ಸಾವಧಾನತೆ: ಇದು ಒಳಗೊಂಡಿರುವ ಮಾನಸಿಕ ಅಂಶಗಳು

ಸಾವಧಾನತೆಯ ಅಭ್ಯಾಸವು ಸಾಂಪ್ರದಾಯಿಕ ಬೌದ್ಧ ಮೂಲಗಳಿಂದ ಬಂದಿರುತ್ತದೆ. ಅವುಗಳಿಂದ, ಸಾವಧಾನತೆಯ ಅಭ್ಯಾಸವು ಪೂರ್ಣಗೊಳ್ಳಲು ಅದರೊಂದಿಗೆ ಇರಬೇಕಾದ ವಿವಿಧ ಮಾನಸಿಕ ಅಂಶಗಳನ್ನು ನಾವು ಕಲಿಯುತ್ತೇವೆ. ಮಾನಸಿಕ ಅಂಶಗಳು, ಅದರ ಅರಿವಿಗೆ ಅರ್ಹತೆ ನೀಡುವ ಅಥವಾ ಸಹಾಯ ಮಾಡುವ ವಸ್ತುವನ್ನು ಅರಿತುಕೊಳ್ಳುವ ವಿಧಾನಗಳಾಗಿವೆ. ಅವು ಆಸಕ್ತಿಯಂತಹ ಅರಿವನ್ನು ಸ್ಥಾಪಿಸುವ ಅಂಶಗಳನ್ನು ಒಳಗೊಂಡಿರುತ್ತದೆ; ಏಕಾಗ್ರತೆಯಂತಹ, ಆಸಕ್ತಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುವ ಅಂಶಗಳನ್ನು ಒಳಗೊಂಡಿರುತ್ತದೆ ; ಮತ್ತು ಪ್ರೀತಿ ಅಥವಾ ಕೋಪದಂತಹ ಅದನ್ನು ಬಣ್ಣಿಸುವ ಭಾವನೆಗಳನ್ನು ಒಳಗೊಂಡಿರುತ್ತದೆ. ನಮ್ಮ ಸಾವಧನತೆಯ ಅಭ್ಯಾಸದಲ್ಲಿ ಸಂಬಂಧಿತ ಅಂಶಗಳ ಬಗ್ಗೆ ಕಲಿಯುವ ಮತ್ತು ಸೇರಿಸುವ ಮೂಲಕ, ನಾವು ಅದರಿಂದ ಗರಿಷ್ಠ ಪ್ರಯೋಜನವನ್ನು ಪಡೆಯುತ್ತೇವೆ.

"ಸಾವಧಾನತೆಯ" ಅಭ್ಯಾಸವನ್ನು ಆಧುನಿಕ ಪಾಶ್ಚಿಮಾತ್ಯ ಸಮಾಜದಲ್ಲಿ ಒತ್ತಡವನ್ನು ಕಡಿಮೆ ಮಾಡಲು, ನೋವನ್ನು ನಿರ್ವಹಿಸಲು ಮತ್ತು ಕೆಲಸ ಅಥವಾ ಸಾಮಾನ್ಯವಾಗಿ ಜೀವನವನ್ನು ನಿಭಾಯಿಸುವಲ್ಲಿ ಪರಿಣಾಮಕಾರಿತ್ವವನ್ನು ಹೆಚ್ಚಿಸುವ ವಿಧಾನವಾಗಿ ವ್ಯಾಪಕವಾಗಿ ಅಳವಡಿಸಿಕೊಳ್ಳಲಾಗಿದೆ. ವಿವಿಧ ಬೌದ್ಧ ಧ್ಯಾನ ಅಭ್ಯಾಸಗಳಿಂದ ಪಡೆದ ಸಾವಧಾನತೆಯ ತರಬೇತಿಯು ನಮ್ಮ ಮನಸ್ಸನ್ನು ಶಾಂತಗೊಳಿಸುವುದು ಮತ್ತು ನಮ್ಮ ಉಸಿರಾಟ, ನಮ್ಮ ಆಲೋಚನೆಗಳು, ಭಾವನೆಗಳು, ಸಂತೋಷ ಅಥವಾ ದುಃಖದ ಭಾವನೆಗಳು, ದೈಹಿಕ ಸಂವೇದನೆಗಳು ಮತ್ತು ಮುಂತಾದವುಗಳನ್ನು ನೋಡುವುದನ್ನು ಒಳಗೊಂಡಿರುತ್ತದೆ. ಸಾಮಾನ್ಯವಾಗಿ, ಈ ತರಬೇತಿಯನ್ನು ನಮ್ಮ ಮನಸ್ಸಿನ ನಿರಂತರವಾಗಿ ಬದಲಾಗುತ್ತಿರುವ ವಸ್ತುಗಳ ನಿರಂತರವಾಗಿ ಬದಲಾಗುತ್ತಿರುವ ಪ್ರಸ್ತುತದ ಕ್ಷಣವನ್ನು ವೀಕ್ಷಿಸುವಂತೆ ಪ್ರಸ್ತುತಪಡಿಸಲಾಗುತ್ತದೆ. 

ಭಾರತೀಯ ಬೌದ್ಧ ಮೂಲಗಳು 

ಮನಸ್ಸಿನ ಥೆರವಾದ ಪ್ರಸ್ತುತಿ (ಪಾಲಿ: ಸತಿ) ಉಪತಿಸ್ಸನ ವಿಮೋಚನೆಯ ಮಾರ್ಗ (ಪಾಲಿ: ವಿಮುತ್ತಿಮಗ್ಗ) ಮತ್ತು ಬುದ್ಧಘೋಷನ ಶುದ್ಧೀಕರಣದ ಮಾರ್ಗ (ಪಾಲಿ: ವಿಶುದ್ಧಿಮಗ್ಗ) ಗಳನ್ನು ಆಧರಿಸಿದೆ. ಅಲ್ಲಿ, ಪ್ರಜ್ಞೆಯನ್ನು ಅನೇಕ ಬಗೆಯ ಧ್ಯಾನಗಳ ಅವಿಭಾಜ್ಯ ಅಂಶವೆಂದು ವಿವರಿಸಲಾಗಿದೆ. ಧ್ಯಾನದೊಳಗೆ, ಪ್ರಜ್ಞೆಯು ಸ್ಮರಣೀಯ ಅಥವಾ ಸ್ಮರಣೀಯತೆಯ ವಿಶಿಷ್ಟ ಲಕ್ಷಣವನ್ನು ಹೊಂದಿರುತ್ತದೆ, ಯಾವಾಗಲೂ ಉಸಿರು ಅಥವಾ ಸಾವಿನ ಸತ್ಯವನ್ನು ನೆನಪಿಸಿಕೊಳ್ಳುವಂತೆ. ಇದರ ಕಾರ್ಯವೆಂದರೆ ಮರೆಯದೆ ಇರುವುದಾಗಿರುತ್ತದೆ ಮತ್ತು ಅದು ಮನಸ್ಸು ತನ್ನ ವಸ್ತುವನ್ನು ಕಳೆದುಕೊಳ್ಳದಂತೆ ರಕ್ಷಿಸುವಂತೆ ವ್ಯಕ್ತವಾಗುತ್ತದೆ. ಒಂದು ಅರ್ಥದಲ್ಲಿ, ಪ್ರಜ್ಞೆಯು ಒಂದು ರೀತಿಯ "ಮಾನಸಿಕ ಅಂಟು" ಆಗಿದ್ದು ಅದು ತನ್ನ ಗಮನದ ವಸ್ತುವನ್ನು ಬಿಟ್ಟುಕೊಡದೆ ಹಿಡಿದಿಟ್ಟುಕೊಳ್ಳುತ್ತದೆ. ಒಮ್ಮೆ ಅದು ಒಂದು ವಸ್ತುವಿನ ಮೇಲೆ ಸ್ಥಾಪಿತವಾದ ನಂತರ, ಅಶಾಶ್ವತತೆಯಂತಹ ಆ ವಸ್ತುವಿನ ಕೆಲವು ವೈಶಿಷ್ಟ್ಯದ ಬಗ್ಗೆ ವಿವೇಚನಾತ್ಮಕ ಅರಿವಿನೊಂದಿಗೆ ಸಾವಧಾನತೆಯೊಂದಿಗೆ ಇರಬೇಕು. 

ಹೀನಯಾನ ವೈಭಾಷಿಕ ಶಾಲೆಯನ್ನು ಪ್ರತಿನಿಧಿಸುವ ವಸುಬಂಧು, ತಮ್ಮ ಟ್ರೆಷರ್ ಹೌಸ್ ಆಫ್ ಸ್ಪೆಷಲ್ ಟಾಪಿಕ್ಸಸ್ ಆಫ್ ನಾಲೆಡ್ಜ್ (Skt. ಅಭಿಧರ್ಮಕೋಶ) ದಲ್ಲಿ, ಸಾವಧಾನತೆಯನ್ನು (Skt. ಸ್ಮೃತಿ) ಅರಿವಿನ ಎಲ್ಲಾ ಕ್ಷಣಗಳ ಜೊತೆಯಲ್ಲಿರುವ ಹತ್ತು ಮಾನಸಿಕ ಅಂಶಗಳಲ್ಲಿ ಒಂದಾಗಿ ಪಟ್ಟಿ ಮಾಡಿದ್ದಾರೆ. ಆ ಅರಿವುಗಳು ಇತರ ರಚನಾತ್ಮಕ, ವಿನಾಶಕಾರಿ ಅಥವಾ ಅನಿರ್ದಿಷ್ಟ (ನೈತಿಕವಾಗಿ ತಟಸ್ಥ) ಮಾನಸಿಕ ಅಂಶಗಳೊಂದಿಗೆ ಇದ್ದರೂ ಅದು ಅವುಗಳೊಂದಿಗೆ ಇರುತ್ತದೆ. ಹೀಗಾಗಿ, ಧ್ಯಾನದ ಸಂದರ್ಭದಲ್ಲಿ ಮಾತ್ರವಲ್ಲದೆ, ಸಾವಧಾನತೆ ಎಲ್ಲಾ ಸಮಯದಲ್ಲೂ ಇರುತ್ತದೆ. 

ಟ್ರೆಷರ್ ಹೌಸ್ ಆಫ್ ಸ್ಪೆಷಲ್ ಟಾಪಿಕ್ಸಸ್ ಆಫ್ ನಾಲೆಡ್ಜ್”ನ(Skt. ಅಭಿಧರ್ಮಕೋಶ-ಭಾಷ್ಯ) ವ್ಯಾಖ್ಯಾನದಲ್ಲಿ, ವಸುಬಂಧು ಸಾವಧಾನತೆಯನ್ನು, ಅದರ ವಸ್ತುವನ್ನು ಬಿಟ್ಟುಕೊಡದಿರುವುದು ಅಥವಾ ಮರೆಯದಿರುವುದರ ಮಾನಸಿಕ ಅಂಶವೆಂದು ವ್ಯಾಖ್ಯಾನಿಸುತ್ತಾರೆ, ಹೀಗಾಗಿ ಅದು ಅದರ ವಸ್ತುವಿನ ಅಪೇಕ್ಷೆ ಅಥವಾ ಅದರ ವಸ್ತುವಿನ ಟಿಪ್ಪಣಿಯನ್ನು ಒಳಗೊಂಡಿರುತ್ತದೆ. ಆ ವಸ್ತುವನ್ನು ಅಪೇಕ್ಷಿಸುವ ಅಥವಾ ಗಮನಿಸುವುದರಿಂದ, ಸಾವಧಾನತೆಯು ನಮಗೆ ಆ ವಸ್ತುವನ್ನು ನಂತರ ನೆನಪಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. 

ತನ್ನ ಮಹಾಯಾನ ಚಿತ್ತಮಾತ್ರ ಪಠ್ಯವಾದ, ಐದು ಸಮುಚ್ಚಯಗಳ ಚಿಕಿತ್ಸೆ (ಸ್ಕಟ್. ಪಂಚಸ್ಕಂಧ-ಪ್ರಕರಣ) ದಲ್ಲಿ, ವಸುಬಂಧು ಒಂದು ವಸ್ತುವನ್ನು ನೆನಪಿಸಿಕೊಳ್ಳುವ ಸಂದರ್ಭದಲ್ಲಿ ನಿರ್ದಿಷ್ಟವಾಗಿ ಸಾವಧಾನತೆಯನ್ನು ಪ್ರಸ್ತುತಪಡಿಸುತ್ತಾರೆ. ಹೀಗಾಗಿ ಅವರು, ಸಾವಧಾನತೆಯು ಪರಿಚಿತ ವಸ್ತುವನ್ನು ಮರೆಯದೆ, ಅದನ್ನು ಮತ್ತೊಮ್ಮೆ ಗಮನಿಸುವ ಮಾನಸಿಕ ಸ್ಥಿತಿ ಎಂದು ಹೇಳುತ್ತಾರೆ. ಈ ಪಠ್ಯದ ವ್ಯಾಖ್ಯಾನದಲ್ಲಿ, ಸ್ಥಿರಮತಿ ಅವರು "ಪರಿಚಿತ ವಸ್ತು" ಎಂದರೆ ನಾವು ಮೊದಲು ಅನುಭವಿಸಿದ ವಿಷಯ ಎಂದು ವಿವರಿಸುತ್ತಾರೆ. ಹೀಗಾಗಿ, ಒಂದು ವಸ್ತುವನ್ನು ನೆನಪಿಸಿಕೊಳ್ಳುವುದು ವಸ್ತುವಿನ ಧ್ಯಾನದ ಸಂದರ್ಭದಲ್ಲಿ ಅಥವಾ ಏನನ್ನಾದರೂ ನೆನಪಿಸಿಕೊಳ್ಳುವ ದೈನಂದಿನ ಘಟನೆಗಳಲ್ಲಿ ಆಗಿರಬಹುದು. 

ಅಸಂಗ, ತಮ್ಮ ಚಿತ್ತಮಾತ್ರ ಪಠ್ಯವಾದ, ಜ್ಞಾನದ ವಿಶೇಷ ವಿಷಯಗಳ ಸಂಕಲನ (ಸ್ಕಟ್. ಅಭಿಧರ್ಮಸಮುಚ್ಯ) ದಲ್ಲಿ, ಸಾವಧಾನತೆಯನ್ನು ಐದು ಖಚಿತವಾದ ಮಾನಸಿಕ ಅಂಶಗಳಲ್ಲಿ ಒಂದಾಗಿ ಪ್ರಸ್ತುತಪಡಿಸುತ್ತಾರೆ. ಈ ಐದರಲ್ಲಿ ಒಂದಾಗಿ, ಸಾವಧಾನತೆಯು ರಚನಾತ್ಮಕ ಅರಿವುಗಳಲ್ಲಿ ಮತ್ತು ಅವುಗಳ ವಸ್ತುಗಳನ್ನು ಗ್ರಹಿಸುವ ರಚನಾತ್ಮಕ ಅರಿವುಗಳಲ್ಲಿ ಮಾತ್ರ ಸಂಭವಿಸುವ ಮಾನಸಿಕ ಅಂಶವಾಗಿದೆ, ಬೇರೆ ರೀತಿಯಲ್ಲಿ ಹೇಳುವುದಾದರೆ ಅವುಗಳ ವಸ್ತುಗಳನ್ನು ನಿಖರವಾಗಿ ಮತ್ತು ನಿರ್ಣಾಯಕವಾಗಿ ಅರಿಯುವ ಅರಿವು. ಅದರ ವಸ್ತುವು ನಮಗೆ ಪರಿಚಿತವಾಗಿರುವ ರಚನಾತ್ಮಕವಾಗಿರಬೇಕು; ಅದರ ಅಂಶವೆಂದರೆ ಅದು ಈ ವಸ್ತುವಿನ ಮೇಲೆ ಕೇಂದ್ರೀಕೃತವಾಗಿರಬೇಕು ಮತ್ತು ಅದನ್ನು ಮರೆತುಬಿಡಬಾರದು ಅಥವಾ ಕಳೆದುಕೊಳ್ಳಬಾರದು; ಮತ್ತು ಅದರ ಕಾರ್ಯವೆಂದರೆ ಮಾನಸಿಕ ಅಲೆದಾಡುವಿಕೆಯನ್ನು ತಡೆಯುವುದು. 

ತ್ಸೋಂಗ್ಖಾಪಾ ಅವರ ಪ್ರಸ್ತುತಿ 

ಕ್ರಮವಾದ ಹಂತಗಳ ಅದ್ಭುತವಾದ ಪ್ರಸ್ತುತಿ (ಲ್ಯಾಮ್-ರಿಮ್ ಚೆನ್-ಮೋ) ನಲ್ಲಿ, ಹೀರಿಕೊಳ್ಳಲ್ಪಟ್ಟ ಏಕಾಗ್ರತೆ (ಸ್ಕಟ್. ಸಮಾಧಿ) ಮತ್ತು ನಿಶ್ಚಲ ಮತ್ತು ಸ್ಥಿರವಾದ ಮನಸ್ಸಿನ ಸ್ಥಿತಿ (ಸ್ಕಟ್. ಶಮತ) ವನ್ನು ಅಭಿವೃದ್ಧಿಪಡಿಸುವ ವಿಭಾಗದಲ್ಲಿ, ಟಿಬೆಟಿಯನ್ ಮಾಸ್ಟರ್ ತ್ಸೋಂಗ್‌ಖಾಪಾ ಅವರು ಅಸಂಗಾ ಅವರ ಸಾವಧಾನತೆಯ ವ್ಯಾಖ್ಯಾನವನ್ನು ವಿವರಿಸುತ್ತಾರೆ. ಶಮತ ಧ್ಯಾನದ ಸಂದರ್ಭದಲ್ಲಿ ಸಾವಧಾನತೆ (ಟಿಬ್. ಡ್ರಾನ್-ಪಾ) ಮೂರು ಗುಣಲಕ್ಷಣಗಳನ್ನು ಹೊಂದಿದೆ ಎಂದು ಅವರು ವಿವರಿಸುತ್ತಾರೆ: 

  • ಇದು ಪರಿಚಯವಿಲ್ಲದ ಯಾವುದೋ ವಸ್ತುವಿನ ಮೇಲೆ ಅಲ್ಲ, ನಮಗೆ ಈ ಹಿಂದೆ ಪರಿಚಿತವಾಗಿರುವ ವಸ್ತುವಿನ ಮೇಲೆ ಕೇಂದ್ರೀಕರಿಸುತ್ತದೆ. ಹೀಗಾಗಿ ಅದರ ವಸ್ತುವು ನಾವು ಖಚಿತವಾಗಿರುವ ವಿಷಯವಾಗಿದೆ ಮತ್ತು ಬುದ್ಧನ ದೃಶ್ಯೀಕರಿಸಿದ ಚಿತ್ರದಂತೆ ರಚನಾತ್ಮಕವಾಗಿರಬಹುದು ಅಥವಾ ದೇಹದಂತೆ ಅನಿರ್ದಿಷ್ಟ (ನೈತಿಕವಾಗಿ ತಟಸ್ಥ) ಆಗಿರಬಹುದು. 
  • ವಸ್ತುವಿನ ಮೇಲೆ ಅದರ ಮಾನಸಿಕ ಹಿಡಿತವು ನಾವು ವಸ್ತುವನ್ನು ಮರೆಯಲಾಗದಿರುವಂತೆ ಇರುತ್ತದೆ. “ಮರೆಯಲಾಗದು" ಎಂದರೆ ಯಾರಾದರೂ ನಮ್ಮನ್ನು ಕೇಳಿದಾಗ ಮಾತ್ರ, ಅಭ್ಯಾಸದ ಸೂಚನೆಗಳು ಏನೆಂದು ಅಥವಾ ನಮ್ಮ ಗಮನದಲ್ಲಿರುವ ವಸ್ತು ಹೀಗಿದೆ ಅಥವಾ ಹಾಗಿದೆ ಎಂದು ನಾವು ನೆನಪಿಸಿಕೊಳ್ಳಬಹುದು ಎಂದಲ್ಲ. ಇದರರ್ಥ ನಾವು ನಮ್ಮ ಮನಸ್ಸನ್ನು ಕೇಂದ್ರೀಕೃತ ವಸ್ತುವಿಗೆ ಕಟ್ಟಿದ ತಕ್ಷಣ, ಮಾನಸಿಕ ಅಲೆದಾಟದ ಸ್ವಲ್ಪವೂ ಗೊಂದಲವಿಲ್ಲದೆ ನಾವು ಅದನ್ನು ಮಾನಸಿಕವಾಗಿ ಹಿಡಿದಿಟ್ಟುಕೊಳ್ಳುತ್ತೇವೆ. ನಮ್ಮ ಗಮನವು ಸ್ವಲ್ಪ ಅಲೆದಾಡಿದರೂ, ನಾವು ನಮ್ಮ ಪ್ರಜ್ಞೆಯನ್ನು ಕಳೆದುಕೊಳ್ಳುತ್ತೇವೆ. ಆದ್ದರಿಂದ ನಮ್ಮ ಗಮನವನ್ನು ಒಂದು ಕೇಂದ್ರೀಕೃತ ವಸ್ತುವಿನ ಮೇಲೆ ಇರಿಸಿ ಮತ್ತು ನಾನು ನನ್ನ ಮನಸ್ಸನ್ನು ಈ ವಸ್ತುವಿನೊಂದಿಗೆ ಈ ರೀತಿ ಕಟ್ಟಿದ್ದೇನೆ ಎಂಬ ಆಲೋಚನೆಯನ್ನು ಹುಟ್ಟುಹಾಕಿದ ನಂತರ, ವಿವೇಚನಾಯುಕ್ತವಾಗಿ (ಮೌಖಿಕವಾಗಿ) ಹೊಸದನ್ನು ಯೋಚಿಸದ ಮನಸ್ಸಿನ ಸ್ಥಿತಿಯೊಂದಿಗೆ, ಇದರ ಮುರಿಯದ ಶಕ್ತಿಯ ನಿರಂತರತೆಯನ್ನು ಬೆಳೆಸಿಕೊಳ್ಳುವುದು ನಮ್ಮನ್ನು ಜಾಗರೂಕತೆಗೆ ಒಪ್ಪಿಸುವ ಮಾರ್ಗವಾಗಿದೆ. ಹಾಗಾದರೆ, ಸಾವಧಾನತೆಯಿಂದಿರುವುದು ನಮ್ಮನ್ನು ನಮ್ಮ ವೈದ್ಯರು ಅಥವಾ ನಮ್ಮ ಆಧ್ಯಾತ್ಮಿಕ ಶಿಕ್ಷಕರಿಗೆ ನಮ್ಮನ್ನು ಒಪ್ಪಿಸಿದಂತೆ ಇರುತ್ತದೆ. ಒಬ್ಬ ವ್ಯಕ್ತಿಯು ಸಂಪೂರ್ಣವಾಗಿ ಅರ್ಹನಾಗಿದ್ದಾನೆ ಎಂದು ನಮಗೆ ವಿಶ್ವಾಸವಿದ್ದಾಗ ಮಾತ್ರ ನಾವು ನಮ್ಮನ್ನು ವೈದ್ಯ ಅಥವಾ ಆಧ್ಯಾತ್ಮಿಕ ಶಿಕ್ಷಕರಿಗೆ ನಮ್ಮನ್ನು ನಾವು ಒಪ್ಪಿಸುತ್ತೇವೆ. ಅಂತೆಯೇ, ನಮ್ಮ ಮನಸ್ಸಿನ ಸ್ಥಿತಿಯು ವಾಸ್ತವಿಕವಾಗಿ ಸಾವಧಾನತೆಯ ಸ್ಥಿತಿಯಾಗಿರಲು ಅರ್ಹತೆಗಳನ್ನು ಪೂರೈಸಿದಾಗ ಮಾತ್ರ ನಾವು ನಮ್ಮನ್ನು ಸಾವಧಾನತೆಗೆ ಒಪ್ಪಿಸುತ್ತೇವೆ. 
  • ಇದರ ಕಾರ್ಯವೆಂದರೆ ನಮ್ಮ ಮನಸ್ಸು ಬೇರೆ ಯಾವುದಾದರೂ ಕೇಂದ್ರೀಕೃತ ವಸ್ತುವಿಗೆ ವಿಚಲಿತವಾಗಲು ಬಿಡದಿರುವುದು. ಇನ್ನಷ್ಟು ಸಂಪೂರ್ಣವಾಗಿ, ಸಾವಧಾನತೆಯು ನಮ್ಮ ಗಮನವನ್ನು ಗಮನವಿರುವ ವಸ್ತುವನ್ನು ಮರೆತುಬಿಡುವುದನ್ನು ಅಥವಾ ಕಳೆದುಕೊಳ್ಳುವುದನ್ನು ತಡೆಯುತ್ತದೆ; ಇದು ಸಹಿಷ್ಣುತೆಯೊಂದಿಗೆ ಈ ವಸ್ತುವಿನ ಮೇಲೆ ನಮ್ಮ ಗಮನವನ್ನು ಹಿಡಿದಿಟ್ಟುಕೊಳ್ಳುತ್ತದೆ; ಮತ್ತು ಇದು ಈ ವಸ್ತುವಿನೊಂದಿಗೆ ಪರಿಚಿತತೆಯ ನಿರಂತರತೆಯನ್ನು ಕಾಪಾಡಿಕೊಳ್ಳುತ್ತದೆ. 

ಸಾವಧಾನತೆ ಧ್ಯಾನ 

ಶಮಥ ಎಂಬ ಶಾಂತ ಮತ್ತು ಸ್ಥಿರವಾದ ಮನಸ್ಸಿನ ಸ್ಥಿತಿಯನ್ನು ಸಾಧಿಸಲು ಅಭ್ಯಾಸ ಮಾಡುವಾಗ, ಧ್ಯಾನದಲ್ಲಿ ಗಮನದ ವಸ್ತುವು ಸ್ಥಿರವಾಗಿರುತ್ತದೆ, ಉದಾಹರಣೆಗೆ ದೃಶ್ಯೀಕರಿಸಿದ ಬುದ್ಧನ ಮೇಲೆ ಕೇಂದ್ರೀಕರಿಸುವಾಗ. ಆದರೆ, ಆಧುನಿಕ ಪಾಶ್ಚಿಮಾತ್ಯ ಸಮಾಜದಲ್ಲಿ ಕಲಿಸಿದಂತೆ, ಸಾವಧಾನತೆಯ ಅಭ್ಯಾಸದಲ್ಲಿ, ವಸ್ತುವು ನಮ್ಮ ಮಾನಸಿಕ ಅಥವಾ ದೈಹಿಕ ಅರಿವಿನ ನಿರಂತರವಾಗಿ ಬದಲಾಗುತ್ತಿರುವ ವಸ್ತುಗಳ ನಿರಂತರವಾಗಿ ಬದಲಾಗುತ್ತಿರುವ ಪ್ರಸ್ತುತ ಕ್ಷಣವಾಗಿರುತ್ತದೆ. ಇದು ವಸ್ತುವಿನ ವಿಷಯದಲ್ಲಿ, ಸಾವಧಾನತೆಯ ಥೆರವಾದ ಪ್ರಸ್ತುತಿಗೆ ಅನುಗುಣವಾಗಿದೆ, ಮತ್ತು ವಸುಬಂಧುವಿನ ವೈಭಾಷಿಕ ಪ್ರಸ್ತುತಿಗೆ ಅನುಗುಣವಾಗಿ, ಸಾವಧಾನತೆಯು ಅರಿವಿನ ಎಲ್ಲಾ ಕ್ಷಣಗಳೊಂದಿಗೆ ಇರುತ್ತದೆ. ಆದರೆ, ವಸುಬಂಧು ಮತ್ತು ಅಸಂಗ ತಮ್ಮ ಚಿತ್ತಮಾತ್ರ ಪಠ್ಯಗಳಲ್ಲಿ ನಿರ್ದಿಷ್ಟಪಡಿಸಿದಂತೆ, ವಸ್ತುವು, ಬುದ್ಧನ ಭೌತಿಕ ನೋಟದಂತಹ, ನಾವು ಈ ಹಿಂದೆ ಪರಿಚಿತವಾಗಿರುವ ವಿಷಯವಾಗಿರುವುದಿಲ್ಲ. ಬದಲಾಗಿ, ನಾವು ಪ್ರತಿ ಕ್ಷಣದಲ್ಲಿ ಏನನ್ನು ಅನುಭವಿಸುತ್ತಿದ್ದೇವೆ ಎಂಬುದರ ಮೇಲೆ ಕೇಂದ್ರೀಕರಿಸಲು ಪ್ರಯತ್ನಿಸುತ್ತೇವೆ - ದೈಹಿಕ ಸಂವೇದನೆ, ಆಲೋಚನೆ, ಭಾವನೆ. ಆದರೆ, ಅಸಂಗ ಹೇಳಿದಂತೆ, ನಾವು ಅವುಗಳ ಮೇಲೆ ನಿಖರತೆ ಮತ್ತು ನಿರ್ಣಾಯಕತೆಯಿಂದ ಗಮನಹರಿಸುತ್ತೇವೆ. 

ನಾವು ಅಭಿವೃದ್ಧಿಪಡಿಸಲು ಪ್ರಯತ್ನಿಸುವ ವರ್ತಮಾನದ ಕ್ಷಣದ ಸಾವಧಾನತೆಯ ಸ್ಥಿತಿಯು ವಾಸ್ತವವಾಗಿ ಮನಸ್ಸಿನ ಬೌದ್ಧ ವಿಶ್ಲೇಷಣೆಯಲ್ಲಿ ನಿರ್ದಿಷ್ಟಪಡಿಸಿದ ಹಲವಾರು ಮಾನಸಿಕ ಅಂಶಗಳ ಮಿಶ್ರಣವಾಗಿರುತ್ತದೆ. ಬಳಸಲಾಗುವ ಮುಖ್ಯವಾದವುಗಳು, ಸಾವಧಾನತೆ, ಜಾಗರೂಕತೆ ಮತ್ತು ಕಾಳಜಿಯುಳ್ಳ ಮನೋಭಾವ. ಸಾವಧಾನತೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಅಭ್ಯಾಸ ಮಾಡಲು, ಈ ಅಂಶಗಳಲ್ಲಿ ಪ್ರತಿಯೊಂದನ್ನು ಗುರುತಿಸುವುದು ಸಹಾಯಕವಾಗಿದೆ, ಇದರಿಂದಾಗಿ ಯಾವ ಶಕ್ತಿಯ ಕೊರತೆಯಿದ್ದರೂ, ನಾವು ಅವುಗಳನ್ನು ಸರಿಹೊಂದಿಸಬಹುದು. 

ಸಾವಧಾನತೆ 

"ಮಾನಸಿಕ ಅಂಟು" ಎಂದು ಕರೆಯಲ್ಪಡುವ ಸಾವಧಾನತೆ ಸ್ವತಃ ಎರಡು ಹೆಚ್ಚುವರಿ ಮಾನಸಿಕ ಅಂಶಗಳೊಂದಿಗೆ ಇರಬೇಕು: ವ್ಯತ್ಯಾಸ (ಗುರುತಿಸುವಿಕೆ) ಮತ್ತು ಪರಿಗಣನೆ (ಮನಸ್ಸಿಗೆ ತೆಗೆದುಕೊಳ್ಳುವುದು). 

"ವ್ಯತ್ಯಾಸ" (ಟಿಬ್. 'ದು-ಶೆಸ್, ಸ್ಕತ್. ಸಂಜ್ಞ) ನಮ್ಮ ಅನುಭವದ ಪ್ರತಿ ಕ್ಷಣವನ್ನು ರೂಪಿಸುವ ವಿವಿಧ ಘಟಕಗಳ ವಿಶಿಷ್ಟ ಲಕ್ಷಣಗಳ ಮೇಲೆ ಕೇಂದ್ರೀಕರಿಸುತ್ತದೆ. ಇದು ಇವುಗಳನ್ನು ಉಳಿದೆಲ್ಲದರಿಂದ ಪ್ರತ್ಯೇಕಿಸುತ್ತದೆ. ಉದಾಹರಣೆಗೆ, ನಾವು ಇರುವ ಕೋಣೆಯ ತಾಪಮಾನದಂತಹ ನಾವು ಏಕಕಾಲದಲ್ಲಿ ಅನುಭವಿಸುತ್ತಿರುವ ಇತರ ದೈಹಿಕ ಸಂವೇದನೆಗಳಿಂದ ನೋವಿನ ಭೌತಿಕ ಸಂವೇದನೆಯನ್ನು ಪ್ರತ್ಯೇಕಿಸುತ್ತದೆ. ಸರಿಯಾದ ಪರಿಗಣನೆಯು ವಸ್ತುವನ್ನು ಅದು ಏನೆಂದು ನಿಖರವಾಗಿ ಪರಿಗಣಿಸುತ್ತದೆ - ನೋವು ಕೇವಲ ದೈಹಿಕ ಸಂವೇದನೆಯಷ್ಟೆ, ಹೆಚ್ಚಲ್ಲ ಕಡಿಮೆಯಲ್ಲ. 

ವ್ಯತ್ಯಾಸ ಮತ್ತು ಸರಿಯಾದ ಪರಿಗಣನೆಯೊಂದಿಗಿನ ಸಾವಧಾನತೆಯೊಂದಿಗೆ, ನಾವು ನಿರಂತರವಾಗಿ ಬದಲಾಗುತ್ತಿರುವ ವರ್ತಮಾನದ ಕ್ಷಣದ ವಿಷಯಗಳ ಮೇಲೆ ಗಮನಹರಿಸಲು ಪ್ರಯತ್ನಿಸುತ್ತೇವೆ. ನಮ್ಮ ಗಮನದ ವಸ್ತುವಾಗಿ ವರ್ತಮಾನದ ಕ್ಷಣದ ವಿಷಯಗಳನ್ನು ಕಳೆದುಕೊಳ್ಳದೆ, ನಾವು ಅದನ್ನು ಮಾಡಲು ಪ್ರಯತ್ನಿಸುತ್ತೇವೆ. ಹಿಂದಿನ ಕ್ಷಣಗಳಲ್ಲಿ ನಾವು ಏನನ್ನು ಅನುಭವಿಸಿದ್ದೇವೆ ಅಥವಾ ಭವಿಷ್ಯದ ಕ್ಷಣಗಳಲ್ಲಿ ನಾವು ಏನನ್ನು ಅನುಭವಿಸಬಹುದು ಎಂಬುದರ ಕುರಿತು ನಾವು ಯೋಚಿಸುತ್ತಿರುವುದರಿಂದ ವ್ಯಾಕುಲತೆ ಹೆಚ್ಚಾಗಿ ಸಂಭವಿಸುತ್ತದೆ. ನಂತರ ಭೂತಕಾಲ ಅಥವಾ ಭವಿಷ್ಯದ ಈ ಆಲೋಚನೆಗಳು ಕೇವಲ ಈಗ ಸಂಭವಿಸುತ್ತಿವೆ ಎಂಬ ಅಂಶವನ್ನು ನಾವು ಕಳೆದುಕೊಳ್ಳುತ್ತೇವೆ. ನಾವು ಅವುಗಳನ್ನು ನಮ್ಮ ವರ್ತಮಾನದ ಅನುಭವದ ಕ್ಷಣದ ವಿಷಯವೆಂದು ಗುರುತಿಸುವುದನ್ನು ನಿಲ್ಲಿಸುತ್ತೇವೆ ಮತ್ತು ಬದಲಾಗಿ ಅವುಗಳ "ಕಥೆಯ ರೇಖೆಯಲ್ಲಿ" ಲೀನರಾಗುತ್ತೇವೆ. ಪರಿಣಾಮವಾಗಿ, ಈ ಆಲೋಚನೆಗಳಿಂದ ನಾವು ನಮ್ಮ ಗಮನದ ವಸ್ತುವನ್ನು ಕಳೆದುಕೊಳ್ಳುತ್ತೇವೆ. ಆದರೆ, ನಾವು ವಿಚಲಿತರಾಗದ ಮನಸ್ಸಿನ ಸ್ಥಿತಿಯನ್ನು ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾದರೆ, ಅದರ ಗಮನದ ವಸ್ತುವನ್ನು ಮರೆಯದ ಸ್ಥಿರವಾದ ಸಾವಧಾನತೆಯನ್ನು ಸಾಧಿಸಿದ್ದೇವೆ. ಈ ರೀತಿಯಾಗಿ, ನಮ್ಮ ಅನುಭವದ ನಿರಂತರವಾಗಿ ಬದಲಾಗುತ್ತಿರುವ ವರ್ತಮಾನದ ಕ್ಷಣದ ಮೇಲೆ ನಮ್ಮ ಗಮನವನ್ನು ಹಿಡಿದಿಡಲು, ಸಾವಧಾನತೆಯು ಮಾನಸಿಕ ಅಂಟಾಗಿ ಕಾರ್ಯನಿರ್ವಹಿಸುತ್ತದೆ.

ಅಸಂಗ ಅವರ "ಮಧ್ಯಮವನ್ನು ತೀವ್ರಗಳಿಂದ ಪ್ರತ್ಯೇಕಿಸುವುದು" (ಸ್ಕಟ್. ಮಧ್ಯಮಂತವಿಭಾಗ) ಎಂಬ ಪುಸ್ತಕದ ತಮ್ಮ ವ್ಯಾಖ್ಯಾನದಲ್ಲಿ, ಸಾವಧಾನತೆಯನ್ನು ಕಾಪಾಡಿಕೊಳ್ಳಲು ಸಹಾಯವಾಗಿ, ನಾವು ಕಾಲಕಾಲಕ್ಕೆ ನಮ್ಮ ಗಮನದ ವಸ್ತುವನ್ನು ನೆನಪಿಸಿಕೊಳ್ಳಬೇಕು ಎಂದು ಸ್ಥಿರಮತಿಯವರು ವಿವರಿಸುತ್ತಾರೆ. ಇದರರ್ಥ ನಾವು ನಮ್ಮ ಸಾವಧಾನತೆಯ ಹಿಡಿತವನ್ನು ಬಲವಾಗಿ ಇಟ್ಟುಕೊಳ್ಳಲು ಮಾನಸಿಕವಾಗಿ ಒಂದು ಕೀಲಿ ಪದವನ್ನು ಅನ್ನು ಹೇಳುವುದು. ಸಾವಧಾನತೆಯು ಅದರ ವಸ್ತುವನ್ನು ಗಮನಿಸುವುದನ್ನು ಒಳಗೊಂಡಿರುತ್ತದೆ ಎಂಬ ವಸುಬಂಧು ಅವರ ಹೇಳಿಕೆಗೆ ಇದು ಅನುಗುಣವಾಗಿದೆ. ತ್ಸೋಂಗ್‌ಖಾಪಾ, ಈ ಅಂಶವನ್ನು ವಿವರಿಸುತ್ತಾರೆ: "ನೀವು ಇದನ್ನು ಚರ್ಚಾಸ್ಪದ ಚಿಂತನೆ ಆದ್ದರಿಂದ ಮೌಖಿಕವಾಗಿ ನೆನಪಿಸಿಕೊಳ್ಳುವುದಿಲ್ಲ ಎಂದು ಹೇಳಿ ನಿರಾಕರಿಸಿದರೆ, ಬಲವಾದ ಸಾವಧಾನತೆ ಮತ್ತು ಜಾಗರೂಕತೆಯನ್ನು ಬೆಳೆಸಿಕೊಳ್ಳುವುದು ಬಹಳಾ ಕಷ್ಟಕರವಾಗಿರುತ್ತದೆ.” 

ಜಾಗರೂಕತೆ 

ಜಾಗರೂಕತೆ (ಟಿಬ್. ಶೆಸ್-ಬ್ಜಿನ್, ಸ್ಕತ್. ಸಂಪ್ರಜನ್ಯ) ಎಂಬುದು ಗಮನದ ವಸ್ತುವಿನ ಮೇಲಿನ ಮನಸ್ಸಿನ ಹಿಡಿತದ ಸ್ಥಿತಿಯ ಮೇಲ್ವಿಚಾರಣೆ ಮಾಡುವ ಮತ್ತು ಪರಿಶೀಲಿಸುವ ಮಾನಸಿಕ ಅಂಶವಾಗಿದೆ. ಇದು ನಮ್ಮ ಗಮನದ ವಸ್ತುವಿನ ಮೇಲೆ - ನಮ್ಮ ಪ್ರಸ್ತುತ ಅನುಭವದ ಕ್ಷಣದ ವಿಷಯಗಳ ಮೇಲೆ - ಜಾಗರೂಕತೆಯನ್ನು ಕಾಪಾಡಿಕೊಳ್ಳುವ ಸಂದರ್ಭದಲ್ಲಿ ಕಾರ್ಯನಿರ್ವಹಿಸುತ್ತದೆ. ಒಂದು ಅರ್ಥದಲ್ಲಿ, ಜಾಗರೂಕತೆಯು ಬಲವಾದ ಸಾವಧಾನತೆಯ ಒಂದು ಭಾಗವಾಗಿದೆ. ತ್ಸೋಂಗ್‌ಖಾಪಾ ಗಮನಿಸಿದಂತೆ, ನಮ್ಮ ಸಾವಧಾನತೆಯು ಬಲಗೊಂಡಂತೆ, ನಾವು ವಿಚಲಿತರಾಗದೆ ಜಾಗರೂಕರಾಗಿರಲು ಹೆಚ್ಚು ಒಗ್ಗಿಕೊಳ್ಳುತ್ತೇವೆ. ಇದರ ಪರಿಣಾಮವಾಗಿ, ನಾವು ವಾಸ್ತವದಲ್ಲಿ ವಿಚಲಿತರಾದಾಗ ಗಮನಿಸಲು ಹೆಚ್ಚು ಸಂವೇದನಾಶೀಲರಾಗುತ್ತೇವೆ. ಈ ರೀತಿಯಾಗಿ, ನಮ್ಮ ಸಾವಧಾನತೆಯು ಬಲವಾದಂತೆ, ನಮ್ಮ ಜಾಗರೂಕತೆಯು ಬಲವಾಗಿರುತ್ತದೆ. 

ನಾವು ದ್ವಂದ್ವಾರ್ಥದ ಪರಿಭಾಷೆಯಲ್ಲಿ ಜಾಗರೂಕತೆಯನ್ನು, ಸ್ವತಂತ್ರವಾಗಿ ಅಸ್ತಿತ್ವದಲ್ಲಿರುವ ಕಾವಲುಗಾರ ಮನಸ್ಸು ತರಬೇತಿ ಮನಸ್ಸಿನ ಮೇಲೆ ನಿಗಾ ಇರಿಸಿರುವ ಹಾಗೆ, ಸಂಪೂರ್ಣವಾಗಿ ಪ್ರತ್ಯೇಕವಾಗಿರುವುದಾಗಿ ಭಾವಿಸಬಾರದು. ಮತ್ತೊಂದೆಡೆ ತ್ಸೋಂಗ್‌ಖಾಪಾ, ನಾವು ಸಾವಧಾನತೆ ಮತ್ತು ಜಾಗರೂಕತೆ ಎರಡನ್ನೂ ಎಚ್ಚರಿಕೆಯಿಂದ ಪ್ರತ್ಯೇಕಿಸಬೇಕಾಗಿದೆ ಎಂದು ಸೂಚಿಸುತ್ತಾರೆ. ಅವರು ಎಚ್ಚರಿಸುತ್ತಾರೆ, “ಟಿಬೆಟ್‌ನ ಅನೇಕ ಧ್ಯಾನಸ್ಥರಂತೆ, ನೀವು ಈ ಎಲ್ಲಾ ಮನಸ್ಥಿತಿಗಳನ್ನು ಗೊಂದಲಗೊಳಿಸಿ ಮಿಶ್ರಣ ಮಾಡಿದರೆ ಮತ್ತು ಈ ವ್ಯತ್ಯಾಸಗಳನ್ನು ಮಾಡದಿದ್ದರೆ, ಇತ್ತೀಚಿನ ದಿನಗಳಲ್ಲಿ ಎಲ್ಲವೂ ಗೊಂದಲಮಯವಾಗಿರುತ್ತದೆ ಮತ್ತು ಅವರು ನಿಜವಾಗಿಯೂ ಹೀರಿಕೊಳ್ಳುವ ಏಕಾಗ್ರತೆಯ ಸ್ಥಿತಿಯನ್ನು ಪಡೆಯುತ್ತಾರೆಯೇ ಎಂದು ನನಗೆ ಸಂದೇಹವಿದೆ.” 

ಜಾಗರೂಕತೆಯು ನಮ್ಮ ಸಾವಧಾನತೆಯಲ್ಲಿನ ವಿಚಲನಗಳನ್ನು ಗಮನಿಸುವುದಲ್ಲದೆ, ಒಂದು ಅರ್ಥದಲ್ಲಿ, ಆಂತರಿಕ "ಎಚ್ಚರಿಕೆ ವ್ಯವಸ್ಥೆಯನ್ನು" ಪ್ರಚೋದಿಸುತ್ತದೆ, ಇದರಿಂದಾಗಿ ಗಮನವನ್ನು ಪುನಃಸ್ಥಾಪಿಸುವುದರೊಂದಿಗೆ, ನಾವು ನಮ್ಮ ಗಮನವನ್ನು ಸರಿಪಡಿಸುತ್ತೇವೆ ಮತ್ತು ಸಾವಧಾನತೆಯನ್ನು ಮರುಸ್ಥಾಪಿಸುತ್ತೇವೆ. ಆದರೆ, ಜಾಗರೂಕತೆ ಮತ್ತು ಗಮನವನ್ನು ಪುನಃಸ್ಥಾಪಿಸುವುದು ಅವುಗಳ ಕಾರ್ಯಗಳನ್ನು ನಿರ್ವಹಿಸಲು, ನಾವು ಸಾವಧಾನತೆ ಅಭ್ಯಾಸದ ಮೂರನೇ ಪ್ರಮುಖ ಅಂಶವನ್ನು ಬಳಸಿಕೊಳ್ಳಬೇಕು: ಕಾಳಜಿಯುಳ್ಳ ವರ್ತನೆ. 

ಕಾಳಜಿಯುಳ್ಳ ವರ್ತನೆ 

ಕಾಳಜಿಯುಳ್ಳ ವರ್ತನೆ (ಟಿಬ್. ಬ್ಯಾಗ್-ಯೋದ್, ಸ್ಕಟ್. ಅಪ್ರಮದ; ಜಾಗರೂಕತೆ, ಆತ್ಮಸಾಕ್ಷಿತ್ವ) ನಮ್ಮ ಮನಸ್ಸಿನ ಸ್ಥಿತಿಯ ಬಗ್ಗೆ ಕಾಳಜಿ ವಹಿಸುವ ಮತ್ತು ಜಾಗರೂಕರಾಗಿರುವ ಮಾನಸಿಕ ಅಂಶವಾಗಿದೆ. ಇದು ನಮ್ಮ ಮನಸ್ಸನ್ನು ವಿನಾಶಕಾರಿ ಬದಿಗೆ ವಾಲದಂತೆ ರಕ್ಷಿಸುತ್ತದೆ ಮತ್ತು ಅದನ್ನು ರಚನಾತ್ಮಕ, ಸಕಾರಾತ್ಮಕ ಬದಿಯಲ್ಲಿ ಇಡುತ್ತದೆ. ಹೀಗಾಗಿ, ಕಾಳಜಿಯುಳ್ಳ ಮನೋಭಾವದೊಂದಿಗೆ, ನಾವು ನಮ್ಮ ಮನಸ್ಸಿನ ಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸುತ್ತೇವೆ; ನಾವು ಅದರ ಬಗ್ಗೆ "ಕಾಳಜಿ ವಹಿಸುತ್ತೇವೆ". ಈ ನಿಟ್ಟಿನಲ್ಲಿ, ಕಾಳಜಿಯುಳ್ಳ ಮನೋಭಾವವು, ವಸುಬಂಧು ಅವರು ಸಾವಧಾನತೆಯ ಭಾಗವೆಂದು ವಿವರಿಸುವ ಗಮನದ ವಸ್ತುವನ್ನು ಅಪೇಕ್ಷಿಸುವ ಮಾನಸಿಕ ಅಂಶಕ್ಕೆ ಸ್ವಲ್ಪಮಟ್ಟಿಗೆ ಹೋಲುತ್ತದೆ. 

ವಸುಬಂಧು ಅವರು, ಒಂದು ನಿರ್ದಿಷ್ಟ ಕ್ಷಣದಲ್ಲಿ ನಮ್ಮ ಗಮನದಲ್ಲಿರುವ ವಸ್ತುವನ್ನು ಅಪೇಕ್ಷಿಸದಿದ್ದರೆ, ಬೇರೆ ರೀತಿಯಲ್ಲಿ ಹೇಳುವುದಾದರೆ, ಒಂದು ಅರ್ಥದಲ್ಲಿ, ನೆನಪಿಟ್ಟುಕೊಳ್ಳಲು ಯೋಗ್ಯವಾದ ವಿಷಯವಾಗಿ, ನಾವು ಅದನ್ನು ಹಿಡಿದಿಟ್ಟುಕೊಳ್ಳದಿದ್ದರೆ ನಾವು ಅದನ್ನು ನೆನಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಹೇಳುತ್ತಾರೆ. ಆದರೆ, ಕಾಳಜಿಯುಳ್ಳ ಮನೋಭಾವವು ಅಪೇಕ್ಷೆಗಿಂತ ಹೆಚ್ಚಿನದನ್ನು ಒಳಗೊಂಡಿದೆ. ಇದು ಕೇವಲ ಗಮನದ ವಸ್ತುವನ್ನು ನೆನಪಿಸಿಕೊಳ್ಳುವಂತೆ ಅದರ ಬಗ್ಗೆ ಕಾಳಜಿ ವಹಿಸುವುದಲ್ಲ. ಬದಲಿಗೆ, ನಮ್ಮ ಕಾಳಜಿಯುಳ್ಳ ಮನೋಭಾವದಿಂದಾಗಿ, ಜಾಗರೂಕತೆಯು, ಅದು ದೋಷಪೂರಿತವಾಗಿದೆ ಎಂದು ಪತ್ತೆ ಮಾಡಿದಾಗ, ನಮ್ಮ ಸಾವಧಾನತೆಯ ಮಾನಸಿಕ ಹಿಡಿತವನ್ನು ಸರಿಪಡಿಸಲು ನಾವು ಗಮನವನ್ನು ಪುನಃಸ್ಥಾಪಿಸಲು ಪ್ರೇರೇಪಿಸಲ್ಪಡುತ್ತೇವೆ. ಕಾಳಜಿಯುಳ್ಳ ಮನೋಭಾವವಿಲ್ಲದೆ, ನಾವು ವಿಚಲಿತರಾಗಿದ್ದೇವೆ ಎಂದು ನಾವು ಗಮನಿಸಿದರೂ ಸಹ, ನಮ್ಮ ಗಮನದ ವಸ್ತು, ಪ್ರಸ್ತುತ ಕ್ಷಣವನ್ನು ನಾವು ಮರೆತಿದ್ದೇವೆ ಎಂದು ನಾವು ಕಾಳಜಿ ವಹಿಸುವುದಿಲ್ಲ. ಹೀಗಿದ್ದಲ್ಲಿ, ಕಾಳಜಿಯುಳ್ಳ ಮನೋಭಾವವು ನೈತಿಕ ಸ್ವಯಂ-ಶಿಸ್ತಿನ ಆಧಾರವಾಗಿದೆ, ಅದರೊಂದಿಗೆ ನಾವು ವಿನಾಶಕಾರಿ ನಡವಳಿಕೆಯಿಂದ ದೂರವಿರುತ್ತೇವೆ. 

ಕಾಳಜಿಯುಳ್ಳ ಮನೋಭಾವಕ್ಕಾಗಿ ಇರುವ ಟಿಬೆಟಿಯನ್ ಪದ, ಬ್ಯಾಗ್-ಯೋದ್, ಅಕ್ಷರಶಃ "ಎಚ್ಚರಿಕೆಯನ್ನು ಹೊಂದಿರುವುದು" ಎಂದರ್ಥ. ಇದರ ವಿರುದ್ಧವಾಗಿ ಬ್ಯಾಗ್-ಮೆದ್, ಎಚ್ಚರಿಕೆಯ ಕೊರತೆ, ಅಜಾಗರೂಕತೆಯಾಗಿರುತ್ತದೆ. ಆದರೆ, ಟಿಬೆಟಿಯನ್ ಭಾಷೆಗೆ ಬ್ಯಾಗ್-ಯೋದ್ ಎಂದು ಅನುವಾದಿಸಲಾದ ಮೂಲ ಸಂಸ್ಕೃತವು ಅಪ್ರಮದ, ಇದರರ್ಥ "ಪ್ರಮದವಲ್ಲ." ಪ್ರಮದ ಎಂದರೆ ಕುಡಿತ ಅಥವಾ ಮಾನಸಿಕವಾಗಿ ಅಸ್ಥಿರ, ಅಂದರೆ ನಾವು ಏನು ಹೇಳುತ್ತೇವೆ ಅಥವಾ ಮಾಡುತ್ತೇವೆ ಎಂಬುದರ ಬಗ್ಗೆ ಕಾಳಜಿ ವಹಿಸುವುದಿಲ್ಲ, ಅಥವಾ ಅವುಗಳೆರಡರ ಬಗ್ಗೆಯೂ ಕಾಳಜಿ ವಹಿಸುವುದಿಲ್ಲ. ಕಾಳಜಿಯುಳ್ಳ ಮನೋಭಾವದಿಂದ, ನಾವು ಕುಡಿದ ವ್ಯಕ್ತಿಯಂತೆ ಇರುವುದಿಲ್ಲ. ನಾವು ಸಮಚಿತ್ತರು, ಸಂಯಮದಿಂದ ಕೂಡಿರುತ್ತೇವೆ ಮತ್ತು ಜವಾಬ್ದಾರಿಯುತರು, ಆದ್ದರಿಂದ ನಮ್ಮ ಮನಸ್ಸಿನ ಸ್ಥಿತಿಯ ಬಗ್ಗೆ ಕಾಳಜಿ ವಹಿಸುತ್ತೇವೆ. 

ಸಾರಾಂಶ 

ಹಾಗಾದರೆ, ಸಾವಧಾನತೆಯ ಅಭ್ಯಾಸವು ಮಾನಸಿಕ ಅಂಶಗಳ ಸಂಕೀರ್ಣ ಜಾಲವನ್ನು ಬಳಸಿಕೊಳ್ಳುತ್ತದೆ, ಎಲ್ಲವೂ ನಮ್ಮ ಪ್ರಸ್ತುತ ಅನುಭವದ ಕ್ಷಣದ ನಿರಂತರವಾಗಿ ಬದಲಾಗುತ್ತಿರುವ ವಿಷಯಗಳ ಮೇಲೆ ಕೇಂದ್ರೀಕರಿಸುತ್ತದೆ. ಸಾವಧಾನತೆ, ಜಾಗರೂಕತೆ ಮತ್ತು ಕಾಳಜಿಯುಳ್ಳ ಮನೋಭಾವದ ಮೂರು ಮುಖ್ಯ ಅಂಶಗಳ ಜೊತೆಗೆ, ಇದು ವ್ಯತ್ಯಾಸ, ಸರಿಯಾದ ಪರಿಗಣನೆ, ನೈತಿಕ ಸ್ವಯಂ-ಶಿಸ್ತು ಮತ್ತು ಅಗತ್ಯವಿದ್ದಾಗ, ಗಮನವನ್ನು ಪುನಃಸ್ಥಾಪಿಸುವುದನ್ನು ಸಹ ಒಳಗೊಂಡಿರುತ್ತದೆ. ಹೀಗಾಗಿ, ಈ ಪ್ರತಿಯೊಂದು ಅಂಶಗಳನ್ನು ಖಚಿತವಾಗಿ ಪ್ರತ್ಯೇಕಿಸಲು ನಮಗೆ ವಿವೇಚನಾತ್ಮಕ ಅರಿವಿನ ಅಗತ್ಯವಿದೆ. ಆದ್ದರಿಂದ, ಸಾವಧಾನತೆ ಧ್ಯಾನದ ಸಂದರ್ಭದಲ್ಲಿ, ಅರಿವನ್ನು ವಿವೇಚಿಸುವುದು, ನಮ್ಮ ಅನುಭವದ ಪ್ರತಿ ಕ್ಷಣದ ಅಶಾಶ್ವತತೆಯಂತಹ ಗಮನದ ವಸ್ತುವಿನ ಕೆಲವು ಅಂಶಗಳ ಮೇಲೆ ಮಾತ್ರ ಕೇಂದ್ರೀಕರಿಸುವುದಕ್ಕೆ ಸೀಮಿತವಾಗಿರುವುದಿಲ್ಲ. ನಾವು ಧ್ಯಾನಿಸುವಾಗ ನಮ್ಮ ಮನಸ್ಸಿನ ಸ್ಥಿತಿಯ ವಿವಿಧ ಅಂಶಗಳ ಮೇಲೂ ಇದು ಕೇಂದ್ರೀಕರಿಸುತ್ತದೆ.

ತ್ಸೋಂಗ್‌ಖಾಪಾ, ನಿಶ್ಚಲ ಮತ್ತು ಸ್ಥಿರ ಸ್ಥಿತಿಯಾದ ಶಮಥವನ್ನು ಅಭಿವೃದ್ಧಿಪಡಿಸುವ ಬಗ್ಗೆ, ಭಾರತೀಯ ಮಹಾನ್ ಬೌದ್ಧ ಗುರುಗಳ ಅಧಿಕೃತ ಗ್ರಂಥಗಳನ್ನು ಅವಲಂಬಿಸುವ ಅಗತ್ಯದ ಬಗ್ಗೆ ತಮ್ಮ ಚರ್ಚೆಯಲ್ಲಿ ಒತ್ತಿಹೇಳುತ್ತಾರೆ. ಅವರು ಹೀಗೆ ಸಲಹೆ ನೀಡುತ್ತಾರೆ: 

ಕುರುಡು ಉತ್ಸಾಹದಿಂದ ನಿಮ್ಮನ್ನು ನೀವು ಬಲವಾಗಿ ತಳ್ಳುವುದರ ಮೇಲೆ ಭರವಸೆಯಿಡಬೇಡಿ. ಆರ್ಯಶೂರ ಕಾಂಪೆಂಡಿಯಮ್ ಆಫ್ ದಿ ಫಾರ್-ರೀಚಿಂಗ್‌.ಆಟಿಟ್ಯೂಡ್ನಲ್ಲಿ ಬರೆದಂತೆ (ಸ್ಕಟ್. ಪರಮಿತಸಮಾಸ), “ಕೇವಲ ಉತ್ಸಾಹವನ್ನು ಬಳಸಿಕೊಂಡು, ನೀವು ಸುಸ್ತಾಗುತ್ತೀರಿ. ಆದರೆ ನೀವು ವಿವೇಚನಾತ್ಮಕ ಅರಿವಿನ ಸಹಾಯದಿಂದ ನಿಮ್ಮನ್ನು ಬೆಳೆಸಿಕೊಂಡರೆ, ನೀವು ಉತ್ತಮ ಉದ್ದೇಶಗಳನ್ನು ಸಾಧಿಸುವಿರಿ.” 
Top