ಚತುರಾರ್ಯ ಸತ್ಯಗಳು: ಒಂದು ಅವಲೋಕನ

12:47
ಪ್ರತಿಯೊಬ್ಬರೂ, ತಮ್ಮ ಜೀವನದುದ್ದಕ್ಕೂ ಸಮಸ್ಯೆಗಳನ್ನು ಮತ್ತು ಅಸಂತೋಷವನ್ನು ಅನುಭವಿಸುತ್ತಾರೆ; ಇತಿಹಾಸದುದ್ದಕ್ಕೂ, ದುಃಖವನ್ನು ಎದುರಿಸಲು, ವಿಭಿನ್ನ ವಿಧಾನಗಳನ್ನು ಪ್ರಸ್ತಾಪಿಸಲಾಗಿದೆ. ಇಂದಿನ ಜಗತ್ತಿನಲ್ಲಿ, ಇಂಟರ್ನೆಟ್ ಮೂಲಕ ಅನೇಕ ತತ್ತ್ವಚಿಂತನೆಗಳನ್ನು ತಕ್ಷಣವೇ ಪಡೆಯಬಹುದಾಗಿದೆ. ನಾವು ಏಕೆ ಬಳಲುತ್ತೇವೆ ಮತ್ತು ನಮ್ಮ ಜೀವನದಲ್ಲಿ ನಾವು ಶಾಂತಿ ಮತ್ತು ಸಂತೋಷವನ್ನು ಹೇಗೆ ಪಡೆಯಬಹುದು ಎಂಬುದರ ಬಗ್ಗೆ ಬುದ್ಧನು, 2,500 ವರ್ಷಗಳ ಹಿಂದೆ, ಕೈತೆಗೆದುಕೊಂಡ ವಿಶಿಷ್ಟವಾದ ವಿಧಾನದ ಬಗ್ಗೆ ಇಲ್ಲಿ ನೋಡೋಣ.

ಪರಿಚಯ 

ಬೌದ್ಧ ಧರ್ಮದ ಬಗ್ಗೆ ಮೊದಲ ಬಾರಿ ತಿಳಿಯುವಾಗ, ಚತುರಾರ್ಯ ಸತ್ಯಗಳ ಬಗ್ಗೆ ತಿಳಿಯುವುದು ಒಳ್ಳೆಯದಾಗಿರುತ್ತದೆ. ಇದು ಸೂಕ್ತವಾಗಿರುತ್ತದೆ, ಏಕೆಂದರೆ ಬುದ್ಧನು ಬೋಧಿಸಲು ಪ್ರಾರಂಭಿಸಿದಾಗ, ಅವರು ಇಲ್ಲಿಂದಲೇ ಶುರುಮಾಡಿದರು. ಆಗಾಗಲೇ ಬುದ್ಧನ ಕಾಲದಲ್ಲಿ, ಧಾರ್ಮಿಕ ಮತ್ತು ತಾತ್ವಿಕ ವ್ಯವಸ್ಥೆಗಳು ಬಹಳಷ್ಟಿದ್ದವು, ಮತ್ತು ಇಂದು ನಾವು ಇನ್ನೂ ವಿಶಾಲವಾದ ಆಧ್ಯಾತ್ಮಿಕ ಬೋಧನೆಗಳ ವಿಧಾನಗಳನ್ನು ಕಾಣಬಹುದಾಗಿದೆ. ಆದ್ದರಿಂದ, ನಾವು ಬೌದ್ಧಧರ್ಮದ ಬಗ್ಗೆ ಮಾತನಾಡುವಾಗ, ಬೌದ್ಧ ವಿಧಾನದ ವಿಶಿಷ್ಟತೆ ಏನು ಎಂಬುದನ್ನು ಗುರುತಿಸುವುದು ಮುಖ್ಯವಾಗಿದೆ. ಸಹಜವಾಗಿ, ಇತರ ಧಾರ್ಮಿಕ ಬೋಧನೆಗಳಲ್ಲಿ ಕಾಣಬಹುದಾದ ಅನೇಕ ಸಾಮಾನ್ಯ ಬೋಧನೆಗಳನ್ನು ಬೌದ್ಧಧರ್ಮದಲ್ಲೂ ಕಾಣಬಹುದು: ದಯೆ, ಪ್ರೀತಿಯಿಂದ ತುಂಬಿದ ವ್ಯಕ್ತಿಯಾಗಿರುವುದು, ಯಾರಿಗೂ ಹಾನಿಯಾಗದಂತೆ ನೋಡಿಕೊಳ್ಳುವುದು, ಇತ್ಯಾದಿ. ಪ್ರತಿಯೊಂದು ಧರ್ಮ ಮತ್ತು ತತ್ತ್ವಶಾಸ್ತ್ರಗಳಲ್ಲಿ ನಾವು ಈ ಅಂಶಗಳನ್ನು ಕಾಣಬಹುದು, ಮತ್ತು ಬೌದ್ಧಧರ್ಮದಲ್ಲಿ ದಯೆ, ಪ್ರೀತಿ ಮತ್ತು ಸಹಾನುಭೂತಿಯನ್ನು ಅಭಿವೃದ್ಧಿಪಡಿಸುವ ಸಾಕಷ್ಟು ಅಮೂಲ್ಯವಾದ ವಿಧಾನಗಳಿದ್ದರೂ, ಅವುಗಳ ಬಗ್ಗೆ ತಿಳಿದುಕೊಳ್ಳಲು, ಬೌದ್ಧಧರ್ಮದ ಕಡೆಗೆ ತಿರುಗುವ ಅಗತ್ಯವಿಲ್ಲ. ನಾವು ಬೌದ್ಧ ಬೋಧನೆಗಳ ಇತರ ವಿಷಯಗಳನ್ನು ಸ್ವೀಕರಿಸಲಿ, ಸ್ವೀಕರಿಸದಿರಲಿ, ಈ ವಿಧಾನಗಳನ್ನು ನಮ್ಮ ಪ್ರಯೋಜನಕ್ಕಾಗಿ ಬಳಸಬಹುದು. 

ಆದರೆ, ನಾವು "ಬೌದ್ಧ ಧರ್ಮಕ್ಕೆ ನಿರ್ದಿಷ್ಟವಾದದ್ದು ಏನು?" ಎಂದು ಪ್ರಶ್ನಿಸಿದರೆ, ನಾವು ಚತುರಾರ್ಯ ಸತ್ಯಗಳ ಬಗ್ಗೆ ತಿಳಿಯಬೇಕಾಗಿದೆ. ಇವುಗಳ ಕುರಿತಾದ ನಮ್ಮ ಚರ್ಚೆಯೊಳಗೆ ಸಹ ನಾವು ಇತರ ಧರ್ಮಗಳೊಂದಿಗಿನ ಸಮಾನತೆಗಳನ್ನು ಕಾಣಬಹುದು. 

ನಮ್ಮ ಬಳಿ "ನೋಬಲ್ ಟ್ರುತ್" ಎಂಬ ಅಭಿವ್ಯಕ್ತಿಯಿದೆ, ಆದರೆ ಇದು ವಿಚಿತ್ರವಾದ ಅನುವಾದವಾಗಿರುವುದು. "ನೋಬಲ್" ಎಂಬ ಪದವು ಮಧ್ಯಕಾಲೀನ ಶ್ರೀಮಂತರನ್ನು ಸೂಚಿಸುವಂತಿದೆ, ಆದರೆ ವಾಸ್ತವದಲ್ಲಿ ಇದು, ಉನ್ನತಮಟ್ಟದ ಅರಿವಿಕೆಯನ್ನು ಗಳಿಸದವರನ್ನು ಸೂಚಿಸುತ್ತದೆ. ಹೀಗೆ ಚತುರಾರ್ಯ ಸತ್ಯಗಳು ನಾಲ್ಕು ಸಂಗತಿಗಳಾಗಿದ್ದು, ಇವುಗಳು, ವಾಸ್ತವವನ್ನು ಕಲ್ಪನಾರಹಿತವಾಗಿ ಕಂಡವರಿಗೆ ಸತ್ಯವೆಂದು ತೋರುತ್ತದೆ. ಈ ನಾಲ್ಕು ಸಂಗತಿಗಳು ನಿಜವಾಗಿದ್ದರೂ, ಹೆಚ್ಚಿನ ಜನರು ಅವುಗಳನ್ನು ಅರ್ಥಮಾಡಿಕೊಳ್ಳುವುದಿಲ್ಲ ಮತ್ತು ಹೆಚ್ಚಿನವರಿಗೆ ಅವುಗಳ ಬಗ್ಗೆ ತಿಳಿದಿರುವುದಿಲ್ಲ. 

Top