್ಲ ಎಂದು ಅವರು ಕಂಡುಕೊಂಡರು. ಮತ್ತು "ನಾನು" ಎಂಬುದು ಸ್ಥಿರವಾಗಿ ಮತ್ತು ಸ್ವತಂತ್ರವಾಗಿಲ್ಲವಾದರೆ, "ನಾವು" ಸರಿಪಡಿಸಲು ಪ್ರಯತ್ನಿಸುತ್ತಿರುವ ಬದಲಾಗದ, ಏಕಶಿಲೆಯ "ಜಗತ್ತು" ಹೇಗೆ ಇರಲು ಸಾಧ್ಯ? ಈ ವಿಷಯಗಳನ್ನು ನಾವು ಹೆಚ್ಚು ವಿಶ್ಲೇಷಿಸಿದಷ್ಟೂ ಶೂನ್ಯತೆಯು, ಅಂದರೆ ವಿಷಯಗಳಿಗೆ ಸ್ವಯಂ-ಸ್ಥಾಪಿತ ಅಸ್ತಿತ್ವ ಮತ್ತು ಅವಲಂಬಿತ ಮೂಲವಿಲ್ಲ, ಎಲ್ಲವೂ ನಾವು ಮಾಡಬಹುದಾದ ಕೆಲವು ವಿಷಯಗಳ ಮೇಲೆ ಮಾತ್ರವಲ್ಲದೆ ಅಪಾರ ಸಂಖ್ಯೆಯ ಕಾರಣಗಳು ಮತ್ತು ಪರಿಸ್ಥಿತಿಗಳ ಮೇಲೆ ಅವಲಂಬಿತವಾಗಿ ಉದ್ಭವಿಸುತ್ತದೆ ಎಂಬ ಕೇಂದ್ರ ಬೌದ್ಧ ಬೋಧನೆಗೆ ನಾವು ಒಗ್ಗಿಕೊಳ್ಳುತ್ತೇವೆ. ಅದನ್ನು ಅರ್ಥಮಾಡಿಕೊಳ್ಳುವ ಮೂಲಕ, ಈ ಸಮೀಕರಣದ ಕೆಲವು ಕಾರಣಗಳಿಗೆ ನೆರವಾಗಲು ನಮ್ಮಿಂದ ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ, ಆದರೆ ನಮ್ಮನ್ನು, ಪ್ರಪಂಚವನ್ನು ಮತ್ತು ನಾವು ಏನು ಮಾಡುತ್ತಿದ್ದೇವೆ ಎಂಬುದನ್ನು ದೊಡ್ಡ ವಿಷಯವನ್ನಾಗಿ ನೋಡುವುದಿಲ್ಲ. 

ಬುದ್ಧ ವಿಫಲರಾದರೆ? 

ಇದೊಂದು ದೊಡ್ಡ ಸವಾಲೊಡ್ಡುವ ವಿಷಯವಾಗಿದೆ. ಬುದ್ಧ ತಮ್ಮ ಮಹಾನ್ ಸಹಾನುಭೂತಿ ಮತ್ತು ಬುದ್ಧಿವಂತಿಕೆಯ ಆಧಾರದ ಮೇಲೆ, ಎಲ್ಲಾ ಜೀವಿಗಳಿಗೆ ಪ್ರಯೋಜನವಾಗುವಂತೆ ಅಪ್ರತಿಮ ಜ್ಞಾನೋದಯವನ್ನು ಪಡೆದರು. ಆದರೂ, ನಿಮ್ಮ ಸುತ್ತಲೂ ನೋಡಿ. ಯುದ್ಧಗಳು ನಡೆಯುತ್ತಿವೆ, ಅನ್ಯಾಯ ಮುಂದುವರೆದಿದೆ, ಮತ್ತು ನಾವು ಎಲ್ಲೆಡೆ ದುಃಖವನ್ನು ಕಾಣುತ್ತೇವೆ. ಹಾಗಾದರೆ, ಮಹಾನ್ ಬುದ್ಧ-ಕಾರ್ಯಕರ್ತನಿಗೆ ಏನಾಯಿತು? ಎಲ್ಲರನ್ನೂ ದುಃಖದಿಂದ ಮುಕ್ತಗೊಳಿಸುವುದು ಬುದ್ಧನ ಗುರಿಯಾಗಿದ್ದರೆ, ಅವರು ಯಶಸ್ವಿಯಾದರೆಂದು ನಾವು ಹೇಗೆ ಹೇಳಬಹುದು? 

ಇದು ಬಹಳ ಮುಖ್ಯವಾದ ಪ್ರಶ್ನೆಯಾಗಿದೆ, ಮತ್ತು ಇದರ ಉತ್ತರದ ಗಹನವು, ಬುದ್ಧನ ಬೋಧನೆಗಳ ಬಗ್ಗೆ ಒಬ್ಬರಿಗೆ ಇರುವ ತಿಳುವಳಿಕೆಯ ಗಹನವನ್ನು ಅವಲಂಬಿಸಿರುತ್ತದೆ. ಬುದ್ಧ ರಾತ್ರೋರಾತ್ರಿ ಜಗತ್ತನ್ನು ಪರಿವರ್ತಿಸಲಿಲ್ಲ - ಯಾವುದೋ ಒಂದು ಮಾಯಾ ಮಾಂತ್ರಿಕದಂಡವನ್ನು ಬೀಸುವಂತೆ ಅದು ವಾಸ್ತವದಲ್ಲಿ ಸಾಧ್ಯವಿಲ್ಲ. ಆದರೆ, ಇತರ ಮಹಾನ್ ಕಾರ್ಯಕರ್ತರಂತೆ - ಗಾಂಧಿ ಅಥವಾ ಮಾರ್ಟಿನ್ ಲೂಥರ್ ಕಿಂಗ್ ಬಗ್ಗೆ ಯೋಚಿಸಿ - ಅವರ ಪ್ರಭಾವವು ತ್ವರಿತ ಫಲಿತಾಂಶಗಳಿಂದಲ್ಲ, ಬದಲಿಗೆ ಪ್ರಪಂಚದ ಸವಾಲುಗಳನ್ನು ಎದುರಿಸುವ ಸಂಪೂರ್ಣವಾಗಿ ಹೊಸ ಮಾರ್ಗವನ್ನು ನೀಡುವ ಮೂಲಕ ಬಂದಿತು. ಪರಸ್ಪರ ಅವಲಂಬನೆಯ ವಿಶಾಲ ಜಾಲದಲ್ಲಿ, ಬುದ್ಧನ ಒಳನೋಟಗಳಿಂದ ಜಗತ್ತು ಈಗಾಗಲೇ ಬದಲಾಗಿದೆ ಎಂದು ನಾವು ಹೇಳಬಹುದು. ಸಹಜವಾಗಿ, ನಮ್ಮಲ್ಲಿ ಪ್ರತಿಯೊಬ್ಬರೂ ಬೌದ್ಧ ಬೋಧನೆಗಳನ್ನು ಕೈಗೆತ್ತಿಕೊಂಡು ಅಭ್ಯಾಸ ಮಾಡಬೇಕಾಗುತ್ತದೆ. ನಮ್ಮ ಬಳಿ ಎಲ್ಲವೂ ಇದೆ - ನಮ್ಮ ಬಳಲುತ್ತಿರುವ ಜಗತ್ತಿನಲ್ಲಿ ಬದಲಾವಣೆಗಾಗಿ, ಯಾರೇ ಆದರೂ ಯಾವುದೇ ಸಮಯದಲ್ಲಿ ಬಳಸಬಹುದಾದ ಪ್ರಬಲ ಸಾಧನವನ್ನು ಬುದ್ಧ ಸೇರಿಸಿದ್ದಾರೆ. 

ನಾವು ಸ್ವಲ್ಪ ಆಳವಾಗಿ ನೋಡಿದರೆ, ನಾವು "ಜಗತ್ತು" ಎಂದು ಕರೆಯುವುದು ಏಕತ್ವವಲ್ಲ ಎಂದು ಬುದ್ಧ ಹೇಳುತ್ತಾರೆ. ಇದಕ್ಕೂ ಮೊದಲು ಅನೇಕ ಲೋಕಗಳು ಇದ್ದವು ಮತ್ತು ಮುಂದೆ ಹಲವು ಲೋಕಗಳು ಇರುತ್ತವೆ. ಕೆಲವು ಬೋಧನೆಗಳು ಬಹು-ವಿಶ್ವಗಳು, ಸಮಾನಾಂತರ ಲೋಕಗಳು ಸಹ ಅಸ್ತಿತ್ವದಲ್ಲಿವೆ ಎಂದು ಹೇಳುತ್ತವೆ. ನಮ್ಮ ಪ್ರಪಂಚದ ಸ್ಥಿತಿ - ಅಥವಾ ಯಾವುದೇ ಸಂಭಾವ್ಯ ಪ್ರಪಂಚಗಳಾಗಲಿ - ಮತ್ತು ಅದರ ಭವಿಷ್ಯವು ಸ್ಥಿರವಾಗಿರುವುದಿಲ್ಲ. ಆದರೆ ಒಂದು ವಿಷಯ ಮಾತ್ರ ಖಚಿತ; ಇದು ನಿರಂತರವಾಗಿ ಬದಲಾಗುತ್ತಿರುವ ಜಗತ್ತು ಆಗಿರುವುದರಿಂದ, ನಾವು ಅದರಲ್ಲಿ ಮಾಡುವ ಯಾವುದೇ ಸಕಾರಾತ್ಮಕ ಪರಿಣಾಮವು ಮೌಲ್ಯಯುತವಾಗಿರುತ್ತದೆ. ಕೇವಲ ನಮ್ಮ ದೈಹಿಕ ಕ್ರಿಯೆಗಳು ಮುಖ್ಯವಾಗಿರುವುದಿಲ್ಲ, ಏಕೆಂದರೆ ಬದಲಾವಣೆಯು ಬಾಹ್ಯ ಘಟನೆಗಳ ಮೂಲಕ ಮಾತ್ರ ಬರುವುದಿಲ್ಲ. ಬೌದ್ಧ ಬೋಧನೆಗಳಿಗೆ ಸಂಬಂಧಿಸಿದ ಮಾನಸಿಕ ಚಟುವಟಿಕೆ - ನಮ್ಮ ಆಲೋಚನೆಗಳು, ಆಕಾಂಕ್ಷೆಗಳು ಮತ್ತು ಉದ್ದೇಶಗಳು - ನಮ್ಮ ಕಾರ್ಯಗಳಷ್ಟೇ ಪ್ರಬಲವಾಗಿರುತ್ತವೆ. 

ಜ್ಞಾನೋದಯವು ಎಲ್ಲವನ್ನೂ ಬದಲಾಯಿಸುತ್ತದೆ 

ಕೊನೆಯದಾಗಿ, ಯಾರಾದರೂ ಪೂರ್ಣ ಜ್ಞಾನೋದಯವನ್ನು ತಲುಪಿದಾಗ, ಸಮೀಕರಣವು ಸಂಪೂರ್ಣವಾಗಿ ಬದಲಾಗುತ್ತದೆ. ಸಂಪೂರ್ಣವಾಗಿ ಜ್ಞಾನೋದಯವನ್ನು ಪಡೆದ ಬುದ್ಧನ ಚಟುವಟಿಕೆಯು ಸ್ಥಳ, ಸಮಯ ಅಥವಾ ಗೋಚರತೆಯ ಸಂಪ್ರದಾಯಗಳಿಂದ ಬಂಧಿಸಲ್ಪಟ್ಟಿರುವುದಿಲ್ಲ. ಅವರು ನೀಡುವ ಸಹಾಯವು ಮಾನವ ದೃಷ್ಟಿಗೆ ಯಾವಾಗಲೂ ಸ್ಪಷ್ಟವಾಗಿಲ್ಲದಿರಬಹುದು, ಆದರೆ ಅದು ಅದನ್ನು ಲೆಕ್ಕಿಸದೆ ಮುಂದುವರಿಯುತ್ತದೆ. 

ಆದ್ದರಿಂದ, ಬಹುಶಃ ನಮ್ಮ ಮೂಲ ಪ್ರಶ್ನೆಯ ಉತ್ತರವು ಅಷ್ಟೊಂದು ಜಟಿಲವಾಗಿಲ್ಲ. ನಾವು ಕೈಯಲ್ಲಿರುವ ಸಮಸ್ಯೆಗಳ ಬಗ್ಗೆ ನಮ್ಮ ದೃಷ್ಟಿಕೋನವನ್ನು ವಿಸ್ತರಿಸಿದಾಗ ಮತ್ತು "ನಾನು" ಮತ್ತು "ಜಗತ್ತು", ಪರಸ್ಪರ ಸಂಬಂಧ ಹೊಂದಿವೆ ಮತ್ತು ನಿರಂತರವಾಗಿ ಬದಲಾಗುತ್ತಿವೆ ಎಂದು ನಾವು ನೋಡಿದಾಗ, ಬಹುಸಂಖ್ಯೆಯ ಸಾಧ್ಯತೆಗಳೊಂದಿಗೆ ನಿಜವಾದ ಬದಲಾವಣೆ ಪ್ರಾರಂಭವಾಗುತ್ತದೆ. ಬದಲಾವಣೆಯು ನಿಜವಾಗಿಯೂ ಒಳಗಿನಿಂದ ಪ್ರಾರಂಭವಾಗುತ್ತದೆ, ಆದರೆ ಅದು ಅಲ್ಲಿಯೇ ಕೊನೆಗೊಳ್ಳುವುದಿಲ್ಲ ಎಂದು ಬುದ್ಧ ತೋರಿಸಿದರು. ನಾವು ಸಹ ಸಹಾನುಭೂತಿ ಮತ್ತು ಬುದ್ಧಿವಂತಿಕೆಯ ಅದ್ಭುತ ಗುಣಗಳನ್ನು ಬೆಳೆಸಿಕೊಂಡರೆ, ನಾವು ನಿಜವಾಗಿಯೂ ಶಾಶ್ವತ ಬದಲಾವಣೆಯನ್ನು ತರಬಹುದು. ಆದರೆ ಆ ಮಾರ್ಗವು ಭಯಾನಕವೆನಿಸಿದರೆ ಏನು ಮಾಡುವುದು? ಹಾಗಿದ್ದಲ್ಲಿ ನೀವು ಬುದ್ಧನು ಒಂದು ಕಾಲದಲ್ಲಿ ಇದ್ದ ಸ್ಥಳದಲ್ಲಿದ್ದೀರಿ, ಇದು ಪ್ರಾರಂಭಿಸಲು ಅತ್ಯುತ್ತಮ ಸ್ಥಳವಾಗಿದೆ.

Top