ಎಂಟು ಲೌಕಿಕ ಕಾಳಜಿಗಳು ಮತ್ತು ಪರಿಕಲ್ಪನಾ ಚೌಕಟ್ಟು

ಎಂಟು ಲೌಕಿಕ ಕಾಳಜಿಗಳು 

ನಮ್ಮ ಮನಸ್ಸಿನೊಳಗಿನ ಅನುಭವಗಳು ಮತ್ತು ಭಾವನೆಗಳ ಹೊರತಾಗಿ, ನಮ್ಮ ಜೀವನದೊಳಗಿನ ವಿಷಯವೂ ಇದೆ. ಇಲ್ಲಿಯೂ ಅದೇ ವಿಷಯ; ನಾವು ಅದನ್ನೆಲ್ಲ ದೊಡ್ಡ ವಿಷಯವಾಗಿ ಮಾಡದಿರಲು ಪ್ರಯತ್ನಿಸಬೇಕು. ಬೌದ್ಧ ಬೋಧನೆಗಳು ಜೀವನದಲ್ಲಿ ಎಂಟು ಕ್ಷಣಿಕ ವಿಷಯಗಳ ಪಟ್ಟಿಯನ್ನು ಒತ್ತಿಹೇಳುತ್ತವೆ - "ಎಂಟು ಲೌಕಿಕ ಕಾಳಜಿಗಳು" ಅಥವಾ "ಎಂಟು ಲೌಕಿಕ ಧರ್ಮಗಳು" ಎಂದು ಕರೆಯಲ್ಪಡುವ - ಎಲ್ಲವೂ ಯಾವಾಗಲೂ ಚಲನೆಯಲ್ಲಿರುತ್ತದೆ, ಮೇಲಕ್ಕೆ ಮತ್ತು ಕೆಳಕ್ಕೆ ಹೋಗುವ ಅದೇ ತತ್ವವನ್ನು ಅನುಸರಿಸುತ್ತದೆ. 

ಲಾಭ ಮತ್ತು ನಷ್ಟಗಳು 

ಕೆಲವೊಮ್ಮೆ ನಮಗೆ ಲಾಭಗಳಿವೆ, ಕೆಲವೊಮ್ಮೆ ನಮಗೆ ನಷ್ಟಗಳಿವೆ. ಆರ್ಥಿಕವಾಗಿ, ಕೆಲವೊಮ್ಮೆ ನಾವು ಹಣ ಗಳಿಸುತ್ತೇವೆ ಮತ್ತು ಕೆಲವೊಮ್ಮೆ ನಾವು ಹಣವನ್ನು ಕಳೆದುಕೊಳ್ಳುತ್ತೇವೆ. ಕೆಲವೊಮ್ಮೆ ನಾವು ಏನನ್ನಾದರೂ ಖರೀದಿಸುತ್ತೇವೆ ಮತ್ತು ಅದು ತುಂಬಾ ಒಳ್ಳೆಯದಾಗಿರುತ್ತದೆ (ಇದು ಲಾಭ), ಆದರೆ ಕೆಲವೊಮ್ಮೆ ಅದು ಬೇಗನೆ ಮುರಿದುಹೋಗುತ್ತದೆ (ಇದು ನಷ್ಟ). ಮತ್ತೆ, ಇದರಲ್ಲಿ ಯಾವುದರ ಬಗ್ಗೆಯೂ ವಿಶೇಷ ಏನೂ ಇಲ್ಲ. ಇದು ಕಾರ್ಡ್‌ಗಳ ಆಟ ಅಥವಾ ಮಕ್ಕಳ ಆಟವನ್ನು ಆಡುವಂತಿದೆ; ಕೆಲವೊಮ್ಮೆ ನಾವು ಗೆಲ್ಲುತ್ತೇವೆ ಮತ್ತು ಕೆಲವೊಮ್ಮೆ ನಾವು ಸೋಲುತ್ತೇವೆ. ಹಾಗಾದರೆ ಏನು? ವಿಶೇಷವೇನೂ ಇಲ್ಲ. 

ವಾಸ್ತವದಲ್ಲಿ, ನಾವು ಸೋತಾಗ ಅಳುತ್ತಾ "ನಾನು ಗೆಲ್ಲಲು ಬಯಸುತ್ತೇನೆ!" ಎಂದು ಕೂಗಿದ ಆ ಪುಟ್ಟ ಮಗುವಿನಂತೆ ಇರಬಾರದು ಎಂದು ನಮ್ಮನ್ನು ನಾವು ನೆನಪಿಸಿಕೊಳ್ಳಬೇಕು. ನೀವು ಯಾವಾಗಲೂ ಗೆಲ್ಲಲೇಬೇಕು ಏಕೆ? ಎಲ್ಲರೂ ನನ್ನನ್ನು ಇಷ್ಟಪಡುತ್ತಾರೆ ಎಂಬ ಭರವಸೆಯಂತಿದೆ. ಬೌದ್ಧಧರ್ಮದಲ್ಲಿ ಒಂದು ಉಪಯುಕ್ತ ಮಾತು ಇದೆ, "ಎಲ್ಲರೂ ಬುದ್ಧನನ್ನು ಇಷ್ಟಪಡುವುದಿಲ್ಲ, ಹಾಗಾದರೆ ನಾವು ನಮಗಾಗಿ ಎಲ್ಲರೂ ನಮ್ಮನ್ನು ಇಷ್ಟಪಡುತ್ತಾರೆ ಎಂದು ಹೇಗೆ ತಾನೆ ನಿರೀಕ್ಷಿಸಲಾಗುತ್ತದೆ?" ಖಂಡಿತ ಸಾಧ್ಯವಿಲ್ಲ. ಎಲ್ಲರೂ ನಮ್ಮ ಫೇಸ್‌ಬುಕ್ ಪುಟದಲ್ಲಿ ಲೈಕ್ ಬಟನ್ ಒತ್ತುವುದಿಲ್ಲ. ಕೆಲವರು ನಮ್ಮನ್ನು ಇಷ್ಟಪಡುವುದಿಲ್ಲ. ಏನು ಮಾಡುವುದು? ಇದು ಸಂಪೂರ್ಣವಾಗಿ ಸಾಮಾನ್ಯವಾಗಿರುತ್ತದೆ. 

ಇದೆಲ್ಲವೂ ಲಾಭ ಮತ್ತು ನಷ್ಟಗಳು. ನಾವು ಯಾರೊಂದಿಗಾದರೂ ಸಂಬಂಧಕ್ಕೆ ಬಂದಾಗ, ಅಂತಿಮವಾಗಿ ಅದು ಕೊನೆಗೊಳ್ಳುತ್ತದೆ. ನಾವು ಮೊದಲು ನಮ್ಮ ಕಿಟಕಿಯ ಬಳಿಯಿರುವ ಕಾಡು ಹಕ್ಕಿಯ ದೃಶ್ಯವನ್ನು ಬಳಸಿದ್ದೇವೆ, ಅಲ್ಲಿ ಅದು ಸ್ವಲ್ಪ ಸಮಯದವರೆಗೆ ಬರುತ್ತದೆ ಆದರೆ ಅದು ಸ್ವತಂತ್ರವಾದ ಕಾರಣ, ಅದು ಹಾರಿಹೋಗುತ್ತದೆ. ಸಂಬಂಧದಲ್ಲೂ ಇದೇ ಆಗಿರುತ್ತದೆ. "ನನ್ನನ್ನು ಎಂದಿಗೂ ಬಿಡಬೇಡಿ, ನಾನು ನೀನಿಲ್ಲದೆ ಬದುಕಲು ಸಾಧ್ಯವಿಲ್ಲ" ಎಂದು ನೀವು ಹೇಳಿದರೂ ಪರವಾಗಿಲ್ಲ, ಮತ್ತು ನೀವು ನಿಮ್ಮ ಇಡೀ ಜೀವನಕ್ಕಾಗಿ ಒಟ್ಟಿಗೆ ಇದ್ದರೂ ಸಹ, ನಿಮ್ಮಲ್ಲಿ ಒಬ್ಬರು ಇನ್ನೊಬ್ಬರಿಗಿಂತ ಮೊದಲು ಸಾಯುತ್ತಾರೆ ಎಂಬುದು ನಿಸ್ಸಂದೇಹ. ನಾವು ಒಬ್ಬ ಸ್ನೇಹಿತನನ್ನು ಪಡೆಯುತ್ತೇವೆ, ನಾವು ಒಬ್ಬ ಸ್ನೇಹಿತನನ್ನು ಕಳೆದುಕೊಳ್ಳುತ್ತೇವೆ, ಅದರಲ್ಲಿ ವಿಶೇಷ ಏನೂ ಇಲ್ಲ. ಜೀವನದ ರೀತಿಯೇ ಇದು. ನಮಗೆ ಆ ಸ್ನೇಹಿತ ಇದ್ದಾಗ ನಾವು ಸಂತೋಷವಾಗಿರಲು ಸಾಧ್ಯವಿಲ್ಲ ಮತ್ತು ಅವರನ್ನು ಕಳೆದುಕೊಂಡಾಗ ನಾವು ದುಃಖಿತರಾಗಲು ಸಾಧ್ಯವಿಲ್ಲ ಎಂಬುದು ಇಲ್ಲಿನ ಅರ್ಥವಲ್ಲ - ಏನನ್ನೂ ಅನುಭವಿಸದಿರುವುದು "ಏನಾದರೂ ಆಗಲಿ" ಎಂಬ ಮನೋಭಾವವಾಗಿರುತ್ತದೆ ಮತ್ತು ಅದು "ವಿಶೇಷವೇನೂ ಇಲ್ಲ" ಎಂಬುದಕ್ಕೆ ಸಮನಾಗಿರುವುದಿಲ್ಲ - ಆದರೆ ನಾವು ವಿಪರೀತಕ್ಕೆ ಹೋಗುವುದಿಲ್ಲ ಮತ್ತು ಅದನ್ನು ದೊಡ್ಡ ವಿಷಯವಾಗಿ ಮಾಡುವುದಿಲ್ಲ. 

ನಮ್ಮನ್ನು ನಾವು ನೋಡುವುದು ಮತ್ತು ಲಾಭ ಮತ್ತು ನಷ್ಟಗಳಿಗೆ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ ಎಂಬುದನ್ನು ನೋಡುವುದು ಆಸಕ್ತಿದಾಯಕವಾಗಿದೆ. ನಾನು ಯಾವಾಗಲೂ ನನ್ನನ್ನು ಉದಾಹರಣೆಯಾಗಿ ನೋಡುತ್ತೇನೆ ಏಕೆಂದರೆ ನಾನು ನನ್ನ ವೆಬ್‌ಸೈಟ್ ಬಗ್ಗೆ ಸಾಕಷ್ಟು ಗೀಳನ್ನು ಹೊಂದಿದ್ದೇನೆ; ಅದು ದಿನವಿಡೀ ನನ್ನ ಆಲೋಚನೆಗಳು ಮತ್ತು ಚಟುವಟಿಕೆಗಳನ್ನು ಆಕ್ರಮಿಸುತ್ತದೆ. ಸಹಜವಾಗಿ ನಮ್ಮ ಬಳಿ ಅಂಕಿಅಂಶಗಳ ಕಾರ್ಯಕ್ರಮವಿದೆ, ಅದರಿಂದ ಪ್ರತಿದಿನ ಎಷ್ಟು ಜನರು ಅದನ್ನು ಓದುತ್ತಿದ್ದಾರೆಂದು ನನಗೆ ತಿಳಿದಿದೆ. ಒಂದು ದಿನ ಹೆಚ್ಚಳವಾಗಿದ್ದರೆ, ಅದು ನಿಜವಾಗಿಯೂ ತುಂಬಾ ಒಳ್ಳೆಯದು, ಆದರೆ ಅದು ಒಂದು ನಿರ್ದಿಷ್ಟ ಸಂಖ್ಯೆಯನ್ನು ತಲುಪದಿದ್ದರೆ ಅಥವಾ ನಾನಂದುಕೊಂಡಷ್ಟು ಆಗದಿದ್ದರೆ, ಅದು ಅಷ್ಟು ಒಳ್ಳೆಯದಲ್ಲ. ಆದ್ದರಿಂದ ಅದು ಲಾಭ ಮತ್ತು ನಷ್ಟ. 

ಒಂದು ಅರ್ಥದಲ್ಲಿ ನನಗೆ ತುಂಬಾ ಕಡಿಮೆ ಮಟ್ಟದ ಸಂತೋಷದ ಭಾವನೆ ಇದೆ. ಇದು ನಾಟಕೀಯ ವಿಷಯವಲ್ಲ. ಕೆಲವು ವಾರಗಳ ಹಿಂದೆ ನಾವು ಒಂದೇ ದಿನದಲ್ಲಿ 6,000 ಭೇಟಿಗಳನ್ನು ತಲುಪಿದ್ದೇವೆ, ಅದು ನಿಜಕ್ಕೂ, "ವಾವ್, 6,000, ಇದು ದೊಡ್ಡ ನಂಬರ್!" ಆದರೆ ಅದರಿಂದ ಬಂದ ಸಂತೋಷವು ತುಂಬಾ ಕ್ಷುಲ್ಲಕವಾಗಿದೆ. ಅದು ನಿಜವಾಗಿಯೂ ಏನನ್ನೂ ಮಾಡದ ಕಾರಣ ಅದು ದೊಡ್ಡ ವಿಷಯವಾಗಿರಲಿಲ್ಲ. "ಸರಿ, ಅದು ಒಳ್ಳೆಯದು. ಈಗ ಏನು? ಇನ್ನೇನು ಹೊಸದು?" ಎಂಬ ಭಾವನೆ ಇತ್ತು ಮತ್ತು ಇನ್ನೊಂದು ದಿನ ಅದು 4,500 ವೀಕ್ಷಣೆಗಳಿಗೆ ಇಳಿಯಿತು, ಆಗ ನಾನು ಸ್ವಲ್ಪ ನಿರಾಶೆಗೊಂಡೆ, "ಓಹ್, ಇಂದು ಅಷ್ಟೊಂದು ಜನರು ಇದನ್ನು ನೋಡಿಲ್ಲ." ಆದರೆ ಹೆಚ್ಚು ಪ್ರಮುಖವಾಗಿರುವುದು ಸ್ವಯಂ-ಆಸಕ್ತಿ, ನಾನು ಒಪ್ಪಿಕೊಳ್ಳುತ್ತೇನೆ, ಎಲ್ಲಾ ಸಮಯದಲ್ಲೂ ಅಂಕಿಅಂಶಗಳನ್ನು ನೋಡಬೇಕೆಂಬ ಬಯಕೆ. ಬೌದ್ಧಧರ್ಮವು ಹೇಳುವಂತೆ ಸ್ವಯಂ ಬಗ್ಗೆ ಈ ಪೂರ್ವಾಗ್ರಹವು ಇತರ ವಿಷಯಗಳ ಬಗ್ಗೆ ಪೂರ್ವಾಗ್ರಹಕ್ಕಿಂತ ಹೆಚ್ಚು ಪ್ರಬಲವಾಗಿದೆ, ಏಕೆಂದರೆ "ನನ್ನ" ಬಗ್ಗೆ ಯೋಚಿಸುವುದು ಬಹಳಾ ಸಹಜ. ಅದು ತನ್ನನ್ನು ತಾನು ತುಂಬಾ ಅದ್ಭುತ ಅಥವಾ ಶ್ರೇಷ್ಠ ಎಂದು ಭಾವಿಸುವಂತೆ ಅಥವಾ ಯಾರೂ ನಮ್ಮನ್ನು ಪ್ರೀತಿಸುವುದಿಲ್ಲ ಎಂದು ಭಾವಿಸುವಂತೆ ಪ್ರಕಟಗೊಳ್ಳಬೇಕಾಗಿಲ್ಲ, ಆದರೆ ಯಾವಾಗಲೂ ಈ ಆಧಾರವಾಗಿರುವ ಆಲೋಚನೆ ಇರುತ್ತದೆ. 

ನೀವು ನಿಮ್ಮ ಸ್ವಂತ ಉದಾಹರಣೆಗಳ ಬಗ್ಗೆ ಯೋಚಿಸಬಹುದು, ಬಹುಶಃ ಫೇಸ್‌ಬುಕ್ ಅಥವಾ ಟೆಕ್ಸ್ಟ್ ಮೆಸೇಜ್ಗಳೊಂದಿಗೆ? ಇವತ್ತು ನನಗೆ ಎಷ್ಟು ಸಂದೇಶಗಳು ಬಂದವು? ಇವತ್ತು ನನ್ನ ಪೋಸ್ಟ್‌ಗಳನ್ನು ಯಾರು ಇಷ್ಟಪಟ್ಟಿದ್ದಾರೆ? ನಾವು ಎಷ್ಟು ಬಾರಿ ಫೇಸ್‌ಬುಕ್ ಪರಿಶೀಲಿಸುತ್ತೇವೆ ಅಥವಾ ಏನಾದರೂ ಬಂದಿದೆಯೇ ಎಂದು ನೋಡಲು ನಮ್ಮ ಜೇಬಿನಿಂದ ಫೋನ್‌ಗಳನ್ನು ತೆಗೆಯುತ್ತೇವೆ? ಮೊದಲು, ಈ ಇಂಟರ್ನೆಟ್ ವಿಷಯಗಳು ಇರಲಿಲ್ಲ, ಆದರೆ ಜನರು ಪೋಸ್ಟ್‌ಮ್ಯಾನ್‌ನೊಂದಿಗೆ ಅದೇ ರೀತಿ ಮಾಡುತ್ತಿದ್ದರು. "ಇಂದು ನನಗಾಗಿ ನಿಮ್ಮ ಬಳಿ ಯಾವುದೇ ಪತ್ರಗಳಿವೆಯೇ?" ಯಾವುದೇ ಪತ್ರಗಳಿಲ್ಲ: "ಓಹ್, ಯಾರೂ ನನ್ನನ್ನು ಇಷ್ಟಪಡುವುದಿಲ್ಲ." ಅಥವಾ ಅದು ಕೇವಲ ಜಾಹೀರಾತುಗಳಾಗಿದ್ದವು ಆದ್ದರಿಂದ ಅವು ನಮಗೆ ಬೇಡ. "ವಿಶೇಷ ಏನೂ ಇಲ್ಲ" ಎಂಬ ಈ ಮನೋಭಾವವು ಭಾವನಾತ್ಮಕ ಏರಿಳಿತಗಳನ್ನು ಕಡಿಮೆ ತೀವ್ರವಾಗಿಸಲು ಸಹಾಯ ಮಾಡುತ್ತದೆ, ಏಕೆಂದರೆ ನಾವು ಏನು ನಡೆಯುತ್ತಿದೆ ಎಂಬುದರ ಬಗ್ಗೆ ಹೆಚ್ಚು ಭಾವನಾತ್ಮಕ ಸಮತೋಲನ ಮತ್ತು ಸಮಚಿತ್ತತೆಯನ್ನು ಹೊಂದಿರುತ್ತೇವೆ. ಏನು ಬಂದಿದೆ ಎಂಬುದನ್ನು ಪರಿಶೀಲಿಸಲು ಮತ್ತು ನೋಡಲು ಯಾವಾಗಲೂ ಬಯಸುವ ಕಾಳಜಿಯನ್ನು ನಿಭಾಯಿಸುವುದು ಹೆಚ್ಚು ಕಷ್ಟಕರವಾಗಿರುತ್ತದೆ. 

ವರ್ತನೆಗಳನ್ನು ಬದಲಾಯಿಸುವುದು ನಿಧಾನವಾದ ಮತ್ತು ದೀರ್ಘವಾದ ಪ್ರಕ್ರಿಯೆ. ವಿಷಯಗಳು ತ್ವರಿತವಾಗಿ ಬದಲಾಗುವುದಿಲ್ಲ, ಆದರೆ ಕ್ರಮೇಣ ಬದಲಾಗುತ್ತವೆ. ನೀವು ನಿಮ್ಮನ್ನು ಹೆಚ್ಚು ವಾಸ್ತವಿಕ ರೀತಿಯಲ್ಲಿ ನೋಡಲು ಪ್ರಾರಂಭಿಸಿದಾಗ ಅದು ಆಸಕ್ತಿದಾಯಕವಾಗಿರುತ್ತದೆ, ಅಲ್ಲಿ ನೀವು ನೋಡುತ್ತೀರಿ, "ನಾನು ಕಂಪ್ಯೂಟರ್ ಮತ್ತು ನನ್ನ ಸೆಲ್ ಫೋನ್‌ಗೆ ಗುಲಾಮನಾಗಿದ್ದೇನೆ, ಏಕೆಂದರೆ ನಾನು ಯಾವಾಗಲೂ ಅವರನ್ನು ನೋಡಬೇಕಾಗಿದೆ. ಎಷ್ಟು ಜನರು ನನಗೆ ಪ್ರತಿಕ್ರಿಯಿಸುತ್ತಿದ್ದಾರೆಂದು ನಾನು ಯಾವಾಗಲೂ ಪರಿಶೀಲಿಸಬೇಕಾಗುತ್ತದೆ. ನಾನು ಏಕೆ ಗುಲಾಮನಾಗಿದ್ದೇನೆ?" ಸುರಂಗಮಾರ್ಗದಲ್ಲಿರುವ ಎಲ್ಲಾ ಜನರನ್ನು ನೋಡಿ, ಎಷ್ಟು ಮಂದಿ ಯಾವಾಗಲೂ ತಮ್ಮ ಕೈಯಲ್ಲಿ ತಮ್ಮ ಸೆಲ್ ಫೋನ್ ಅನ್ನು ಹೊಂದಿರುತ್ತಾರೆ. ಏಕೆ? "ನಾನು ಏನನ್ನಾದರೂ ಕಳೆದುಕೊಳ್ಳಲು ಬಯಸುವುದಿಲ್ಲ" ಎಂಬ ಮನಸ್ಥಿತಿಯೊಂದಿಗೆ ಸ್ವಾರ್ಥ ಮತ್ತು ಅಭದ್ರತೆ ಇದೆ. ಏಕೆ? ನಿಜವಾಗಿಯೂ ಇದು ಏಕೆ ಮುಖ್ಯ? ಕೆಲವು ವಿಷಯಗಳು ಮುಖ್ಯವಾಗಿರಬಹುದು, ಯಾವುದೂ ಮುಖ್ಯವಲ್ಲ ಎಂದು ನಾವು ಹೇಳುತ್ತಿಲ್ಲ, ಆದರೆ ನಿರಂತರವಾಗಿ ಸಂಪರ್ಕದಲ್ಲಿರುವುದರ, ನಿರಂತರವಾಗಿ ಆನ್‌ಲೈನ್‌ನಲ್ಲಿರುವುದರ ಪ್ರಾಮುಖ್ಯತೆಯನ್ನು ನಾವು ಅತಿಯಾಗಿ ಉತ್ಪ್ರೇಕ್ಷಿಸುತ್ತೇವೆ. ನಮ್ಮ ಸ್ವಂತ ಭಾವನಾತ್ಮಕ ಸಮತೋಲನದ ದೃಷ್ಟಿಯಿಂದ ಇದನ್ನು ವಿಶ್ಲೇಷಿಸುವುದು ಒಳ್ಳೆಯದು. 

ಆದ್ದರಿಂದ, ಕೆಲವೊಮ್ಮೆ ನಾವು ಗೆಲ್ಲುತ್ತೇವೆ, ಕೆಲವೊಮ್ಮೆ ನಾವು ಸೋಲುತ್ತೇವೆ. ಇದು ಒಂದು ಸೆಟ್. 

ವಿಷಯಗಳು ಚೆನ್ನಾಗಿ ನಡೆಯುತ್ತಿವೆ ಮತ್ತು ವಿಷಯಗಳು ಕೆಟ್ಟದಾಗಿ ನಡೆಯುತ್ತಿವೆ 

ಎರಡನೇ ಸೆಟ್ ಎಂದರೆ ಕೆಲವೊಮ್ಮೆ ವಿಷಯಗಳು ಚೆನ್ನಾಗಿ ನಡೆಯುತ್ತವೆ ಮತ್ತು ಕೆಲವೊಮ್ಮೆ ವಿಷಯಗಳು ಕೆಟ್ಟದಾಗಿ ನಡೆಯುತ್ತವೆ. ನಾವು ಇದನ್ನು ಹಲವು ಹಂತಗಳಲ್ಲಿ ಅರ್ಥಮಾಡಿಕೊಳ್ಳಬಹುದು ಆದರೆ ಮತ್ತೊಮ್ಮೆ, ಇಲ್ಲಿನ ಪ್ರತಿಕ್ರಿಯೆ "ವಿಶೇಷವೇನೂ ಇಲ್ಲ." ಒಂದು ದಿನ ನಿಜವಾಗಿಯೂ ಚೆನ್ನಾಗಿ ನಡೆಯುತ್ತದೆ, ಮತ್ತು ಮುಂದಿನ ದಿನ ಅಡೆತಡೆಗಳಿಂದ ತುಂಬಿರುತ್ತದೆ, ಜನರು ನಮಗೆ ಕಷ್ಟಕೊಡುತ್ತಾರೆ ಮತ್ತು ಎಲ್ಲವೂ ತಪ್ಪಾಗಿ ಕಾಣುತ್ತದೆ. ಇದು ಸಾಮಾನ್ಯ. ಬೆಳಿಗ್ಗೆ ನಮ್ಮ ಶಕ್ತಿ ಹೆಚ್ಚಿರಬಹುದು, ಮತ್ತು ಮಧ್ಯಾಹ್ನ ಕಡಿಮೆಯಾಗಬಹುದು. ಕೆಲವೊಮ್ಮೆ ನಾವು ಆರೋಗ್ಯವಾಗಿರಬಹುದು, ಕೆಲವೊಮ್ಮೆ ನಮಗೆ ಶೀತ ಬರುತ್ತದೆ. ವಿಶೇಷವೇನೂ ಇಲ್ಲ. 

ಹೊಗಳಿಕೆ ಮತ್ತು ಟೀಕೆ 

ಮುಂದಿನ ಸೆಟ್ ಹೊಗಳಿಕೆ ಮತ್ತು ಟೀಕೆಗೆ ಸಂಬಂಧಿಸಿದೆ. ಕೆಲವರು ನಮ್ಮನ್ನು ಹೊಗಳುತ್ತಾರೆ, ಮತ್ತು ಇತರರು ನಮ್ಮನ್ನು ಟೀಕಿಸುತ್ತಾರೆ. ನಾವು ಇದನ್ನು ಹೇಗೆ ಎದುರಿಸುತ್ತೇವೆ? ಎಲ್ಲರೂ ಬುದ್ಧನನ್ನು ಹೊಗಳಲಿಲ್ಲ; ಕೆಲವರು, ವಿಶೇಷವಾಗಿ ಅವರ ಸೋದರಸಂಬಂಧಿ, ತುಂಬಾ ಟೀಕಿಸುತ್ತಿದ್ದರು. ಹಾಗಾದರೆ ಎಲ್ಲರೂ ನಮ್ಮನ್ನು ಹೊಗಳಬೇಕೆಂದು ನಾವು ಏಕೆ ನಿರೀಕ್ಷಿಸಬೇಕು? 

ನಾನು ನನ್ನದೇ ಉದಾಹರಣೆಯನ್ನು ಮತ್ತೆ ಬಳಸುತ್ತೇನೆ. ನನ್ನ ವೆಬ್‌ಸೈಟ್ ಬಗ್ಗೆ ನನಗೆ ಅನೇಕ ಇಮೇಲ್‌ಗಳು ಬರುತ್ತವೆ, ಮತ್ತು ಹೆಚ್ಚಿನವರು ವೆಬ್‌ಸೈಟ್ ಎಷ್ಟು ಸಹಾಯಕವಾಗಿದೆ ಎಂದು ಹೇಳುತ್ತಿದ್ದರೂ, ಸಾಂದರ್ಭಿಕವಾಗಿ ಕೆಲವು ಟೀಕೆಗಳು ಇರುತ್ತದೆ. ಹೊಗಳಿಕೆಯನ್ನು ನಿಭಾಯಿಸುವುದು ಸುಲಭ; ಟೀಕೆ ನಮ್ಮ ಮನಸ್ಸಿಗೆ ಹೆಚ್ಚು ತೊಂದರೆ ಉಂಟುಮಾಡಬಹುದು. 

ಹೊಗಳಿಕೆಯೊಂದಿಗೆ, ನಾವು ತುಂಬಾ ಶ್ರೇಷ್ಠರು ಅಥವಾ ವಿರುದ್ಧವಾಗಿ ಯೋಚಿಸುವ ವಿಪರೀತಕ್ಕೆ ಹೋಗಬಾರದು, "ಸರಿ ನಾನು ಅದಕ್ಕೆ ಅರ್ಹನಲ್ಲ. ಅವರು ನಿಜವಾಗಿಯೂ ನನ್ನನ್ನು ತಿಳಿದಿದ್ದರೆ, ಅವರು ನನ್ನನ್ನು ಇಷ್ಟಪಡುವುದಿಲ್ಲ." ಆದರೆ ಹೊಗಳಿಕೆಯೊಂದಿಗೆ ಮುಂದುವರಿಯುವುದು ಬಹಳಾ ಸುಲಭ. ಟೀಕೆ ಏಕೆ ಹೆಚ್ಚು ಕಷ್ಟ? ಏಕೆಂದರೆ ನಾವು ನಮ್ಮನ್ನು ಪ್ರೀತಿಸುತ್ತೇವೆ. ವರ್ತನೆ ತರಬೇತಿಯೊಂದಿಗೆ, ನಾವು ನಮ್ಮ ಬದಲು ಅವರನ್ನು ನೋಡುತ್ತೇವೆ, ಆದ್ದರಿಂದ ನಾವು ಏನು ಮಾಡಿದ್ದೇವೆ ಎಂದು ಯೋಚಿಸುತ್ತೇವೆ, ಅದು ಅವರು ನಮಗೆ ತಮ್ಮ ಟೀಕೆಯನ್ನು ಕಳುಹಿಸಲು ಕಾರಣವಾಗಬಹುದು. ನಾವು ಸಹಾಯ ಮಾಡಲು ಏನಾದರೂ ಮಾಡಲು ಸಾಧ್ಯವಾದರೆ, ಅದು ಕೇವಲ ಕ್ಷಮೆಯಾಚನೆಯಾಗಿದ್ದರೂ ಸಹ, "ಇದು ನಿಮಗೆ ಕಷ್ಟಕರ ಸಮಯವನ್ನು ನೀಡಿರಬಹುದು ಎಂದು ನಾನು ಒಪ್ಪಿಕೊಳ್ಳುತ್ತೇನೆ. ನನ್ನನ್ನು ನಿಜವಾಗಿಯೂ ಕ್ಷಮಿಸಿ, ಅದು ನನ್ನ ಉದ್ದೇಶವಾಗಿರಲಿಲ್ಲ." ನಿಧಾನವಾಗಿ ನಾವು ಸ್ವ-ಪ್ರೀತಿಯಿಂದ ಇತರರನ್ನು ಪ್ರೀತಿಸುವತ್ತ ಗಮನವನ್ನು ಬದಲಾಯಿಸಬಹುದು. 

ಹೀಗೆ ನಾವು ಇತರರೊಂದಿಗೆ ನಮ್ಮ ಸಾಮಾನ್ಯ, ದೈನಂದಿನ ಸಂವಹನಗಳಲ್ಲಿಯೂ ನಡೆದುಕೊಳ್ಳಬಹುದು. ಕೆಲವೊಮ್ಮೆ ಅವರು ನಮ್ಮೊಂದಿಗೆ ಸಂತೋಷವಾಗಿರುತ್ತಾರೆ ಮತ್ತು ಕೆಲವೊಮ್ಮೆ ಅವರು ಸಂತೋಷವಾಗಿರುವುದಿಲ್ಲ. ಜನರು ನಮ್ಮೊಂದಿಗೆ ಸಂತೋಷವಾಗಿದ್ದಾಗ, ಅದು ಸುಲಭ. ನಂತರ ನಮ್ಮ ಜೀವನದಲ್ಲಿ ವ್ಯವಹರಿಸಲು ಕಷ್ಟಕರವಾದ ಮತ್ತು ಯಾವಾಗಲೂ ನಮ್ಮನ್ನು ಟೀಕಿಸುವ ಅಥವಾ ನಮ್ಮ ಬಗ್ಗೆ ನಕಾರಾತ್ಮಕವಾಗಿ ವರ್ತಿಸುವ ಕೆಲವು ಜನರಿದ್ದಾರೆ. ಅವರ ಬಗ್ಗೆ ನಮ್ಮ ಮನೋಭಾವವೇನು? ನಾವು ಅವರನ್ನು ತುಂಬಾ ಕಷ್ಟಕರ, ಅಹಿತಕರ ವ್ಯಕ್ತಿ ಎಂದು ಗುರುತಿಸುತ್ತೇವೆಯೇ? ಅಥವಾ ಅವರು ತುಂಬಾ ಅತೃಪ್ತ ವ್ಯಕ್ತಿ ಎಂದು ನಾವು ಗುರುತಿಸುತ್ತೇವೆಯೇ? ನಿಮ್ಮೆಲ್ಲರ ಜೀವನದಲ್ಲಿ ಅಂತಹ ಜನರು ಇದ್ದಾರೆ ಎಂದು ನನಗೆ ಗೊತ್ತಿದೆ. ಅವರು ನಿಮಗೆ ಕರೆ ಮಾಡುತ್ತಾರೆ ಅಥವಾ ಭೇಟಿಯಾಗಲು ಮತ್ತು ನಿಮ್ಮೊಂದಿಗೆ ಊಟ ಮಾಡಲು ಬಯಸುತ್ತಾರೆ ಮತ್ತು ಅದು 100% ತಮ್ಮ ಬಗ್ಗೆ ಮಾತನಾಡುವುದು ಮತ್ತು ದೂರು ನೀಡಲು ಆಗಿರುತ್ತದೆ ಎಂದು ನಿಮಗೆ ತಿಳಿದಿದೆ. ನೀವು, "ಉಫ್, ಮತ್ತೆ ಈ ವ್ಯಕ್ತಿ!" ಎಂದು ಯೋಚಿಸಬಹುದು. ಆದರೆ ಯಾವಾಗಲೂ ನೀವು ಕಾರ್ಯನಿರತರಾಗಿದ್ದೀರಿ ಎಂದು ಹೇಳಲು ಸಾಧ್ಯವಿಲ್ಲ!

ನಮ್ಮ ಪ್ರತಿಕ್ರಿಯೆಯು, ನಾನು ಅವರೊಂದಿಗೆ ಇರುವುದು ಮತ್ತು ಅವರ ದೂರುಗಳನ್ನು ಕೇಳುವುದು ಎಷ್ಟು ಅಹಿತಕರವಾಗಿರುತ್ತದೆ ಎಂಬುದರ ಕುರಿತು ಯೋಚಿಸುವುದಾಗಿದ್ದರೆ, ನಾವು ನಮ್ಮ ದೃಷ್ಟಿಕೋನವನ್ನು ಬದಲಾಯಿಸಬಹುದು: ಈ ವ್ಯಕ್ತಿಯು ಯಾವಾಗಲೂ ದೂರು ನೀಡುತ್ತಿದ್ದಾನೆ ಏಕೆಂದರೆ ಅವರು ನಿಜವಾಗಿಯೂ ತುಂಬಾ ಅತೃಪ್ತರಾಗಿರುತ್ತಾರೆ ಮತ್ತು ಒಂಟಿಯಾಗಿರುತ್ತಾರೆ. ದೂರು ನೀಡುವ ಜನರು ಸಾಮಾನ್ಯವಾಗಿ ಹೀಗಿರುತ್ತಾರೆ, ಏಕೆಂದರೆ ಯಾರೂ ಅವರೊಂದಿಗೆ ಇರಲು ಬಯಸುವುದಿಲ್ಲ. ಹಾಗಾಗಿ ನಾವು ಅವರೊಂದಿಗೆ ಸ್ವಲ್ಪ ಸಮಯ ಕಳೆಯಬೇಕಾದರೆ, ನಾವು ಹೆಚ್ಚು ಸಹಾನುಭೂತಿಯನ್ನು ಬೆಳೆಸಿಕೊಳ್ಳಬಹುದು, ಮತ್ತು ಅದು ಅಷ್ಟು ಭಯಾನಕ ಅನುಭವವಲ್ಲ ಏಕೆಂದರೆ ನಾವು ಅವರ ವಿಷಯವಾಗಿ ಯೋಚಿಸುತ್ತೇವೆ, "ನನ್ನ" ವಿಷಯದಲ್ಲಿ ಅಲ್ಲ. 

ಒಳ್ಳೆಯ ಸುದ್ದಿ ಮತ್ತು ಕೆಟ್ಟ ಸುದ್ದಿಯನ್ನು ಕೇಳುವುದು 

ನಾಲ್ಕನೇ ಸೆಟ್ ಒಳ್ಳೆಯ ಮತ್ತು ಕೆಟ್ಟ ಸುದ್ದಿಗಳನ್ನು ಕೇಳುವುದಾಗಿರುತ್ತದೆ. ಇದು ಹಿಂದಿನಂತೆಯೇ ಇದೆ: ಎಲ್ಲವೂ ಯಾವಾಗಲೂ ಮೇಲಕ್ಕೆ ಮತ್ತು ಕೆಳಕ್ಕೆ ಹೋಗುತ್ತಿರುತ್ತದೆ. ಸಹಜವಾಗಿ, ನಾಲ್ಕು ಸೆಟ್‌ಗಳು ಪರಸ್ಪರ ಅತಿಕ್ರಮಿಸುತ್ತವೆ ಮತ್ತು "ವಿಶೇಷ ಏನೂ ಇಲ್ಲ" ಎಂಬ ತತ್ವವು ಈ ಎಂಟರಲ್ಲಿ ಪ್ರತಿಯೊಂದಕ್ಕೂ ಅನ್ವಯಿಸುತ್ತದೆ. ಒಳ್ಳೆಯ ಅಥವಾ ಕೆಟ್ಟ ಸುದ್ದಿಗಳನ್ನು ಕೇಳುವುದರಲ್ಲಿ ವಿಶೇಷವಾದ ಏನೂ ಇಲ್ಲ, ಅದು ಜೀವನದಲ್ಲಿ ಎಲ್ಲರಿಗೂ ಸಂಭವಿಸುತ್ತದೆ. 

ಈಗ, ಕೆಲವರು ಈ ರೀತಿಯ ತರಬೇತಿಯನ್ನು ಆಕ್ಷೇಪಿಸುತ್ತಾರೆ, ಅವರು ಭಾವನಾತ್ಮಕ ರೋಲರ್‌ಕೋಸ್ಟರ್‌ನಲ್ಲಿರಲು ಇಷ್ಟಪಡುತ್ತಾರೆ ಎಂದು ಘೋಷಿಸುತ್ತಾರೆ ಏಕೆಂದರೆ ನಿಮಗೆ ಏರಿಳಿತಗಳು ಇಲ್ಲದಿದ್ದರೆ, ನೀವು ನಿಜವಾಗಿಯೂ ಜೀವಂತವಾಗಿರುವುದಿಲ್ಲ. ಆದರೆ ಇದು ಸಹಾಯಕವಾದ ಮನೋಭಾವವೇ ಎಂದು ನಾವು ಪರಿಶೀಲಿಸಬೇಕಾಗಿದೆ. 

ಮೊದಲನೆಯದಾಗಿ, ನಾವು ಭಾವನಾತ್ಮಕ ರೋಲರ್‌ಕೋಸ್ಟರ್‌ನಲ್ಲಿದ್ದೇವೆಯೇ ಅಥವಾ ಇಲ್ಲವೇ, ನಾವು ಇನ್ನೂ ಜೀವಂತವಾಗಿದ್ದೇವೆ. ಅದು ಸ್ವಲ್ಪ ಮೂರ್ಖತನದ ಆಕ್ಷೇಪಣೆ. ಹಾಗಾದರೆ ನಾವು ಭಾವನಾತ್ಮಕ ರೋಲರ್‌ಕೋಸ್ಟರ್‌ನಲ್ಲಿರುವಾಗ ಏನಾಗುತ್ತದೆ? ಸರಿ, ನಾವು ನಿಜವಾಗಿಯೂ ತರ್ಕಬದ್ಧವಾಗಿ ಯೋಚಿಸುತ್ತಿಲ್ಲ ಏಕೆಂದರೆ ನಾವು ಭಾವನೆಗಳಲ್ಲಿ ಮುಳುಗುತ್ತೇವೆ. ನಾವು ಹೆಚ್ಚು ಶಾಂತವಾಗಿದ್ದರೆ, ನಮ್ಮ ಜೀವನವು ಅಷ್ಟು ನಾಟಕೀಯವಾಗಿರುವುದಿಲ್ಲ, ಮತ್ತು ನಾವು ಸಂದರ್ಭಗಳನ್ನು ಹೆಚ್ಚು ಉತ್ತಮ ರೀತಿಯಲ್ಲಿ ನಿಭಾಯಿಸಲು ಸಾಧ್ಯವಾಗುತ್ತದೆ. ನೀವು ಸ್ಪಷ್ಟವಾಗಿ ಯೋಚಿಸದಿದ್ದರೆ ಮತ್ತು ಕೋಪಗೊಂಡರೆ, ನಂತರ ನೀವು ವಿಷಾದಿಸುವಂತಹ ವಿಷಯಗಳನ್ನು ಹೇಳುತ್ತೀರಿ. ನಮ್ಮ ಭಾವನೆಗಳ ವಿಷಯದಲ್ಲಿ ಸಮಚಿತ್ತರಾಗಿರುವುದು ಎಂದರೆ ನಾವು ಈ ರೀತಿಯ ಕೆಲಸಗಳನ್ನು ಮಾಡುವುದಿಲ್ಲ. ಮತ್ತು ಪ್ರತಿಯೊಬ್ಬರೂ ಸಂತೋಷವನ್ನು ಬಯಸುವ ವಿಷಯದಲ್ಲಿ, ಈ ರೀತಿಯ ಶಾಂತ, ಶಾಂತಿಯುತ ಸಂತೋಷವು ನಾಟಕೀಯವಾದ "ಓಹ್ ಯಿಪ್ಪೀ!" ರೀತಿಯ ಸಂತೋಷಕ್ಕಿಂತ ಹೆಚ್ಚು ಸ್ಥಿರವಾಗಿರುತ್ತದೆ. 

"ವಿಶೇಷ ಏನೂ ಇಲ್ಲ" ಎಂಬ ಪರಿಕಲ್ಪನೆಯ ಚೌಕಟ್ಟು 

ನಾವು ಚರ್ಚಿಸುತ್ತಿರುವ ಈ ಮನೋಭಾವದ ಆಧಾರ ಅಥವಾ ಪರಿಕಲ್ಪನಾ ಚೌಕಟ್ಟನ್ನು ನೋಡೋಣ. ಇಲ್ಲಿ ಪರಿಕಲ್ಪನಾ ಆಲೋಚನೆಗಳನ್ನು ಅರ್ಥಮಾಡಿಕೊಳ್ಳುವುದು ಮುಖ್ಯ. ಪರಿಕಲ್ಪನಾ ಚಿಂತನೆ ಎಂದರೇನು? ಪರಿಕಲ್ಪನಾ ಚಿಂತನೆಯು ವಿಷಯಗಳನ್ನು ನೋಡುವುದು ಅಥವಾ ವಿಷಯಗಳನ್ನು ಒಂದು ವರ್ಗದ ಮೂಲಕ ಅನುಭವಿಸುವುದಾಗಿರುತ್ತದೆ, ಅದು "ವಿಶೇಷವಾದದ್ದು" ಆಗಿರಬಹುದು. ಇದು ಒಂದು ರೀತಿಯ ಮಾನಸಿಕ ಪೆಟ್ಟಿಗೆಯನ್ನು ಹೊಂದಿರುವಂತೆ, ಮತ್ತು ನಾವು ಏನನ್ನಾದರೂ ಅನುಭವಿಸಿದಾಗ, ಅದನ್ನು ನಾವು "ವಿಶೇಷವಾದದ್ದು” ಎಂಬ ಮಾನಸಿಕ ಪೆಟ್ಟಿಗೆಯಲ್ಲಿ ಇರಿಸುವಂತೆ ಆಗಿರುತ್ತದೆ. 

ನಾವು ಇದನ್ನು ಯಾವಾಗಲೂ ಮಾಡುತ್ತೇವೆ, ಏಕೆಂದರೆ ನಾವು ವಿಷಯಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಪ್ರಕ್ರಿಯೆಗೊಳಿಸಲು ಸಾಧ್ಯವಾಗುವ ವಿಧಾನ ಇದು. "ಮಹಿಳೆ" ಎಂಬ ಮಾನಸಿಕ ಪೆಟ್ಟಿಗೆ ಇದೆ. ನಾನು ಒಬ್ಬ ವ್ಯಕ್ತಿಯನ್ನು ನೋಡಿ ಅವಳನ್ನು "ಮಹಿಳೆ" ಎಂಬ ಮಾನಸಿಕ ಪೆಟ್ಟಿಗೆಯಲ್ಲಿ ಇರಿಸುತ್ತೇನೆ. ಈ ರೀತಿಯಾಗಿ, ನಾವು ಅನುಭವಿಸುವ ವಿವಿಧ ವಿಷಯಗಳನ್ನು ವಿಭಿನ್ನ ಮಾನಸಿಕ ಪೆಟ್ಟಿಗೆಗಳಲ್ಲಿ ಹಾಕಲು ಸಾಧ್ಯವಾಗುತ್ತದೆ. ಉದಾಹರಣೆಗೆ, ನಾವು "ಪುರುಷ" ಅಥವಾ "ಮಹಿಳೆ"ಯಲ್ಲಿ ಇರಿಸುವ ಅದೇ ವ್ಯಕ್ತಿ "ಯುವ ವ್ಯಕ್ತಿ" ಅಥವಾ "ವಯಸ್ಸಾದ ವ್ಯಕ್ತಿ" ಅಥವಾ "ಹೊಂಬಣ್ಣದ ಕೂದಲು" ಅಥವಾ "ಕಪ್ಪು ಕೂದಲು" ಗಳಲ್ಲಿಯೂ ಸೇರಿಸಬಹುದು. ಹಲವಾರು ಪೆಟ್ಟಿಗೆಗಳಿವೆ. 

ವಾಸ್ತವದಲ್ಲಿ, ವಸ್ತುಗಳು ಪೆಟ್ಟಿಗೆಗಳಲ್ಲಿ ಅಸ್ತಿತ್ವದಲ್ಲಿರುವುದಿಲ್ಲ. ಇದು ಸ್ಪಷ್ಟವಾಗಿದ್ದರೂ, ನಿಜವಾಗಿಯೂ ಅರ್ಥಮಾಡಿಕೊಳ್ಳುವುದು ಮತ್ತು ಜೀರ್ಣಿಸಿಕೊಳ್ಳುವುದು ತುಂಬಾ ಕಷ್ಟಕರವಾದ ವಿಷಯ. ಉದಾಹರಣೆಗೆ, ನಾವು ಯಾರನ್ನಾದರೂ "ಭಯಾನಕ ವ್ಯಕ್ತಿ" ಪೆಟ್ಟಿಗೆಯಲ್ಲಿ ಇರಿಸಬಹುದು, ಆದರೆ ಯಾರೂ ಭಯಾನಕ ವ್ಯಕ್ತಿಯಾಗಿ ಅಸ್ತಿತ್ವದಲ್ಲಿಲ್ಲ, ಏಕೆಂದರೆ ಅವರು ನಿಜವಾಗಿಯೂ ಹಾಗೆ ಅಸ್ತಿತ್ವದಲ್ಲಿದ್ದರೆ, ಎಲ್ಲರೂ ಅವರನ್ನು ಹಾಗೆ ನೋಡುತ್ತಾರೆ, ಮತ್ತು ಅವರು ಮಗುವಾಗಿದ್ದಾಗಿನಿಂದಲೂ ಹಾಗೆಯೇ ಇರಬೇಕಾಗಿತ್ತು. 

ಈ ಮಾನಸಿಕ ಪೆಟ್ಟಿಗೆಗಳು, ವಿಷಯಗಳನ್ನು ಅರ್ಥಮಾಡಿಕೊಳ್ಳಲು ನಮಗೆ ಸಹಾಯ ಮಾಡುತ್ತವೆ ಮತ್ತು ಇತರರ ಬಗೆಗಿನ ನಮ್ಮ ಮನೋಭಾವವು ನಾವು ವಸ್ತುಗಳನ್ನು ಇರಿಸುವ ಮಾನಸಿಕ ಪೆಟ್ಟಿಗೆಯ ಪ್ರಕಾರದಿಂದ ನಿರ್ಧರಿಸಲ್ಪಡುತ್ತದೆ. ಈ ಮಾನಸಿಕ ಪೆಟ್ಟಿಗೆಗಳು ಕೇವಲ ಮಾನಸಿಕ ರಚನೆಯಾಗಿದೆ ಮತ್ತು ವಾಸ್ತವವನ್ನು ಉಲ್ಲೇಖಿಸುವುದಿಲ್ಲ ಎಂಬುದನ್ನು ನಾವು ನೆನಪಿನಲ್ಲಿಡಬೇಕು - ಅಲ್ಲಿ ಯಾವುದೇ ಪೆಟ್ಟಿಗೆಗಳಿಲ್ಲ, ಅಲ್ಲವೇ?!

ಪೆಟ್ಟಿಗೆಗಳನ್ನು ನಾವು ಹೇಗೆ ರಚಿಸುತ್ತೇವೆ

ಈಗ ರೀತಿಯ ಮಾನಸಿಕ ಪೆಟ್ಟಿಗೆಗಿಂತ ರೀತಿಯ ಮಾನಸಿಕ ಪೆಟ್ಟಿಗೆಯಲ್ಲಿ ನಾವು ವಸ್ತುಗಳನ್ನು ಹೇಗೆ ಗುರುತಿಸುತ್ತೇವೆ ಮತ್ತು ಇಡುತ್ತೇವೆ ಎಂಬುದನ್ನು ನೋಡೋಣ. ಇದನ್ನು, ಇತರ ವಸ್ತುಗಳಿಂದ ಇದನ್ನು ನಿಜವಾಗಿಯೂ ಪ್ರತ್ಯೇಕಿಸುತ್ತದೆ ಎಂದು ನಾವು ಭಾವಿಸುವ ವಸ್ತುವಿನ ಒಂದು ನಿರ್ದಿಷ್ಟ ವೈಶಿಷ್ಟ್ಯದ ಆಧಾರದ ಮೇಲೆ ಮಾಡುತ್ತೇವೆ. ಇದನ್ನು "ವ್ಯಾಖ್ಯಾನಿಸುವ ಗುಣಲಕ್ಷಣ" ಎಂದು ಕರೆಯಬಹುದು, ಇದು ಅದರ ತಾಂತ್ರಿಕ ಪದವಾಗಿದೆ. ಒಂದು ಸರಳ ಉದಾಹರಣೆಯೆಂದರೆ, ನಾವು ವಸ್ತುಗಳನ್ನು "ಚೌಕ" ಎಂಬ ಪೆಟ್ಟಿಗೆಯಲ್ಲಿ ಇರಿಸಿದಾಗ, ಅದನ್ನು ವ್ಯಾಖ್ಯಾನಿಸುವ ಗುಣಲಕ್ಷಣ ಏನೆಂದು ನೋಡುವುದು. ಇದು ನಾಲ್ಕು ಸಮಾನ ಬದಿಗಳನ್ನು ಹೊಂದಿರಬೇಕು - ಆದ್ದರಿಂದ ಇದನ್ನು ಹೊಂದಿರುವ ವಸ್ತುಗಳನ್ನು ನಾವು "ಚೌಕ" ಎಂಬ ಮಾನಸಿಕ ಪೆಟ್ಟಿಗೆಯಲ್ಲಿ ಇಡುತ್ತೇವೆ. 

ಅದು ಸರಳ ವರ್ಗವಾಗಿತ್ತು, ಆದರೆ "ಕಿರಿಕಿರಿ ವ್ಯಕ್ತಿ" ವರ್ಗದ ಬಗ್ಗೆ ಏನು ಹೇಳುವುದು? "ನೀವು ಕಿರಿಕಿರಿಗೊಳಿಸುವ ವ್ಯಕ್ತಿ" ಎಂಬ ಈ ಪೆಟ್ಟಿಗೆಯಲ್ಲಿರುವ ವ್ಯಕ್ತಿಯ ವೈಶಿಷ್ಟ್ಯಗಳು ಯಾವುವು? ನಿಖರವಾಗಿ, ಕಿರಿಕಿರಿ ಉಂಟುಮಾಡುವ ವಿಷಯ ಯಾವುದು ಏನು ಎಂದು ನೋಡಲು ಪ್ರಯತ್ನಿಸುವುದು ಆಸಕ್ತಿದಾಯಕವಾಗಿದೆ. ನಿಮ್ಮ ತಲೆಯ ಸುತ್ತಲೂ ಝೇಂಕರಿಸುವ ನೊಣಕ್ಕೂ ಮತ್ತು ಈ ವ್ಯಕ್ತಿಯಲ್ಲೂ ಏನು ಸಾಮಾನ್ಯವಾಗಿದೆ, ಅವುಗಳನ್ನು "ಕಿರಿಕಿರಿ" ಪೆಟ್ಟಿಗೆಯಲ್ಲಿ ಇರಿಸುವಂತೆ ಮಾಡುವುದು ಏನು? 

ನಾನು ಹೇಳುವುದೇನೆಂದರೆ, ಎರಡೂ ನನ್ನ ಭಾವನಾತ್ಮಕ ಸಮತೋಲನ ಮತ್ತು ಮನಸ್ಸಿನ ಶಾಂತಿಯನ್ನು, ನನ್ನ ಶಾಂತ ಸ್ಥಿತಿಯನ್ನು ಕಳೆದುಕೊಳ್ಳುವಂತೆ ಮಾಡುವ ಏನನ್ನಾದರೂ ಮಾಡುತ್ತವೆ. ಆದ್ದರಿಂದ, ವಾಸ್ತವದಲ್ಲಿ, ನಾವು ಮಾನಸಿಕ ಪೆಟ್ಟಿಗೆಯನ್ನು ನನ್ನ ವಿಷಯದಲ್ಲಿ ವ್ಯಾಖ್ಯಾನಿಸುತ್ತಿದ್ದೇವೆ, ನಿಜವಾಗಿಯೂ ಅವುಗಳ ವಿಷಯದಲ್ಲಿ ಅಲ್ಲ, ಏಕೆಂದರೆ ನನಗೆ ಕಿರಿಕಿರಿ ಉಂಟುಮಾಡುವ ವಿಷಯವು ನಿಮಗೆ ಕಿರಿಕಿರಿಯನ್ನುಂಟು ಮಾಡದಿರಬಹುದು. ಮತ್ತು ನನ್ನ ಮನಸ್ಸಿನ ಶಾಂತಿಯನ್ನು ಕಳೆದುಕೊಳ್ಳುವ ವಿಷಯಗಳಿಗೆ ಸಂಬಂಧಿಸಿದಂತೆ, ಅದು ನಾನು ಸಂಪೂರ್ಣವಾಗಿ ಆಕರ್ಷಿತನಾಗುವ ವಿಷಯವೂ ಆಗಿರಬಹುದು, ಅದು ನನ್ನನ್ನು ಹುಚ್ಚನನ್ನಾಗಿ ಮಾಡುತ್ತದೆ. ಆದ್ದರಿಂದ ಆಸಕ್ತಿದಾಯಕ ವಿಷಯವೆಂದರೆ ನಾವು ವಿಷಯಗಳನ್ನು ಹೇಗೆ ವ್ಯಾಖ್ಯಾನಿಸುತ್ತೇವೆ ಮತ್ತು ಅವುಗಳನ್ನು ಯಾವ ಪೆಟ್ಟಿಗೆಗಳಲ್ಲಿ ಇಡುತ್ತೇವೆ ಎಂಬುದು ನಿಜವಾಗಿಯೂ ನಮ್ಮ ಬಗ್ಗೆ ನಾವು ಕಾಳಜಿ ವಹಿಸುವುದಾಗಿರುತ್ತದೆ.  

ನಂತರ ನಮ್ಮಲ್ಲಿ ಈ ಎಲ್ಲಾ ಭಾವನೆಗಳಿವೆ. ಈಗ ಅದು ಆಸಕ್ತಿದಾಯಕವಾಗಲು ಪ್ರಾರಂಭಿಸುತ್ತದೆ (ಬಹುಶಃ ಅದು ಈಗಾಗಲೇ ಆಸಕ್ತಿದಾಯಕವಾಗಿತ್ತು). ಹಾಗಾದರೆ ನಮಗೆ "ಸಂತೋಷ" ಎಂಬ ಮಾನಸಿಕ ಪೆಟ್ಟಿಗೆ ಇದೆ. ನೀವು "ಸಂತೋಷ" ಎಂಬ ಪೆಟ್ಟಿಗೆಯಲ್ಲಿ ವಿಷಯಗಳನ್ನು ಹೇಗೆ ಹಾಕುತ್ತೀರಿ? ಅದನ್ನು ಹೇಳುವುದು ತುಂಬಾ ಕಷ್ಟ. ಯಾರಾದರೂ ನಮ್ಮನ್ನು "ನೀವು ಸಂತೋಷವಾಗಿದ್ದೀರಾ?" ಎಂದು ಕೇಳುತ್ತಾರೆ ಮತ್ತು ನಮಗೆ ಏನು ಉತ್ತರಿಸಬೇಕೆಂದು ಸಹ ತಿಳಿದಿರುವುದಿಲ್ಲ. ನಾವು ನಮ್ಮನ್ನು ಕೇಳಿಕೊಂಡರೆ, "ನಾನು ಸಂತೋಷವಾಗಿದ್ದೇನೆಯೇ?" - ಅದರ ಅರ್ಥವೇನೆಂದು ನನಗೆ ನಿಜವಾಗಿಯೂ ತಿಳಿದಿಲ್ಲವಲ್ಲ? ಹಾಗಾದರೆ ಸಂತೋಷವಾಗಿರುವುದನ್ನು ವ್ಯಾಖ್ಯಾನಿಸುವ ಲಕ್ಷಣವೇನು? ನಾವು ಸಂತೋಷವಾಗಿರಲು ತುಂಬಾ ಬಯಸುತ್ತೇವೆ, ಆದರೆ ಸಂತೋಷ ಎಂದರೇನು ಎಂದು ನಮಗೆ ತಿಳಿದಿಲ್ಲ. ವಿಚಿತ್ರ, ಅಲ್ಲವೇ? ಅದರ ವ್ಯಾಖ್ಯಾನವೆಂದರೆ, ನೀವು ಅದನ್ನು ಅನುಭವಿಸಿದಾಗ, ನೀವು ಅದರಿಂದ ಬೇರ್ಪಡಲು ಬಯಸುವುದಿಲ್ಲ; ನೀವು ಅದನ್ನು ಮುಂದುವರಿಸಲು ಬಯಸುತ್ತೀರಿ. ಬೌದ್ಧ ಸಾಹಿತ್ಯದಲ್ಲಿ ನಾವು ಕಂಡುಕೊಳ್ಳುವ ಈ ವ್ಯಾಖ್ಯಾನ ನಮಗೆ ಸ್ವಲ್ಪ ಸಹಾಯ ಮಾಡುತ್ತದೆ.

ಫೇಸ್‌ಬುಕ್ ಬಗ್ಗೆ ಹೇಗೆ? "ಇಷ್ಟಪಡುವ" ವಿಷಯಗಳನ್ನು ನಾವು ಹೇಗೆ ವ್ಯಾಖ್ಯಾನಿಸುತ್ತೇವೆ? ಅದು ನಮ್ಮನ್ನು ನಗುವಂತೆ ಮಾಡುವ ಮತ್ತು ನಮಗೆ ಒಳ್ಳೆಯದನ್ನುಂಟುಮಾಡುವ ವಿಷಯವಾಗಿರಬಹುದು. ಆದರೆ ನೀವು ಇಡೀ ದಿನ ಅದನ್ನು ನೋಡಬೇಕಾದರೆ, ನಮಗೆ ಅದು ಇಷ್ಟವಾಗುವುದಿಲ್ಲ, ಅಲ್ಲವೇ? ಆದ್ದರಿಂದ ಅದು ವಿಚಿತ್ರ, ಅಲ್ಲವೇ? 

ನೀವು ಪರಿಕಲ್ಪನಾತ್ಮಕ ಚಿಂತನೆಯನ್ನು ಹೊಂದಿರುವಾಗ, ವರ್ಗವನ್ನು ಪ್ರತಿನಿಧಿಸುವ ಒಂದು ಮಾನಸಿಕ ಚಿತ್ರಣ ಯಾವಾಗಲೂ ಇರುತ್ತದೆ. ಆದ್ದರಿಂದ ನೀವು "ನಾಯಿ" ಎಂದು ಯೋಚಿಸಿದಾಗ, ನೀವು ನಾಯಿಯ ಮಾನಸಿಕ ಚಿತ್ರಣವನ್ನು ಹೊಂದಿರುತ್ತೀರಿ, ಅದು ಎಲ್ಲರಿಗೂ ವಿಭಿನ್ನವಾಗಿರುತ್ತದೆ ಎಂದು ನನಗೆ ಖಚಿತವಾಗಿದೆ. ಮಾದಕ ವ್ಯಕ್ತಿ ಅಥವಾ ಕಿರಿಕಿರಿಗೊಳಿಸುವ ವ್ಯಕ್ತಿಯನ್ನು ಪ್ರತಿನಿಧಿಸುವ ಮಾನಸಿಕ ಚಿತ್ರಣದೊಂದಿಗೆ ಇದು ಒಂದೇ ಆಗಿರುತ್ತದೆ.

ಹಾಗಾದರೆ ನಾನು ಇಷ್ಟಪಡುವುದನ್ನು ಪ್ರತಿನಿಧಿಸುವುದು ಯಾವುದು? ಅದು ಹೆಚ್ಚು ಕಷ್ಟ. ಆದರೆ ನಾವು ಮಾತನಾಡುವ ರೀತಿ ಹೀಗಿದೆ, ಅಲ್ಲವೇ, "ನನಗೆ ಈ ಶೈಲಿ ಇಷ್ಟ, ನನಗೆ ಈ ರೀತಿಯ ಆಹಾರ ಇಷ್ಟ, ನನಗೆ ಈ ರೀತಿಯ ಸಿನಿಮಾ ಇಷ್ಟ, ಆ ಹುಡುಗಿ ನನ್ನ ಪ್ರಕಾರವಲ್ಲ, ಆ ವ್ಯಕ್ತಿ ನನ್ನ ಪ್ರಕಾರ". ನಾನು ಇಷ್ಟಪಡುವುದನ್ನು ಪ್ರತಿನಿಧಿಸುವುದೇನು? ಫೇಸ್‌ಬುಕ್‌ನಲ್ಲಿರುವ ಚಿತ್ರದೊಂದಿಗೆ, ನಾವು ಅದನ್ನು ನಾವು ಇಷ್ಟಪಡುವ ಅನುಭವದೊಂದಿಗೆ ಹೋಲಿಸಿ, ನಂತರ ಅದನ್ನು ನಮ್ಮ "ಇಷ್ಟ"ದ ವರ್ಗಕ್ಕೆ ಸೇರಿಸುತ್ತೇವೆಯೇ? ಇದೆಲ್ಲವೂ ನಮ್ಮ ಮನಸ್ಸಿನ ಕಡೆಯಿಂದ ಬರುತ್ತದೆ, ವಸ್ತುವಿನಿಂದ ಅಲ್ಲ ಎಂಬುದನ್ನು ನಾವು ನೆನಪಿನಲ್ಲಿಡಬೇಕು. ವಸ್ತುವಿನೊಳಗಡೆಯಿಂದ ನಿಜವಾದ ಹೋಲಿಕೆಯಂತೆ, ಏನಾದರೂ ಹೊರಬರುತ್ತಿದ್ದರೆ, ಎಲ್ಲರೂ ಅದನ್ನು ಇಷ್ಟಪಡಬೇಕಿತ್ತು. ಆದ್ದರಿಂದ ಇದೆಲ್ಲವೂ ವ್ಯಕ್ತಿನಿಷ್ಠವಾಗಿದೆ. 

"ವಿಶೇಷ"ವನ್ನು ವ್ಯಾಖ್ಯಾನಿಸುವುದು 

ಮುಂದಿನ ಹಂತವೆಂದರೆ ಒಂದು ವಸ್ತವನ್ನು ವಿಶೇಷವಾಗಿಸುವುದನ್ನು ನೋಡುವುದು. ವಸ್ತುವಿನ ಬದಿಯಲ್ಲಿ ಏನಾದರೂ ಇದೆಯೇ ಅಥವಾ ನಾವೇ ವ್ಯಾಖ್ಯಾನಿಸಿರುವ "ವಿಶೇಷವಾದದ್ದೇನೋ" ಮಾನಸಿಕ ಪೆಟ್ಟಿಗೆಯೇ? ಏನನ್ನಾದರೂ ವಿಶೇಷವಾಗಿಸುವುದನ್ನು ನಾವು ನೋಡಿದಾಗ, ಇದು "ವಿಶೇಷವಲ್ಲ" ಎಂಬುದಕ್ಕೆ ಸೈದ್ಧಾಂತಿಕ ಆಧಾರವನ್ನು ನಾವು ಅರ್ಥಮಾಡಿಕೊಳ್ಳಲು ಪ್ರಾರಂಭಿಸುತ್ತೇವೆ. ವಸ್ತುವಿನ ಬದಿಯಲ್ಲಿ ಸಂಪೂರ್ಣವಾಗಿ ವಿಶೇಷವಾದದ್ದು ಏನೂ ಇಲ್ಲ. "ವಿಶೇಷ" ಎಂಬ ಯಾವುದೇ ಕಲ್ಪನೆಯು ಸಂಪೂರ್ಣವಾಗಿ ನಮ್ಮ ಸ್ವಂತ ಆಲೋಚನೆಗಳಿಂದ, ನಮ್ಮ ಸ್ವಂತ "ವಿಶೇಷ" ಎಂಬ ಮಾನಸಿಕ ಪೆಟ್ಟಿಗೆಯಿಂದ ಬರುತ್ತದೆ. ಇದು ನಾವು ವಿಷಯಗಳನ್ನು ಗ್ರಹಿಸುವ ಫಿಲ್ಟರ್ ಆಗಿದೆ: ಇದು ವಿಶೇಷ ಮತ್ತು ಅದು ಅಲ್ಲ. 

ನಂತರ ನಾವು ನಮ್ಮನ್ನೇ ಕೇಳಿಕೊಳ್ಳಬಹುದು, ನಾವು ವಿಶೇಷವನ್ನು ಹೇಗೆ ವ್ಯಾಖ್ಯಾನಿಸುತ್ತೇವೆ? ಏನಾದರೂ ವಿಶಿಷ್ಟವಾದಾಗ ಅದು ಸಂಭವಿಸುತ್ತದೆ ಎಂದು ಕೆಲವರು ಹೇಳುತ್ತಾರೆ: "ಇದು ನಿಜವಾಗಿಯೂ ವಿಶೇಷವಾದ ಚಿತ್ರಕಲೆ" ಅಥವಾ "ಇದು ವಿಶೇಷವಾದ ಊಟ". ಆದರೆ ಎಲ್ಲವೂ ವಿಶಿಷ್ಟವಲ್ಲವೇ? ಯಾವ ಎರಡು ವಿಷಯಗಳು ಒಂದೇ ಆಗಿರುವುದಿಲ್ಲ. ಎಲೆಕೋಸುಗಳ ರಾಶಿಯಲ್ಲಿರುವ ಪ್ರತಿಯೊಂದು ಎಲೆಕೋಸು ಒಂದು ವಿಶಿಷ್ಟ ಎಲೆಕೋಸು ಆಗಿರುತ್ತದೆ. 

ನಂತರ ನೀವು ಯೋಚಿಸಬಹುದು, "ವಿಷಯಗಳು ವಿಭಿನ್ನವಾಗಿರಲೇಬೇಕು. ವಿಶೇಷವಾಗಿರಲು, ಅವು ವಿಭಿನ್ನವಾಗಿರಬೇಕು." ಆದರೆ ಅವು ಎಷ್ಟು ವಿಭಿನ್ನವಾಗಿರಬೇಕು? ಸಾಮಾನ್ಯ ಮತ್ತು ವಿಶೇಷ ನಡುವಿನ ಗೆರೆಯನ್ನು ನಾವು ಹೇಗೆ ಮತ್ತು ಎಲ್ಲಿ ಎಳೆಯುತ್ತೇವೆ? ನಾವು ಹೇಗೆ ತಾನೆ ನಿರ್ಧರಿಸಬಹುದು? 

ನಂತರ ವಿಶೇಷವಾದದ್ದು ಹೊಸದಾಗಿರಬೇಕು ಎಂದು ನೀವು ಹೇಳಬಹುದು. ಆದರೆ ಅದು ನನಗೆ ಹೊಸದೇ ಅಥವಾ ವಿಶ್ವಕ್ಕೆ ಹೊಸದೇ? ನಾವು ಸಾಮಾನ್ಯವಾಗಿ ಎಲ್ಲವನ್ನೂ "ನಾನು" ಎಂಬ ಪದಗಳಲ್ಲಿ ವ್ಯಾಖ್ಯಾನಿಸುತ್ತೇವೆ ಮತ್ತು ನಾವು ಹೊಂದಿರುವ ಪ್ರತಿಯೊಂದು ಅನುಭವವು ಹೊಸದೇ, ಅಲ್ಲವೇ? ನಿನ್ನೆ ನಾನು ಅನುಭವಿಸಿದ ಅದೇ ವಿಷಯವನ್ನು ನಾನು ಅನುಭವಿಸುತ್ತಿಲ್ಲ. ಇಂದು ನಿನ್ನೆ ಅಲ್ಲ. ಆದ್ದರಿಂದ ಒಂದು ಅರ್ಥದಲ್ಲಿ, ಎಲ್ಲವೂ ವಿಶೇಷವಾಗಿದೆ, ಅಂದರೆ ವಾಸ್ತವವಾಗಿ ಯಾವುದೂ ವಿಶೇಷವಲ್ಲ. ಎಲ್ಲವೂ ವಿಶಿಷ್ಟ, ಎಲ್ಲವೂ ವಿಭಿನ್ನ, ಮತ್ತು ಎಲ್ಲವೂ ವೈಯಕ್ತಿಕ, ಆದ್ದರಿಂದ ನಾವು ಯಾವುದನ್ನೂ ವಿಶಿಷ್ಟ ಎಂದು ಹೇಳಲು ಸಾಧ್ಯವಿಲ್ಲ. ನಾವು ಏನನ್ನಾದರೂ ಇಷ್ಟಪಡುತ್ತೇವೆ ಎಂಬ ಕಾರಣಕ್ಕಾಗಿ ಅದು ವಿಶೇಷವಾಗಿದೆ ಎಂದು ಹೇಳಿದರೆ, ನಮಗೆ ಇಷ್ಟವಾದದ್ದು ಯಾವಾಗಲೂ ಬದಲಾಗುತ್ತಿರುತ್ತದೆ ಎಂದು ನಮಗೆಲ್ಲರಿಗೂ ತಿಳಿದಿದೆ; ನಾವು ಅದನ್ನು ಹೆಚ್ಚು ಪಡೆದರೆ, ಅದು ಇನ್ನು ಮುಂದೆ ನಮಗೆ ಇಷ್ಟವಾಗುವುದಿಲ್ಲ, ಮತ್ತು ಅದು ನಮ್ಮ ಬಳಿ ಹೆಚ್ಚು ಕಾಲ ಇದ್ದರೆ, ನಮಗೆ ಬೇಸರವಾಗುತ್ತದೆ. 

"ವಿಶೇಷ" ಪೆಟ್ಟಿಗೆಯಲ್ಲಿ ವಸ್ತುಗಳನ್ನು ಹಾಕುವ ನಮ್ಮ ಚಟವನ್ನು ಹೋಗಲಾಡಿಸಲು ನಾವು ಮಾಡಬೇಕಾದ ಕೆಲಸ ಇವು. "ನಾನು ಈಗ ಏನನ್ನು ಅನುಭವಿಸುತ್ತಿದ್ದೇನೆ ಎಂಬುದು ತುಂಬಾ ಮುಖ್ಯ." ಏಕೆ? ಅದು "ಪ್ರಮುಖ" ಪೆಟ್ಟಿಗೆಯಲ್ಲಿ ಏಕೆ ಇದೆ? ಆದ್ದರಿಂದ ನಾವು ಏನನ್ನು ಮಾಡಲು ಪ್ರಯತ್ನಿಸಬೇಕೆಂದರೆ, ಅನಗತ್ಯ ಮಾನಸಿಕ ಪೆಟ್ಟಿಗೆಗಳಲ್ಲಿ ಯಾವುದನ್ನೂ ನೋಡಬಾರದು. ಸಹಜವಾಗಿ ಉಪಯುಕ್ತ, ಅಗತ್ಯವಾದ ಪೆಟ್ಟಿಗೆಗಳಿವೆ; ಅವುಗಳಿಲ್ಲದೆ ನಾವು ಭಾಷೆಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಜನರು ಒಂದೇ ಪದವನ್ನು ಹೇಳಲು ವಿಭಿನ್ನ ಉಚ್ಚಾರಣೆಗಳು ಮತ್ತು ಪರಿಮಾಣಗಳೊಂದಿಗೆ ವಿಭಿನ್ನ ಶಬ್ದಗಳನ್ನು ಉಪಯೋಗಿಸುತ್ತಾರೆ, ಇದನ್ನು, ಪದಕ್ಕೆ ಮಾನಸಿಕ ಪೆಟ್ಟಿಗೆ ಇರುವುದರಿಂದ ಮಾತ್ರ ನಾವು ಅರ್ಥಮಾಡಿಕೊಳ್ಳಬಹುದು. 

ಆದ್ದರಿಂದ ನಾವು ಎಲ್ಲಾ ಪೆಟ್ಟಿಗೆಗಳನ್ನು ಎಸೆಯಲು ಸಾಧ್ಯವಿಲ್ಲ. ಆದರೆ ಕೆಲವು ಮಾನಸಿಕ ಪೆಟ್ಟಿಗೆಗಳು ಸಹಾಯಕವಾಗುವುದಿಲ್ಲ, ಏಕೆಂದರೆ ಅವು "ವಿಶೇಷವಾದ ವಿಷಯ”ಗಳಂತೆ ಸಂಪೂರ್ಣವಾಗಿ ವ್ಯಕ್ತಿನಿಷ್ಠವಾಗಿವೆ. ನೀವು ಅದನ್ನು ವಿಶ್ಲೇಷಿಸಲು ಪ್ರಾರಂಭಿಸಿದಾಗ, ಎಲ್ಲವೂ ನಮ್ಮ ಮನೋಭಾವದಲ್ಲಿರುತ್ತದೆ: ನಾವು ವಿಶೇಷವೆಂದು ನಂಬುವುದು, ವಿಶೇಷವಾದದ್ದು ಏನೆಂದು ನಾವು ವ್ಯಾಖ್ಯಾನಿಸಲು ಸಾಧ್ಯವಾಗದಿದ್ದರೂ ಸಹ. 

ಈ ರೀತಿಯಾಗಿ, ನಾವು ಸ್ವಯಂ ನಿಯಂತ್ರಣ ಮತ್ತು ಶಿಸ್ತನ್ನು ಬಳಸಿಕೊಂಡು "ನಾನು ವಿಷಯಗಳನ್ನು ವಿಶೇಷವಾದದ್ದೆಂದು ನೋಡುವುದಿಲ್ಲ" ಎಂದು ಹೇಳುತ್ತಿಲ್ಲ, ಏಕೆಂದರೆ ಅದನ್ನು ಕಾರ್ಯಗತಗೊಳಿಸುವುದು ತುಂಬಾ ಕಷ್ಟ. ಆದರೆ ತಿಳುವಳಿಕೆಯ ಮೂಲಕ, ಇದೆಲ್ಲವೂ ಕೇವಲ ಮಾನಸಿಕ ರಚನೆಯಾಗಿರುವುದರಿಂದ, ನಿಜವಾಗಿಯೂ ಏನೂ ವಿಶೇಷವಲ್ಲ ಎಂದು ನಾವು ನೋಡಬಹುದು. 

ಪರಿಕಲ್ಪನಾ ಚಿಂತನೆಯನ್ನು ಅರ್ಥಮಾಡಿಕೊಳ್ಳುವ ಮೂಲಕ ಮಾನಸಿಕ ತರಬೇತಿ

ಮನಸ್ಸಿನ ತರಬೇತಿಯ ಮೂಲಕ ನಾವು ನಮ್ಮ ವರ್ತನೆಗಳೊಂದಿಗೆ ಕೆಲಸ ಮಾಡುವ ಹಲವು ಹಂತಗಳಿವೆ. ನಾವು ವಿಭಿನ್ನ ಮಾನಸಿಕ ಪೆಟ್ಟಿಗೆಗಳ ಮೂಲಕ ವಿಷಯಗಳನ್ನು ಗ್ರಹಿಸಬಹುದು ಮತ್ತು ನಾವು ಗ್ರಹಿಸುವ ವಸ್ತುಗಳನ್ನು ಒಂದು ಪೆಟ್ಟಿಗೆಯಿಂದ ಇನ್ನೊಂದಕ್ಕೆ ಬದಲಾಯಿಸಬಹುದು. ಆದ್ದರಿಂದ ಯಾರನ್ನಾದರೂ "ಕಿರಿಕಿರಿ, ದೂರು ನೀಡುವ ವ್ಯಕ್ತಿ"ಯಲ್ಲಿ ಇರಿಸುವ ಬದಲು ನಾವು ಅವರನ್ನು "ಅತೃಪ್ತಿ, ಒಂಟಿ ವ್ಯಕ್ತಿ"ಯಲ್ಲಿ ಇರಿಸುತ್ತೇವೆ, ಅದು ಆ ವ್ಯಕ್ತಿಯೊಂದಿಗೆ ವ್ಯವಹರಿಸುವ ನಮ್ಮ ಸಂಪೂರ್ಣ ವಿಧಾನವನ್ನು ಸಂಪೂರ್ಣವಾಗಿ ಬದಲಾಯಿಸುತ್ತದೆ. ವ್ಯಕ್ತಿಯ ಬದಿಯಲ್ಲಿ ಅವರನ್ನು ಇದು ಅಥವಾ ಅದನ್ನಾಗಿ ಮಾಡುವ ಯಾವುದೇ ಅಂತರ್ಗತವಿಲ್ಲ ಎಂದು ನಾವು ಅರಿತುಕೊಳ್ಳುತ್ತೇವೆ, ಆದರೆ ನಾವು ಅವುಗಳನ್ನು ಹೇಗೆ ಗ್ರಹಿಸುತ್ತೇವೆ ಎಂಬುದರ ಬಗ್ಗೆ ನಮ್ಮ ಮನೋಭಾವವು ನಾವು ಅವುಗಳನ್ನು ಹೇಗೆ ಅನುಭವಿಸುತ್ತೇವೆ ಮತ್ತು ವ್ಯವಹರಿಸುತ್ತೇವೆ ಎಂಬುದರ ಮೇಲೆ ಪರಿಣಾಮ ಬೀರುತ್ತದೆ ಎಂದು ನಾವು ಅರಿತುಕೊಳ್ಳುತ್ತೇವೆ. 

"ವಿಶೇಷ" ನಂತಹ ಕೆಲವು ಮಾನಸಿಕ ವರ್ಗಗಳು ಸಹಾಯಕವಾಗುವುದಿಲ್ಲ. ವಿಶೇಷ ಜನರು ಮತ್ತು ವಿಶೇಷ ಸಂದರ್ಭಗಳು ಇತ್ಯಾದಿ. ಆದರೆ ಹುಟ್ಟುಹಬ್ಬಗಳು ಅಥವಾ ಹೊಸ ವರ್ಷವು ತುಂಬಾ ವಿಶೇಷವಾಗಿದೆ ಎಂದು ನಾವು ಭಾವಿಸಿದಾಗ ಅದು ಎಷ್ಟು ಅನಿಯಂತ್ರಿತವಾಗಿದೆ ಎಂದು ನೀವು ಯೋಚಿಸಿದ್ದೀರಾ? ಅದನ್ನು ವಿಶೇಷವಾಗಿಸುವುದು ಏನು? ಜನರು ಅದನ್ನು ವಿಶೇಷವೆಂದು ನಿರ್ಧರಿಸಿದ್ದಾರೆ. ಜನವರಿ 1 ರಂದು ವಿಶೇಷವಾಗಿ ವಿಶೇಷವಾದದ್ದೇನೂ ಇಲ್ಲ, ಮತ್ತು ದಿನಾಂಕವು ಖಗೋಳಶಾಸ್ತ್ರೀಯವಾಗಿ ಯಾವುದಕ್ಕೂ ಹೊಂದಿಕೆಯಾಗುವುದಿಲ್ಲ. ಭೂಮಿಯು ಸೂರ್ಯನ ಸುತ್ತ ಸುತ್ತುತ್ತದೆ, ಮತ್ತು ನೀವು "ಆಹ್! ಇದು ವರ್ಷದ ಮೊದಲ ದಿನ" ಎಂಬ ಆರಂಭವನ್ನು ಹೇಳಲು ಸಾಧ್ಯವಿಲ್ಲ. ಮೊದಲನೆಯದು ಇಲ್ಲ, ಅದಕ್ಕಾಗಿಯೇ ಪ್ರತಿಯೊಂದು ಸಂಸ್ಕೃತಿಯೂ ತನ್ನದೇ ಆದ ಹೊಸ ವರ್ಷವನ್ನು ಹೊಂದಿದೆ. ಅದರಲ್ಲಿ ವಿಶೇಷವಾದದ್ದೇನೂ ಇಲ್ಲ. ನೀವು ಹೊಸ ವರ್ಷವನ್ನು ಆಚರಿಸುತ್ತಿರುವ ಸಂಸ್ಕೃತಿಯಲ್ಲಿದ್ದರೆ, ದುಃಖಿಸುವ ಅಥವಾ ಅದು ಮೂರ್ಖತನ ಎಂದು ಭಾವಿಸುವ ಅಗತ್ಯವಿಲ್ಲ, ಆದರೆ ತುಂಬಾ ಉತ್ಸುಕರಾಗುವ ಮತ್ತು ಅದನ್ನು ದೊಡ್ಡ ವಿಷಯವಾಗಿ ಮಾಡುವ ಅಗತ್ಯವಿಲ್ಲ. 

ಪರಿಕಲ್ಪನಾ ಚಿಂತನೆಯು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಈ ಮೂಲಭೂತ ಸ್ವರೂಪವನ್ನು ನಾವು ಅರ್ಥಮಾಡಿಕೊಂಡಾಗ, ಅದು ಉಪಯುಕ್ತವಾದಾಗ ನಾವು ಅದನ್ನು ಬಳಸಬಹುದು ಮತ್ತು ಇಲ್ಲದಿದ್ದಾಗ ಅದನ್ನು ಬಿಡಬಹುದು. 

ಕೊನೆಯದಾಗಿ, ನಾವು ನಮ್ಮ ವರ್ತನೆಗಳನ್ನು ಬದಲಾಯಿಸುವಾಗ ಮತ್ತು ಸುಧಾರಿಸುವಾಗ, ಸ್ವಲ್ಪ ಪ್ರೇರಣೆ ಮತ್ತು ಸಾಕಷ್ಟು ತಾಳ್ಮೆ ಇರಬೇಕು. ಪುನರಾವರ್ತಿತ ಅಭ್ಯಾಸದ ಮೂಲಕ ನಾವು ಬದಲಾವಣೆಯೊಂದಿಗೆ ಹೆಚ್ಚು ಪರಿಚಿತರಾಗುತ್ತೇವೆ, ಅದು ನಮ್ಮ ದೈನಂದಿನ ಜೀವನದಲ್ಲಿ ಹೆಚ್ಚು ಸ್ವಾಭಾವಿಕವಾಗಿ ಬರುತ್ತದೆ. ನಾವು ಅತೃಪ್ತಿ ಅನುಭವಿಸಿದಾಗ ನಾವು, "ಹೇ, ನಾನು ಕೇವಲ ನನ್ನ ಬಗ್ಗೆ, ನನ್ನ ಬಗ್ಗೆ, ನನ್ನ ಬಗ್ಗೆ ಯೋಚಿಸುತ್ತಿದ್ದೇನೆ" ಎಂದು ನಮ್ಮನ್ನು ನೆನಪಿಸಿಕೊಳ್ಳಬೇಕು. 

ವರ್ತನೆ ತರಬೇತಿಯು ದೀರ್ಘ ಪ್ರಕ್ರಿಯೆಯಾಗಿದೆ, ಆದರೆ ಬಹಳ ಯೋಗ್ಯವಾಗಿದೆ. 

ಸಾರಾಂಶ 

ನಾವು ಪ್ರತಿದಿನ ಬೆಳಿಗ್ಗೆ ಒಂದೇ ಗುರಿಯೊಂದಿಗೆ ಎಚ್ಚರಗೊಳ್ಳುತ್ತೇವೆ: ನಮಗೆ ಉತ್ತಮ, ಸಂತೋಷದ ಭವಿಷ್ಯ ಬೇಕು. ಇದರಲ್ಲಿ, ನಾವೆಲ್ಲರೂ ಒಂದೇ. "ನಾನು" ಬ್ರಹ್ಮಾಂಡದ ಕೇಂದ್ರ ಎಂದು ಯೋಚಿಸುವುದರಲ್ಲಿ ನಾವೆಲ್ಲರೂ ಸಮಾನರು, ಇದು ನಮಗೆ ಹೇಳಲಾಗದ ಸಮಸ್ಯೆಗಳನ್ನು ಉಂಟುಮಾಡುವ ಸತ್ಯ. "ನನ್ನನ್ನು" ನೋಡಿಕೊಳ್ಳುವುದರಿಂದ ಸ್ವಯಂ-ಆರಾಧನೆ ತುಂಬಾ ಆಕರ್ಷಕವಾಗಿ ತೋರುತ್ತದೆ, ಆದರೆ ನಾವು ನಿಜವಾಗಿಯೂ ಅತೃಪ್ತಿಯ ಕಡೆಗೆ ಓಡುತ್ತೇವೆ ಮತ್ತು ನಾವು ಬಯಸುವ ಸಂತೋಷದಿಂದ ದೂರ ಹೋಗುತ್ತೇವೆ. ನಾವು ವಾಸ್ತವವನ್ನು ಅರ್ಥಮಾಡಿಕೊಳ್ಳಲು ಪ್ರಾರಂಭಿಸಿದಾಗ, ವಸ್ತುಗಳು ನಿಜವಾಗಿಯೂ ಇರುವ ರೀತಿಯಲ್ಲಿ, ಇದೆಲ್ಲವೂ ತಿರುಗುತ್ತದೆ. ಜೀವನವು ಮೇಲಕ್ಕೆ ಮತ್ತು ಕೆಳಕ್ಕೆ ಹೋಗುತ್ತಿರುತ್ತದೆ, ಮತ್ತು ಅದು ಯಾವಾಗಲೂ ಹಾಗೆಯೇ ಇರುತ್ತದೆ; ನಾವು ಇದನ್ನು ನಿಯಂತ್ರಿಸಲು ಸಾಧ್ಯವಿಲ್ಲ, ಆದರೆ ನಾವು ನಿಯಂತ್ರಿಸಬಹುದಾದದ್ದು ನಮ್ಮ ಸ್ವಂತ ಮನೋಭಾವವನ್ನು: ನಾವು ಅನುಭವಿಸುವ ವಿಷಯಗಳಿಗೆ ಪ್ರತಿ ಕ್ಷಣವೂ ಹೇಗೆ ಪ್ರತಿಕ್ರಿಯಿಸುತ್ತೇವೆ. ಪ್ರಯತ್ನದಿಂದ, ನಾವು ನಮ್ಮ ಜೀವನವನ್ನು ಸಂತೋಷದ ಜೀವನಗಳಾಗಿ ಪರಿವರ್ತಿಸಬಹುದು, ಬಾಹ್ಯ ಸಂದರ್ಭಗಳು ಏನೇ ಇರಲಿ, ಆಗ ನಾವು ನಮ್ಮ ಬಗ್ಗೆ ಮತ್ತು ಇತರರ ಬಗ್ಗೆ ನಿಜವಾಗಿಯೂ ಕಾಳಜಿ ವಹಿಸುತ್ತೇವೆ. 

Top