ಧ್ಯಾನಗಳು
ಲೇಖನ 1 ರಲ್ಲಿ 13
ಮುಂದೆ Arrow right

ಮಾರ್ಗದರ್ಶಿ ಧ್ಯಾನಗಳನ್ನು ಹೇಗೆ ಬಳಸುವುದು

ಈ ನಿರ್ದೇಶಿತ ಧ್ಯಾನಗಳನ್ನು ಅನುಸರಿಸುವ ಮೂಲಕ, ನಾವು ಉಪಯುಕ್ತಕಾರಿ ಅಭ್ಯಾಸಗಳನ್ನು ಬೆಳೆಸಿಕೊಳ್ಳಬಹುದು.
Meditatation how to use the guided meditations

ಗುರಿ - ಟಿಬೆಟಿಯನ್ ಬೌದ್ಧ ಸಂಪ್ರದಾಯದಲ್ಲಿ ಧ್ಯಾನ ಎಂದರೇನು ಎಂಬುದನ್ನು ಕಂಡುಕೊಳ್ಳಿ; ಅದನ್ನು ಹೇಗೆ ಅಭ್ಯಾಸ ಮಾಡಬೇಕೆಂದು ಕಲಿಯಿರಿ; ಮತ್ತು ತರಬೇತಿಗಾಗಿ ಮಾರ್ಗದರ್ಶನವನ್ನು ಪಡೆಯಿರಿ 

ಪ್ರೇಕ್ಷಕರು - ಎಲ್ಲಾ ಹಂತಗಳಲ್ಲಿರುವವರು, ಎಲ್ಲಾ ವಯಸ್ಸಿನವರು 

ರಚನೆ 

  • ವಿವರಣೆ (ಸಮಸ್ಯೆ, ಕಾರಣ, ಉದಾಹರಣೆ, ವಿಧಾನ) 
  • ಧ್ಯಾನ (ಮುಖ್ಯ ಪದಗಳೊಂದಿಗೆ ಮಾರ್ಗದರ್ಶನ) 
  • ಸಾರಾಂಶ 

ಎಲ್ಲಿ ಅಭ್ಯಾಸ ಮಾಡಬೇಕು - ಶಾಂತ, ಸ್ವಚ್ಛ ಮತ್ತು ಗಲೀಜಿಲ್ಲದ ಯಾವುದೇ ಜಾಗದಲ್ಲಿ ಮಾಡಬಹುದು. 

ಯಾವಾಗ ಅಭ್ಯಾಸ ಮಾಡಬೇಕು - ಬೆಳಿಗ್ಗೆ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೊದಲು. ಅದು ಸಾಧ್ಯವಾಗದಿದ್ದರೆ, ದಿನ ಮುಗಿದ ನಂತರ, ಮಲಗುವ ಮೊದಲು ಮಾಡಬಹುದು. 

ಕುಳಿತುಕೊಳ್ಳುವುದು ಹೇಗೆ – ಪದ್ಮಾಸನ ಹಾಕಿ, ಬಹಳಾ ಎತ್ತರವಿರದ, ಬಹಳಾ ತಗ್ಗಿರದ, ಬಹಳಾ ಮೃದು ಅಥವಾ ಗಟ್ಟಿಯಿರದ ಕುಶನ್ ಮೇಲೆ ಕುಳಿತುಕೊಳ್ಳಿ. ಅದು ಸಾಧ್ಯವಾಗದಿದ್ದರೆ, ನೇರ ಬೆನ್ನಿರುವ ಕುರ್ಚಿಯ ಮೇಲೆ ಕುಳಿತುಕೊಳ್ಳಿ. ಎರಡೂ ಸಂದರ್ಭಗಳಲ್ಲಿ, ನಿಮ್ಮ ಬೆನ್ನನ್ನು ನೇರವಾಗಿ ಇರಿಸಿ ಮತ್ತು ನಿಮ್ಮ ಕೈಗಳನ್ನು ನಿಮ್ಮ ತೊಡೆಯಲ್ಲಿ ಮಡಚಿಟ್ಟುಕೊಳ್ಳಿ. ನಿಮ್ಮ ಕಣ್ಣುಗಳನ್ನು ಅರ್ಧ ತೆರೆದು, ಸಡಿಲವಾಗಿ ಕೇಂದ್ರೀಕರಿಸಿ, ನೆಲದ ಕಡೆಗೆ ನೋಡುವುದು ಉತ್ತಮ. 

ಎಷ್ಟು ಬಾರಿ ಧ್ಯಾನ ಮಾಡಬೇಕು – ವೆಬ್‌ಸೈಟ್‌ನಲ್ಲಿ ಪಟ್ಟಿ ಮಾಡಲಾದ ಕ್ರಮವನ್ನು ಅನುಸರಿಸಿ, ಪ್ರತಿಯೊಂದು ಮಾರ್ಗದರ್ಶಿ ಧ್ಯಾನದಲ್ಲಿ, ದಿನಕ್ಕೆ ಒಮ್ಮೆಯಾದರೂ, ಸಾಧ್ಯವಾದಲ್ಲಿ ಎರಡು ಬಾರಿ (ಬೆಳಿಗ್ಗೆ ಕೆಲಸದ ಮೊದಲು ಮತ್ತು ರಾತ್ರಿ ಮಲಗುವ ಮುನ್ನ), ಪ್ರತಿದಿನ ಕನಿಷ್ಠ ಒಂದು ವಾರದವರೆಗೆ ತೊಡಗಿಸಿಕೊಳ್ಳಬೇಕು. ಯಾವುದೇ ಸಮಯದಲ್ಲಾದರೂ, ನಿಮಗೆ ಅಗತ್ಯವೆನಿಸಿದಾಗ, ನೀವು ಮೊದಲು ಮಾಡಿದ ಧ್ಯಾನವನ್ನು ಪುನರಾವರ್ತಿಸಬಹುದು. 

ಹೆಚ್ಚಿನ ಸೂಚನೆಗಳಿಗಾಗಿ – 

[ನೋಡಿ: ಧ್ಯಾನ ಮಾಡುವುದು ಹೇಗೆ]

Top