ವಿವರಣೆ
ನಮ್ಮ ಜೀವನವು ಯಾವ ದಿಕ್ಕಿನಲ್ಲಿಯೂ ಮುಂದುವರೆಯುತ್ತಿಲ್ಲ ಎಂದು ನಮ್ಮಲ್ಲಿ ಹಲವರು ಭಾವಿಸಬಹುದು. ನಮ್ಮ ಉದ್ಯೋಗಗಳು ನಮಗೆ ಅರ್ಥಹೀನವೆನಿಸುತ್ತಿರಬಹುದು, ಅಥವಾ ನಾವು ನಿರುದ್ಯೋಗಿಯಾಗಿರಬಹುದು ಮತ್ತು ಸುಧಾರಣೆಗೆ ಯಾವುದೇ ನಿರೀಕ್ಷೆಗಳನ್ನು ಕಾಣದೇ ಇರಬಹುದು. ನಾವು ಇನ್ನೂ ಶಾಲೆಯಲ್ಲಿರಬಹುದು ಮತ್ತು ನಮ್ಮ ಶಿಕ್ಷಣದ ಮೌಲ್ಯ ಮತ್ತು ಅರ್ಥವನ್ನು ಪ್ರಶ್ನಿಸಬಹುದು. ವಿಷಯಗಳು ಹದಗೆಡುತ್ತಿವೆಯೆಂದು ಭಯಬಿದ್ದು ನಾವು ಖಿನ್ನತೆಗೆ ಒಳಗಾಗಬಹುದು. ಇದರೊಂದಿಗೆ, ನಾವು ಏನಾದರೂ ಅರ್ಥಪೂರ್ಣವಾದದ್ದನ್ನು ಮಾಡಲು ಬಯಸುತ್ತೇವೆ ಮತ್ತು ಜಗತ್ತಿನಲ್ಲಿ ಕೆಲವು ಸಕಾರಾತ್ಮಕ ಬದಲಾವಣೆಗಳನ್ನು ತಂದು, ಅದನ್ನು ಇತರರೊಂದಿಗೆ ಹಂಚಿಕೊಳ್ಳಲು ನಾವು ಬಯಸುತ್ತೇವೆ. ಬಹಳಷ್ಟು ಹಣವನ್ನು ಸಂಪಾದಿಸುವುದು ಮತ್ತು ಹೇರಳವಾಗಿ ವಸ್ತುಗಳನ್ನು ಖರೀದಿಸುವುದು ನಮ್ಮಲ್ಲಿರುವ ಅರ್ಥದ ಅಗತ್ಯವನ್ನು ಪೂರೈಸುವುದಿಲ್ಲ ಎಂದು ನಮ್ಮಲ್ಲಿ ಹಲವರು ತಿಳಿಯುತ್ತೇವೆ.
ಬೌದ್ಧಧರ್ಮವು ಈ ಸಮಸ್ಯೆಯನ್ನು ಸುರಕ್ಷಿತ ನಿರ್ದೇಶನದ ಪರಿಕಲ್ಪನೆಯೊಂದಿಗೆ ಅರ್ಥೈಸುತ್ತದೆ, ಇದನ್ನು ಸಾಮಾನ್ಯವಾಗಿ ಆಶ್ರಯ ಎಂದು ಅನುವಾದಿಸಲಾಗುತ್ತದೆ. ನಮ್ಮ ಬಳಿಯಿರುವ ಅಮೂಲ್ಯವಾದ ಮಾನವ ಜೀವನವು ಖಂಡಿತವಾಗಿಯೂ ಸಾವಿನೊಂದಿಗೆ ಕೊನೆಗೊಳ್ಳುತ್ತದೆ ಮತ್ತು ನಮ್ಮ ಜೀವನದಲ್ಲಿ ನಾವು ಸಕಾರಾತ್ಮಕವಾದ ಕಾರ್ಯಗಳನ್ನು ಮಾಡದಿದ್ದರೆ ಭಯಾನಕ ಪುನರ್ಜನ್ಮಗಳನ್ನು ಎದುರಿಸಬೇಕಾಗುತ್ತದೆ ಎಂಬುದನ್ನು ನಾವು ಅರಿತುಕೊಂಡಾಗ, ನಾವು ಅದನ್ನು ಹೇಗೆ ತಡೆಯಬಹುದು ಎಂದು ಯೋಚಿಸುತ್ತೇವೆ. ಹಾಗೆಯೇ, ನಾವು ಪುನರ್ಜನ್ಮದ ಪರಿಕಲ್ಪನೆಯನ್ನು ಒಪ್ಪದಿದ್ದರೂ, ನಮಗೆ ಈಗಿರುವ ಅಮೂಲ್ಯ ಜೀವನವನ್ನು ಪ್ರಶಂಸಿಸಬಹುದು ಮತ್ತು ನಮ್ಮ ಜೀವನವು ಎಷ್ಟು ಅರ್ಥಹೀನವಾಗಿದೆ ಎಂದು ವಿಷಾದದಿಂದ ಸಾಯುವುದು ಎಷ್ಟು ಭೀಕರವಾಗಿರುತ್ತದೆ ಎಂದು ತಿಳಿದರೆ, ಈ ಜೀವಿತಾವಧಿಯಲ್ಲಿ ವಿಷಯಗಳು ಹದಗೆಡಬಹುದು ಎಂದು ನಾವು ಭಯಪಡುತ್ತೇವೆ.
ಬೌದ್ಧಧರ್ಮವು ನೀಡುವ ಸುರಕ್ಷಿತ ದಿಕ್ಕನ್ನು ತ್ರಿರತ್ನಗಳಿಂದ ಸೂಚಿಸಲಾಗುತ್ತದೆ. ಇದರಲ್ಲಿ ಮುಖ್ಯವಾದದ್ದು ಧರ್ಮ - ನಿಜವಾದ ನಿಲುಗಡೆಗಳು ಮತ್ತು ನಿಜವಾದ ಮನಸ್ಸಿನ ಮಾರ್ಗಗಳು - ಅಂದರೆ, ನಮ್ಮ ನ್ಯೂನತೆಗಳನ್ನು ನಿವಾರಿಸಲು ಮತ್ತು ಉತ್ತಮ ಗುಣಗಳನ್ನು ಅಭಿವೃದ್ಧಿಪಡಿಸುವ ಮೂಲಕ ನಮ್ಮ ಎಲ್ಲಾ ಸಾಮರ್ಥ್ಯಗಳನ್ನು ಅರಿತುಕೊಳ್ಳಲು ನಾವು ಶ್ರಮ ಪಡುವುದು. ನ್ಯೂನತೆಗಳೆಂದರೆ ಗೊಂದಲದ ಭಾವನೆಗಳು, ಏಕಾಗ್ರತೆಯ ಕೊರತೆ, ಸ್ವಯಂ-ಆರಾಧನೆ, ಪರಿಣಾಮಕಾರಿಯಾಗಿ ಸಂವಹಿಸಲಾಗದೇ ಇರುವುದು, ಇತ್ಯಾದಿ. ಒಳ್ಳೆಯ ಗುಣಗಳೆಂದರೆ ಮೂಲಭೂತ ಮಾನವ ಮೌಲ್ಯಗಳಾದ ದಯೆ, ಸಹಾನುಭೂತಿ, ತಾಳ್ಮೆ, ತಿಳುವಳಿಕೆ, ಕ್ಷಮೆ, ಪ್ರಾಮಾಣಿಕತೆ, ಇತ್ಯಾದಿ ಜೊತೆಗೆ ನೈತಿಕತೆಯ ಪ್ರಜ್ಞೆ, ಏಕಾಗ್ರತೆ ಮತ್ತು ಒಳನೋಟವನ್ನೂ ಒಳಗೊಂಡಿರುತ್ತದೆ. ಬುದ್ಧರಂತೆ ಪೂರ್ಣವಾಗಿ ಸಾಧಿಸಿದಂತೆ ಮತ್ತು ಸಾಕಾರಗೊಂಡ ಗುರುಗಳು ಭಾಗಶಃ ಸಾಧಿಸಿದಂತೆ, ಇವುಗಳನ್ನು ಸಾಧಿಸಲು ಶ್ರಮ ಪಟ್ಟರೆ, ಅದು ನಮ್ಮ ಜೀವನಕ್ಕೆ ಸ್ಪಷ್ಟವಾದ ಅರ್ಥವನ್ನು ನೀಡುತ್ತದೆ.
ನಾವು ಇತರರೊಂದಿಗೆ ವಿಷಯಗಳನ್ನು ಹಂಚಿಕೊಳ್ಳಲು ಇಷ್ಟಪಟ್ಟರೆ, ಅದರ ಅರ್ಥ ಕೇವಲ ಸಾಮಾಜಿಕ ಮಾಧ್ಯಮಗಳಲ್ಲಿ ನಮ್ಮ ಯಶಸ್ಸನ್ನು ಪೋಸ್ಟ್ ಮಾಡುವುದಲ್ಲ, ಬದಲಿಗೆ ಬೆಳೆಯುತ್ತಿರುವ ಆತ್ಮ ವಿಶ್ವಾಸದೊಂದಿಗೆ ನಾವು ನಮ್ಮ ಅಭಿವೃದ್ಧಿಯನ್ನು ಇತರರೊಂದಿಗೆ ಹಂಚಿಕೊಳ್ಳುತ್ತೇವೆ, ಅವರಿಗೆ ನಾವು ಹೇಗಾದರೂ, ಚಿಕ್ಕ-ಪುಟ್ಟ ಅಥವಾ ದೊಡ್ಡದಾಗಿ ಸಹಾಯ ಮಾಡುತ್ತೇವೆ. ಹೀಗಾಗಿ, ನಮ್ಮ ಜೀವನದಲ್ಲಿ ಸುರಕ್ಷಿತ ದಿಕ್ಕನ್ನು ಪಾಲಿಸುವುದು, ವಿಷಯಗಳು ಹದಗೆಡುವ ಭಯ, ವಿಷಯಗಳು ಹದಗೆಡದಂತೆ ನಮ್ಮ ಮೇಲೆ ನಾವೇ ಶ್ರಮಪಟ್ಟು ಸುರಕ್ಷಿತ ದಿಕ್ಕಿನೆಡೆಗೆ ನಡೆಯುತ್ತಿರುವ ವಿಶ್ವಾಸವನ್ನು, ನಾವು ನಮ್ಮ ಸಾಧನೆಗಳನ್ನು ಹಂಚಿಕೊಳ್ಳುವ ಮೂಲಕ ಸಹಾಯ ಮಾಡಿ, ಕಾಳಜಿ ಮತ್ತು ಸಹಾನುಭೂತಿಯನ್ನು ಬೆಳೆಸಿಕೊಳ್ಳುವುದನ್ನು ಆಧರಿಸಿರುತ್ತದೆ.
ಧ್ಯಾನ
- ಉಸಿರಾಟದ ಮೇಲೆ ಕೇಂದ್ರೀಕರಿಸುವ ಮೂಲಕ ಶಾಂತರಾಗಿರಿ.
- ನಿಮ್ಮ ಜೀವನದ ಬಗ್ಗೆ ಯೋಚಿಸಿ ಮತ್ತು ನೀವು ಅದನ್ನು ಅರ್ಥಪೂರ್ಣವಾಗಿ ಕಾಣುತ್ತೀರೋ ಇಲ್ಲವೋ ಎಂಬುದರ ಮೌಲ್ಯಮಾಪನ ಮಾಡಿ.
- ನಿಮ್ಮ ಜೀವನದ ವಿಷಯಗಳನ್ನು ಇತರರೊಂದಿಗೆ ಹಂಚಿಕೊಳ್ಳಲು ನೀವು ಹೇಗೆ ಇಷ್ಟಪಡುತ್ತೀರಿ ಎಂಬುದರ ಕುರಿತು ಯೋಚಿಸಿ
- ನಿಮ್ಮ ನ್ಯೂನತೆಗಳನ್ನು ನಿವಾರಿಸಲು ಮತ್ತು ನಿಮ್ಮ ಸಾಮರ್ಥ್ಯಗಳನ್ನು ಅರಿತುಕೊಳ್ಳಲು ಶ್ರಮ ಪಡುವುದರಿಂದ ನಿಮ್ಮ ಜೀವನಕ್ಕೆ ಸಿಗುವ ಅರ್ಥದ ಬಗ್ಗೆ ಯೋಚಿಸಿ ಮತ್ತು ಕೇವಲ ಹರಟೆಯಲ್ಲದೆ ಇತರರೊಂದಿಗೆ ಅರ್ಥಪೂರ್ಣವಾದದ್ದನ್ನು ಹಂಚಿಕೊಳ್ಳಲು ನಿಮಗೆ ಹೇಗೆ ಅನುವು ಮಾಡಿಕೊಡುತ್ತದೆ, ಮತ್ತು ನೀವು ಹಂಚಿಕೊಂಡಿದ್ದು– ಕೇವಲ ಆನ್‌ಲೈನ್‌ನಲ್ಲಿ ಮಾತ್ರವಲ್ಲ, ಬದಲಿಗೆ ವೈಯಕ್ತಿಕ ಸಂವಹನದಲ್ಲಿ – ಅವರಿಗೆ ಒಂದು ರೀತಿಯಲ್ಲಿ ಸಹಾಯವಾಗಿರುವುದು ಅದ್ಭುತವಾದ ವಿಷಯ ಎಂಬುದರ ಕುರಿತು ಯೋಚಿಸಿ.
- ನಿಮ್ಮ ಜೀವನದಲ್ಲಿನ ಅರ್ಥಪೂರ್ಣ ನಿರ್ದೇಶನದ ಕೊರತೆಯಿಂದಾಗಿ ನೀವು ಒಂದು ಬಂಡೆಯಿಂದ ಬಿದ್ದು, ಆಳವಾದ ಖಿನ್ನತೆಗೆ ಒಳಗಾಗುವುದನ್ನು ಕಲ್ಪಿಸಿಕೊಳ್ಳಿ.
- ನಿಮ್ಮ ಮೇಲೆ ನೀವೇ ಶ್ರಮಪಡುವುದರಿಂದ, ಹೇಗೆ ಈ ಖಿನ್ನತೆಯಿಂದ ನಿಮ್ಮನ್ನು ಉಳಿಸಿಕೊಳ್ಳಬಹುದು ಮತ್ತು ಹೇಗೆ ಇದು ನೀವು ಇತರರೊಂದಿಗೆ ಹಂಚಿಕೊಳ್ಳಬಹುದಾದ ಅದ್ಭುತ ಕೊಡುಗೆಯಾಗಿದೆ ಎಂದು ಯೋಚಿಸಿ.
- ನಿಮ್ಮ ಜೀವನದಲ್ಲಿ ಆ ದಿಕ್ಕನ್ನು ಪಾಲಿಸಲು ನಿರ್ಧರಿಸಿ.
- ಇದನ್ನೇ ಮತ್ತೊಮ್ಮೆ ಕಲ್ಪಿಸಿಕೊಳ್ಳಿ, ಆದರೆ ಈಗ ನೀವು ಆ ಬಂಡೆಯಿಂದ ಬೀಳುವ ಅಂಚಿನಲ್ಲಿದ್ದೀರಿ.
- ಇದನ್ನೇ ಮತ್ತೊಮ್ಮೆ ಕಲ್ಪಿಸಿಕೊಳ್ಳಿ, ಆದರೆ ಈಗ ನೀವು ಬಂಡೆಯಿಂದ ಸ್ವಲ್ಪ ದೂರದಲ್ಲಿರುವಿರಿ, ಆದರೆ ನಿರಂತರವಾಗಿ ಅದಕ್ಕೆ ಹತ್ತಿರವಾಗುತ್ತಿರುವಿರಿ.
ಸಾರಾಂಶ
ನಮ್ಮ ಜೀವನವು ವಾಡಿಕೆಗೆ ಒಗ್ಗಿ, ನೀರಸ ಮತ್ತು ಅರ್ಥಹೀನವಾಗಿದೆ ಎಂದು ನಾವು ಕಂಡುಕೊಂಡಾಗ, ನಾವು ಪೂರ್ವಭಾವಿ ವಿಧಾನವನ್ನು ತೆಗೆದುಕೊಳ್ಳಬೇಕಾಗುತ್ತದೆ. ನಾವು, ನಮಗೆ ಮಾತ್ರವಲ್ಲದೆ ಇತರರಿಗೂ ಅರ್ಥಪೂರ್ಣವಾಗುವಂತಹ ಸಕಾರಾತ್ಮಕ ದಿಕ್ಕನ್ನು ನಮ್ಮ ಜೀವನದಲ್ಲಿ ಅನುಸರಿಸಬೇಕು. ಈ ನಿರ್ದೇಶನವು ನಮ್ಮ ನ್ಯೂನತೆಗಳನ್ನು ನಿವಾರಿಸಲು ಮತ್ತು ನಮ್ಮ ಸಕಾರಾತ್ಮಕ ಸಾಮರ್ಥ್ಯವನ್ನು ಅರಿತುಕೊಳ್ಳಲು ನಮ್ಮ ಮೇಲೆ ನಾವೇ ಶ್ರಮಪಡುವುದಾಗಿದೆ. ನಮ್ಮ ಅಂತಿಮ ಗುರಿಯು, ಬುದ್ಧರಂತೆ ಪೂರ್ಣವಾಗಿ ಸಾಧಿಸುವಂತೆ ಅಥವಾ ಹೆಚ್ಚು ಅರಿತ ಸಾಕಾರಗೊಂಡ ಜೀವಿಗಳಂತೆ ಭಾಗಶಃ ಸಾಧಿಸುವಂತೆ ಇರಲಿ ಅಥವಾ ಇರದಿರಲಿ - ಈ ಪ್ರಯಾಣವು ನಮ್ಮ ಜೀವನದ ಗುಣಮಟ್ಟವನ್ನು ಹೆಚ್ಚಾಗಿ ಸುಧಾರಿಸುತ್ತದೆ.