ಕೆಲವೊಮ್ಮೆ ಜೀವನದ ಸವಾಲುಗಳನ್ನು ಹೇಗೆ ನಿಭಾಯಿಸಬೇಕು ಮತ್ತು ನಮ್ಮ ಸಕಾರಾತ್ಮಕ ಗುರಿಗಳನ್ನು ಹೇಗೆ ಸಾಧಿಸಬೇಕು ಎಂಬುದನ್ನು ಅರ್ಥಮಾಡಿಕೊಳ್ಳಲಾಗದೆ, ದಾರಿಗಾಣದಂತಾಗುತ್ತದೆ. ಇತರರೊಂದಿಗೆ ಚೆನ್ನಾಗಿ ಬೆರೆಯುವುದು ಹೇಗೆ ಎಂಬುದರ ಕುರಿತೂ ನಮಗೆ ದಿಕ್ಕುತೋಚದಂತಾಗುತ್ತದೆ. ಸಾಂಪ್ರದಾಯಿಕ ಬೌದ್ಧ ಬೋಧನೆಗಳಲ್ಲಿ, ಎಲ್ಲರಿಗೂ - ಯಾವುದೇ ಸಮಯದಲ್ಲಾಗಲಿ, ಯಾವುದೇ ಸಂಸ್ಕೃತಿಯಾಗಿರಲಿ - ಉಪಯುಕ್ತವಾಗಬಹುದಾದ ಪ್ರಾಯೋಗಿಕ ಮಾರ್ಗಸೂಚಿಗಳು ಹೇರಳವಾಗಿವೆ.
ಇತರರಿಗೆ ಸಹಾಯ ಮಾಡಲು ಬೆಳೆಸಿಕೊಳ್ಳಬೇಕಾದ ಗುಣಗಳು
- ಉದಾರತೆ - ನಿಮ್ಮ ಸಮಯ, ಸಲಹೆ, ಸಹಾಯ ಮತ್ತು ಆಸ್ತಿಯೊಂದಿಗೆ
- ಸ್ವಯಂ-ಶಿಸ್ತು - ವಿನಾಶಕಾರಿ ವರ್ತನೆ ಅಥವಾ ಮಾತನಾಡುವ ರೀತಿಯನ್ನು ದೂರಮಾಡಲು ಮತ್ತು ಇತರರಿಗೆ ನೀವು ಯಾವುದೇ ರೀತಿಯಲ್ಲಿ ಸಹಾಯ ಮಾಡಲು
- ತಾಳ್ಮೆ - ಇತರರಿಗೆ ಸಹಾಯ ಮಾಡುವಲ್ಲಿನ ತೊಂದರೆಗಳಿಂದ ಕೋಪಗೊಳ್ಳದೆ ಅಥವಾ ನಿರಾಶೆಗೊಳ್ಳದೆ ಇರುವುದು
- ಧೈರ್ಯ ಮತ್ತು ಸಹಿಷ್ಣುತೆ - ಸಂದರ್ಭಗಳು ಎಷ್ಟೇ ಕಠಿಣವಾಗಿದ್ದರೂ ಮುಂದುವರಿಯಬೇಕು.
- ಮಾನಸಿಕ ಮತ್ತು ಭಾವನಾತ್ಮಕ ಸ್ಥಿರತೆ – ದಾರಿ ತಪ್ಪದೆ, ಏಕಾಗ್ರತೆಯಿಂದಿರಬೇಕು
- ತಾರತಮ್ಯ - ಯಾವುದು ಸಹಾಯಕ ಮತ್ತು ಹಾನಿಕಾರಕ ಎಂಬುದರ ನಡುವೆ, ಮತ್ತು ಯಾವುದು ಸೂಕ್ತ ಮತ್ತು ಅನುಚಿತವಾಗಿದೆ ಎಂಬುದರ ನಡುವಿನ ವ್ಯತ್ಯಾಸವನ್ನು ಗುರುತಿಸಲು.
ಇತರರ ಮೇಲೆ ಸಕಾರಾತ್ಮಕ ಪ್ರಭಾವ ಬೀರುವ ಮಾರ್ಗಗಳು
- ಉದಾರವಾಗಿರಿ - ನಿಮ್ಮ ಸಮಯ, ಆಸಕ್ತಿ ಮತ್ತು ಶಕ್ತಿಯೊಂದಿಗೆ
- ದಯಾಮಯಿಯಾಗಿ ಮಾತನಾಡಿ – ನಿಮ್ಮ ಮಾತು ಮಾತ್ರವಲ್ಲ, ಅದನ್ನು ಹೇಳುವ ರೀತಿ ಮತ್ತು ಅದರಿಂದ ಇತರರ ಮೇಲೆ ಬೀರುವ ಪರಿಣಾಮದ ಬಗ್ಗೆ ಗಮನವಿರಲಿ
- ಅರ್ಥಪೂರ್ಣವಾದ ರೀತಿಯಲ್ಲಿ ಮಾತನಾಡಿ ಮತ್ತು ವರ್ತಿಸಿ - ಇತರರು ತಮ್ಮ ರಚನಾತ್ಮಕ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವಂತೆ ಪ್ರೋತ್ಸಾಹಿಸಿ
- ಉತ್ತಮ ಉದಾಹರಣೆಯಾಗಿರಿ – ನೀವು ನೀಡುವ ಸಲಹೆಗಳನ್ನು ನೀವೇ ಅನುಸರಿಸಿ
ನಿಮ್ಮ ಸಕಾರಾತ್ಮಕ ಗುರಿಗಳನ್ನು ಸಾಧಿಸುವ ಮಾರ್ಗಗಳು
- ನಿಮ್ಮ ಗುರಿಯ ಬಗ್ಗೆ ಸ್ಪಷ್ಟವಾಗಿರಿ - ಅದು ವಾಸ್ತವಿಕವಾಗಿದೆ ಎಂದು ಖಚಿತಪಡಿಸಿಕೊಳ್ಳಿ ಮತ್ತು ಅದನ್ನು ಸಾಧಿಸುವ ನಿಮ್ಮ ಸಾಮರ್ಥ್ಯದಲ್ಲಿ ವಿಶ್ವಾಸವಿಡಿ
- ಸ್ವಯಂ-ಶಿಸ್ತನ್ನು ಕಾಪಾಡಿಕೊಳ್ಳಿ - ಅಡ್ಡದಾರಿ ಹಿಡಿಯದೆ ಅಥವಾ ಸಾಧನೆಯ ದಾರಿಯಲ್ಲಿ ಅಪಾಯಕ್ಕೆ ಸಿಲುಕದಂತೆ ನೋಡಿಕೊಂಡು, ನಿಮ್ಮ ಗುರಿಯ ಮೇಲೆ ಕೇಂದ್ರೀಕರಿಸಿ
- ಉದಾರವಾಗಿರಿ – ನಿಮ್ಮ ಗುರಿಯತ್ತ ಕೆಲಸ ಮಾಡಲು ನಿಮ್ಮ ಸಮಯ ಮತ್ತು ಶ್ರಮದೊಂದಿಗೆ ಉದಾರವಾಗಿರಿ
- ಮುಕ್ತ ಮನಸ್ಸಿನವರಾಗಿರಿ - ನಿಮ್ಮ ಗುರಿಯನ್ನು ಸಾಧಿಸಲು ಸಹಾಯ ಮಾಡುವುದೆಲ್ಲವನ್ನೂ ಕಲಿಯುವುದನ್ನು ಮುಂದುವರಿಸಿ
- ಸ್ವಾಭಿಮಾನದ ಪ್ರಜ್ಞೆಯನ್ನು ಕಾಪಾಡಿಕೊಳ್ಳಿ - ನಿಮ್ಮ ಗುರಿಯನ್ನು ಸಾಧಿಸಲು ತೊಂದರೆಯನ್ನುಂಟುಮಾಡುವ ಅವಮಾನಕರ ರೀತಿಯಲ್ಲಿ ವರ್ತಿಸಬೇಡಿ
- ಕಾಳಜಿಯನ್ನು ಕಾಪಾಡಿಕೊಳ್ಳಿ - ಯಾವುದೇ ಬೇಜವಾಬ್ದಾರಿಯ ವರ್ತನೆಯು ನಿಮ್ಮ ತಂಡದ ಮೇಲೆ ಹೇಗೆ ನಕರಾತ್ಮಕ ಪರಿಣಾಮವನ್ನು ಬೀರುತ್ತದೆ ಎಂಬುದರ ಬಗ್ಗೆ ಗಮನವಿರಲಿ
- ಎಚ್ಚರಿಕೆಯಿಂದ ಭೇದಭಾವ ಮಾಡಿ - ಯಾವುದು ಸಹಾಯ ಮಾಡುತ್ತದೆ ಮತ್ತು ಯಾವುದು ನಿಮ್ಮ ಪ್ರಗತಿಗೆ ಅಡ್ಡಿಯಾಗುತ್ತದೆ ಎಂಬುದರ ನಡುವಿನ ವ್ಯತ್ಯಾಸವನ್ನು ತಿಳಿದುಕೊಳ್ಳಿ.
ನಿಮ್ಮ ಸಕಾರಾತ್ಮಕ ಗುರಿಗಳನ್ನು ಸಾಧಿಸಲು ಬೆಳೆಸಿಕೊಳ್ಳಬೇಕಾದ ಗುಣಗಳು
- ತೃಪ್ತರಾಗಿರುವುದು - ವಾಸ್ತವಿಕ ಗುರಿಯನ್ನು ಸಾಧಿಸುವುದರೊಂದಿಗೆ, ಅವಾಸ್ತವಿಕವಾದ ಯಾವುದನ್ನೂ ಬಯಸುವ ದುರಾಸೆಯು ಬೇಡ
- ಅನಿವಾರ್ಯವಾಗಿ ಏನಾದರೂ ತಪ್ಪಾದಾಗ ಇತರರೊಂದಿಗೆ ಹತಾಶೆ, ಅಸಮಾಧಾನ ಅಥವಾ ವಿರೋಧಿತವಾಗಿ ನಡೆದುಕೊಳ್ಳದೇ ಇರುವುದು.
- ಗುರಿಯ ಮೇಲೆ ನಿಮ್ಮ ಗಮನವನ್ನು ಇಟ್ಟುಕೊಳ್ಳುವುದು - ಮತ್ತು ನೀವು ಅದನ್ನು ಸಾಧಿಸಿದ ನಂತರ ಅದರಿಂದಾಗುವ ಪ್ರಯೋಜನಗಳ ಮೇಲೆ ಗಮನವಿಟ್ಟುಕೊಳ್ಳುವುದು
- ನಿಮ್ಮ ಮನಸ್ಸನ್ನು ಪಳಗಿಸುವುದು - ಶಾಂತವಾಗಿರಬೇಕು ಮತ್ತು ಏನೇ ಸಂಭವಿಸಿದರೂ ಭಾವನಾತ್ಮಕ ಸಮತೋಲನವನ್ನು ಕಾಪಾಡಿಕೊಳ್ಳಬೇಕು
- ಎಲ್ಲವೂ ಬದಲಾಗುತ್ತದೆ ಎಂಬುದನ್ನು ಯಾವಾಗಲೂ ನೆನಪಿನಲ್ಲಿಡಿ - ನೀವು ಯಾವುದೇ ಮನಸ್ಥಿತಿಯಲ್ಲಿದ್ದರೂ, ನಿಮ್ಮ ಮಾನಸಿಕ ಮತ್ತು ಭಾವನಾತ್ಮಕ ಸ್ಥಿತಿಗಳು ಸ್ಥಿರವಾಗಿರುವುದಿಲ್ಲ ಅಥವಾ ಶಾಶ್ವತವಾಗಿರುವುದಿಲ್ಲ, ಅದನ್ನು ಸುಧಾರಿಸಬಹುದು
- ನೀವು ನಿಮ್ಮ ಕೈಲಾದಷ್ಟು ಪ್ರಯತ್ನ ಮಾಡುತ್ತಿದ್ದೀರಿ ಎಂಬುದನ್ನು ಅರಿತುಕೊಳ್ಳುವುದರಿಂದ ನಿಮ್ಮ ಮನಸ್ಸಿನ ಶಾಂತಿಯನ್ನು ಕಾಪಾಡಿಕೊಳ್ಳಿ.
ನಿಮ್ಮ ಜೀವನದ ದಿಕ್ಕನ್ನು ನಿಯಂತ್ರಿಸುವ ಮಾರ್ಗಗಳು
- ನಿಮ್ಮ ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳಲು ಶಕ್ತರಾಗದ ಸ್ಥಿತಿಗೆ ಬರಬೇಡಿ - ಇದು ನಿಮ್ಮ ತತ್ವಗಳ ಮೇಲೆ ರಾಜಿ ಮಾಡಿಕೊಳ್ಳುವಂತೆ ಮಾಡುತ್ತದೆ ಮತ್ತು ನೀವು ವಿಷಾದಿಸುವಂತಹ ಕಾರ್ಯಗಳನ್ನು ಮಾಡಲು ಕಾರಣವಾಗಬಹುದು.
- ನೀವು ಲೈಂಗಿಕ ಸಂಬಂಧದಲ್ಲಿದ್ದರೆ ವಿಶ್ವಾಸದ್ರೋಹಿಯಾಗದಿರಲು ಪ್ರಯತ್ನಿಸಿ – ಕೊನೆಗೊಂದು ದಿನ ಇದು ತೊಡಕುಗಳು ಮತ್ತು ತೊಂದರೆಗಳಿಗೆ ಕಾರಣವಾಗುತ್ತದೆ
- ದೊಡ್ಡ ಜವಾಬ್ದಾರಿಗಳೊಂದಿಗಿನ ಉನ್ನತ ಸ್ಥಾನಕ್ಕಾಗಿ ಶ್ರಮಿಸಬೇಡಿ - ಇದು ನಿಮ್ಮ ಎಲ್ಲಾ ಸಮಯ ಮತ್ತು ಶಕ್ತಿಯನ್ನು ತೆಗೆದುಕೊಳ್ಳುತ್ತದೆ
- ಆರೋಗ್ಯಕರ ಆಹಾರ ಸೇವನೆ, ಧೂಮಪಾನ ಮಾಡದಿರುವುದು ಮತ್ತು ವ್ಯಾಯಾಮದಂತಹ ನಿಮ್ಮ ಸಕಾರಾತ್ಮಕ ಅಭ್ಯಾಸಗಳನ್ನು ತ್ಯಜಿಸುವಂತೆ ಇತರರು ನಿಮ್ಮನ್ನು ಪ್ರಭಾವಿಸಲು ಬಿಡಬೇಡಿ - ಇದು ನಿಮ್ಮ ಆರೋಗ್ಯ ಮತ್ತು ಯೋಗಕ್ಷೇಮವನ್ನು ಹಾನಿಗೊಳಿಸುತ್ತದೆ
- ನೀವು ಸಾಧಿಸಲು ಸಾಧ್ಯವಾಗದೇ ಇರುವ ಯಾವ ಕಾರ್ಯಕ್ಕೂ ನಿಮ್ಮನ್ನು ಬದ್ಧರಾಗಿಸಬೇಡಿ - ಇದು ನಿಮ್ಮ ಆತ್ಮವಿಶ್ವಾಸವನ್ನು ಕಳೆದುಕೊಳ್ಳುವಂತೆ ಮಾಡುತ್ತದೆ
- ಅಜಾಗರೂಕತೆಯಿಂದ ವರ್ತಿಸದಿರಲು ಪ್ರಯತ್ನಿಸಿ - ಇದರಿಂದ ಕೇವಲ ನಕಾರಾತ್ಮಕ ಪರಿಣಾಮಗಳು ಸಿಗುತ್ತವೆ.
ಸವಾಲೊಡ್ಡುವ ಸಂದರ್ಭಗಳಲ್ಲಿ ಸಮಸ್ಯೆಗಳನ್ನು ದೂರಮಾಡಲು ನಿಮಗೆ ಸಹಾಯ ಮಾಡುವ ಗುಣಗಳನ್ನು ಅಭಿವೃದ್ಧಿಪಡಿಸುವುದು
- ಹೊಗಳಿದಾಗ ಅಥವಾ ಟೀಕಿಸಿದಾಗ ಉತ್ಸುಕರಾಗಬಾರದು.
- ನೀವು ಇಷ್ಟಪಡದಿರುವವರನ್ನು ಅಥವಾ ನಿಮ್ಮೊಂದಿಗೆ ಬಾಂಧವ್ಯವಿರುವವರನ್ನು ಭೇಟಿಯಾದಾಗ, ಅವರೊಂದಿಗೆ ಪ್ರತಿಕೂಲವಾಗದಿರುವಂತೆ ಅಥವಾ ಅಂಟಿಕೊಳ್ಳದಿರುವಂತೆ ಇರಲು ಗಮನವಿರಲಿ
- ನೀವು ಸಾಮಾನ್ಯ ಚಟುವಟಿಕೆಗಳಲ್ಲಿ ತೊಡಗಿರುವಾಗ, ನಿಮ್ಮ ಉತ್ತಮ ಸಿದ್ಧಾಂತಗಳಿಗೆ ವಿರುದ್ಧವಾದ ರೀತಿಯಲ್ಲಿ ವರ್ತಿಸದಿರುವಂತೆ ಗಮನವಿರಲಿ
- ಭೌತಿಕ ವಸ್ತುಗಳ ಬಗ್ಗೆ ಗೀಳಿಲ್ಲದಿರುವುದು – ನಿಮ್ಮ ಉನ್ನತ ಗುರಿಗಳನ್ನು ನಿರ್ಲಕ್ಷಿಸುವ ಮಟ್ಟಿಗೆ ನೀವು ಆಸ್ತಿ ಅಥವಾ ಹೆಚ್ಚಿನ ಸಂಪತ್ತಿನ ಬಗ್ಗೆ ಗೀಳಿರಬಾರದು.
- ನಿಮ್ಮ ಬಗ್ಗೆ ನೀವೇ ಮರುಕಪಡದಿರುವುದು - ಅನಾರೋಗ್ಯ ಅಥವಾ ನೋವಿನಲ್ಲಿರುವಾಗ, ಆ ಸಂದರ್ಭವನ್ನು ನಿಮ್ಮ ಆಂತರಿಕ ಶಕ್ತಿ ಮತ್ತು ನಡತೆಯನ್ನು ಅಭಿವೃದ್ಧಿಪಡಿಸಲು ಹೆಚ್ಚಾಗಿ ಶ್ರಮಪಡಬೇಕು.
- ನಿಮ್ಮ ನ್ಯೂನತೆಗಳನ್ನು ನಿವಾರಿಸಲು ಮತ್ತು ನಿಮ್ಮ ಸಂಪೂರ್ಣ ಸಕಾರಾತ್ಮಕ ಸಾಮರ್ಥ್ಯವನ್ನು ಅರಿತುಕೊಳ್ಳಲು ಎಂದೆಂದಿಗೂ ಕೆಲಸ ಮಾಡಬೇಕು.